ಗಂಗೊಳ್ಳಿಯಲ್ಲಿ ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರು ಪಾಲು

author-image
Ganesh
Updated On
ಗಂಗೊಳ್ಳಿಯಲ್ಲಿ ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರು ಪಾಲು
Advertisment
  • ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ದುರ್ಘಟನೆ
  • ಕಡಲಿನ ಅಬ್ಬರಕ್ಕೆ ಟ್ರಾಲ್ ದೋಣಿ ಮಗುಚಿ ಅನಾಹುತ
  • ನೀರು ಪಾಲಾದ ಮೀನುಗಾರರಿಗಾಗಿ ಹುಡುಕಾಟ

ಉಡುಪಿ: ಭಾರೀ ಗಾಳಿ-ಮಳೆಯಿಂದಾಗಿ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ದೋಣಿಯೊಂದು ಮುಳುಗಿ ಮೂವರು ಮೀನುಗಾರರು ನಾಪತ್ತೆ ಆಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯ ಮಡಿ ಲೈಟ್ ಹೌಸ್ ಬಳಿ ನಡೆದಿದೆ.

ಲೋಹಿತ್ ಖಾರ್ವಿ (38), ಸುರೇಶ್ ಖಾರ್ವಿ (45), ಜಗನ್ನಾಥ್ ಖಾರ್ವಿ (43), ಸಂತೋಷ್ ಖಾರ್ವಿ (35) ದೋಣಿ ಮುಳುಗಿದ ಪರಿಣಾಮ ನೀರಿಗೆ ಬಿದ್ದಿದ್ದಾರೆ. ಅವರಲ್ಲಿ ಸಂತೋಷ್ ಖಾರ್ವಿ ಅನ್ನೋರು ರಕ್ಷಣೆ ಆಗಿದೆ. ಇನ್ನುಳಿದ ಮೂವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ಗಂಡನನ್ನು ನದಿಗೆ ತಳ್ಳಿದ ಆರೋಪ ಕೇಸ್​ಗೆ ಟ್ವಿಸ್ಟ್.. ಸತ್ಯ ಬಿಚ್ಚಿಟ್ಟ ಪತ್ನಿ-VIDEO

ಕರಾವಳಿಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಡಲು ಕೂಡ ಪ್ರಕ್ಷುಬ್ಧಗೊಂಡಿದೆ. ಗಾಳಿ, ಮಳೆಯ ನಡುವೆಯೂ ಮೀನುಗಾರಿಕೆಗೆ ತೆರಳಿದ್ದರು. ಮೀನು ಹಿಡಿದು ಸಮುದ್ರದಿಂದ ವಾಪಸ್ ಬರುತ್ತಿದ್ದ ವೇಳೆ ದೋಣಿ ಮಗುಚಿ ಅನಾಹುತ ಸಂಭವಿಸಿದೆ.

ನಾಪತ್ತೆಯಾಗಿರುವ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಕರಾವಳಿ ಕಾವಲು ಪಡೆ, ಗಂಗೊಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಗಂಡನ ನದಿಗೆ ತಳ್ಳಿದ ಆರೋಪ ಕೇಸ್​.. ಗದ್ದೆಮ್ಮ ಬಗ್ಗೆ ತಾತಪ್ಪನ ಸಹೋದರನಿಂದ ಸ್ಫೋಟಕ ಹೇಳಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment