/newsfirstlive-kannada/media/post_attachments/wp-content/uploads/2025/05/pulse-oximeter.jpg)
ಕೊರೊನಾ ಸೋಂಕಿನ ಪ್ರಕರಣಗಳು ದೇಶದಲ್ಲಿ ಮತ್ತೆ ಉಲ್ಬಣಿಸಿವೆ. ಮುಂಬೈ, ಪುಣೆ, ಗುರುಗ್ರಾಮ್, ಚೆನ್ನೈ, ದೆಹಲಿಯಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗಿವೆ. ಇನ್ನು, ಕರ್ನಾಟಕದ ಹಲವು ಭಾಗಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದೆ.
ಬೆಂಗಳೂರು ಒಂದರಲ್ಲೇ ಸಕ್ರಿಯ ಪ್ರಕರಣಗಳ ಸಂಖ್ಯೆ 32 ಇದೆ. ಹೀಗಾಗಿ ಕರ್ನಾಟಕ ಸರ್ಕಾರ ಕೊರೊನಾ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲು ಶುರುಮಾಡಿದೆ. ನಾಳೆಯಿಂದ ರಾಜ್ಯದಲ್ಲಿ ಟೆಸ್ಟಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಅಲ್ಲದೇ, ಕೊರೊನಾ ಜಾಗೃತಿ ಕುರಿತ ಕಾರ್ಯಕ್ರಮಗಳು ಕೂಡ ಮತ್ತೆ ಆ್ಯಕ್ಟೀವ್ ಆಗಲಿವೆ. ಕೊರೊನಾ ಮತ್ತೆ ಬಂದಿರುವ ಹಿನ್ನೆಲೆಯಲ್ಲಿ ಕೆಲವು ವೈದ್ಯಕೀಯ ಉಪಕರಣಗಳಿಗೂ ಡಿಮ್ಯಾಂಡ್ ಜಾಸ್ತಿ ಆಗಿದೆ. ಕೆಲವು ಸಣ್ಣ ವೈದ್ಯಕೀಯ ಉಪಕರಣಗಳಿಂದ ಮನೆಯಲ್ಲಿಯೇ ಕೂತು ನೀವು ಕೊರೊನಾ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.
ಪಲ್ಸ್ ಆಕ್ಸಿಮೀಟರ್
ಪಲ್ಸ್ ಆಕ್ಸಿಮೀಟರ್ (Pulse oximeter) ಕೊರೊನಾ ಸಂದರ್ಭದಲ್ಲಿ ತುಂಬಾನೇ ಪಾತ್ರ ನಿರ್ವಹಿಸುತ್ತದೆ. ಯಾಕೆಂದರೆ ಕೊರೊನಾ ಸೋಂಕು ಬಂದಾಗ ದೇಹದಲ್ಲಿನ ಆಕ್ಸಿಜನ್ ಪ್ರಮಾಣ ಏಕಾಏಕಿ ಕಡಿಮೆ ಆಗಿರುತ್ತದೆ. ಇದನ್ನು ತಿಳಿದುಕೊಳ್ಳಲು ಈ ಸಾಧನೆ ಉಪಯೋಗ ಆಗಲಿದೆ. ಜೊತೆಗೆ ದೇಹದ ನಾಡಿ ಮಿಡಿತದ ರೇಟ್ ತಿಳಿಯಲಿದೆ. ಈ ಸಾಧನವನ್ನು ಹತ್ತಿರದ ಮೆಡಿಕಲ್ ಸ್ಟೋರ್ ಅಥವಾ ಆನ್ಲೈನ್ನಲ್ಲೂ ಕೊಂಡುಕೊಳ್ಳಬಹುದು. ಇದರ ಆರಂಭಿಕ ಬೆಲೆ 395 ರೂಪಾಯಿಯಿಂದ 700 ರೂಪಾಯಿ ಇದೆ.
ಇದನ್ನೂ ಓದಿ: ಸುಂದರ ಬೆಂಗಳೂರನ್ನು ಮತ್ತಷ್ಟು ಅಂದವಾಗಿಡಲು ರೋಬೋ.. ಮಳೆ ಬಂದ್ರೂ ಚಿಂತೆ ಮಾಡಬೇಕಾಗಿಲ್ಲ..\
ಥರ್ಮಾಮೀಟರ್
ಥರ್ಮಾಮೀಟರ್ (Thermometer) ಸಹಾಯದಿಂದ ದೇಹದಲ್ಲಿನ ಉಷ್ಣತೆಯನ್ನು ನೀವು ಪತ್ತೆ ಹಚ್ಚಬಹುದು. ಕೊರೊನಾದ ಮುಖ್ಯ ಲಕ್ಷಣಗಳಲ್ಲಿ ಜ್ವರ ಕೂಡ ಒಂದು. ನಿಯಮಿತವಾಗಿ ಈ ಮಾಪನದಿಂದ ಪರಿಶೀಲನೆ ಮಾಡುವ ಮೂಲಕ ದೇಹದ ಉಷ್ಣತೆಯ ಮಟ್ಟವನ್ನು ತಿಳಿದುಕೊಳ್ಳಬಹುದು. ಇದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬಹುದು. ಬೇರೆಯವರಿಗೆ ಹರಡುವುದನ್ನ ತಪ್ಪಿಸಬಹುದಾಗಿದೆ. ಈ ಸಾಧನವು ಫ್ಲಿಪ್‌ಕಾರ್ಟ್ ಅಥವಾ ಅಮೆಜಾನ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಆರಂಭಿಕ ಬೆಲೆ 649 ರೂಪಾಯಿಯಿಂದ 11,778 ರೂಪಾಯಿ ವರೆಗೆ ಲಭ್ಯ ಇದೆ.
ನೆಬ್ಯುಲೈಜರ್
ಕೊರೊನಾ ಸೋಂಕಿನ ಸಮಯದಲ್ಲಿ ಕೆಮ್ಮು, ಶೀತ ಮತ್ತು ಉಸಿರಾಟದ ತೊಂದರೆ ಆಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವೈದ್ಯರು ಹೆಚ್ಚಾಗಿ ಸ್ಟೀಮ್ ತೆಗೆದುಕೊಂಡು ನೆಬ್ಯುಲೈಜರ್ (Nebulizer) ಬಳಸಲು ಶಿಫಾರಸು ಮಾಡುತ್ತಾರೆ. ನೆಬ್ಯುಲೈಜರ್ ಯಂತ್ರಗಳು ಮಾರುಕಟ್ಟೆಯಲ್ಲಿ 499 ರಿಂದ 7860 ರೂ.ಗಳವರೆಗೆ ಲಭ್ಯವಿದೆ. ಇವುಗಳನ್ನು ಬಳಸುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: ಮತ್ತೆ ವಕ್ಕರಿಸಿದ ಕೊರೊನಾ.. ಮಾಸ್ಕ್ ಧರಿಸಿದ ಸಿಎಂ ಸಿದ್ದರಾಮಯ್ಯ; ನಾಳೆಯಿಂದ ಟೆಸ್ಟಿಂಗ್ ಆರಂಭ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ