/newsfirstlive-kannada/media/post_attachments/wp-content/uploads/2025/04/Virat-kohli-3.jpg)
ದೆಹಲಿಯಲ್ಲಿ ದರ್ಬಾರ್ ನಡೆಸೋ ಡೆಲ್ಲಿ ಕ್ಯಾಪಿಟಲ್ಸ್ ಲೆಕ್ಕಾಚಾರ ಕಂಪ್ಲೀಟ್ ಉಲ್ಟಾ ಆಯ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳ ಬೊಂಬಾಟ್ ಸ್ಪೆಲ್ಗೆ ಡೆಲ್ಲಿ ಬ್ಯಾಟರ್ಗಳು ಪರದಾಡಿಬಿಟ್ರು. DC ನೀಡಿದ 163 ರನ್ಗಳ ಗುರಿಯನ್ನು, ರಜತ್ ಪಡೆ ಕೇವಲ 18.3 ಓವರ್ನಲ್ಲಿ ಮುಟ್ಟಿತು. ಬೆನ್ನಲ್ಲೇ ಆರ್ಸಿಬಿ ಅಭಿಮಾನಿಗಳು ಖುಷಿ ಸುದ್ದಿ ಸಿಕ್ಕಿತು.
ನಾವೇ ನಂಬರ್ ಒನ್
ಪ್ಲೇ-ಆಫ್ ಕನಸು ಕಾಣ್ತಿದ್ದ ಆರ್ಸಿಬಿ ಅಭಿಮಾನಿಗಳು ಮೂರು ಗುಡ್ನ್ಯೂಸ್ ಸಿಕ್ಕಿದೆ. ಡೆಲ್ಲಿ ವಿರುದ್ಧ ಗೆದ್ದ ಬೆನ್ನಲ್ಲೇ, ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ಗೆ ಚಮಕ್ ಕೊಟ್ಟಿರುವ ಆರ್ಸಿಬಿ ಮೊದಲ ಸ್ಥಾನಕ್ಕೇರಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುತ್ತಿದ್ದ ಗುಜರಾತ್ ಟೈಟನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ಗೆ ಬಿಗ್ ಶಾಕ್ ನೀಡಿದೆ.
ಇದನ್ನೂ ಓದಿ: 6, 6, 6, 6 ! ಟೀಕೆಗಳಿಗೆ ಉತ್ತರ ಕೊಟ್ಟ ಪಾಂಡ್ಯ.. ವಿಸ್ಫೋಟಕ ಬ್ಯಾಟಿಂಗ್ ಅಬ್ಬರ ಹೇಗಿತ್ತು..?
ಕೊಹ್ಲಿ ನಂಬರ್ 1
ಐಪಿಎಲ್ 2025ನಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಬೀಟ್ ಮಾಡಿರುವ ಕೊಹ್ಲಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. 10 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, 443 ರನ್ಸ್ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ 427 ರನ್ಗಳೊಂದಿಗೆ ಎರಡನೇ ಸ್ಥಾನ ಹಾಗೂ ಸಾಯಿ ಸುದರ್ಶನ್ (417 ರನ್ಸ್) ಮೂರನೇ ಸ್ಥಾನದಲ್ಲಿದ್ದಾರೆ.
ಹೇಜಲ್ವುಡ್ ನಂಬರ್ 1
ಕೊಹ್ಲಿ ಮಾತ್ರವಲ್ಲ ಆರ್ಸಿಬಿ ತಂಡದ ಪ್ರಮುಖ ಬೆನ್ನೆಲುವು ಜೋಶ್ ಹೇಜಲ್ವುಡ್ ಸಹ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ರನ್ ಗಳಿಸೋದ್ರಲ್ಲಿ ಮೊದಲ ಸ್ಥಾನದಲ್ಲಿದ್ರೆ, ಹೇಜಲ್ವುಡ್ ವಿಕೆಟ್ ಪಡೆಯೋದ್ರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 10 ಇನ್ನಿಂಗ್ಸ್ನಲ್ಲಿ ಹೇಜಲ್ವುಡ್, ಒಟ್ಟು 18 ವಿಕೆಟ್ ಪಡೆದುಕೊಂಡಿದ್ದಾರೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ, 16 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಸೂರ್ಯಗೆ ಬಿಗ್ ಶಾಕ್ ಕೊಟ್ಟ ವಿರಾಟ್ ಕೊಹ್ಲಿ.. ನಿನ್ನೆಯ ಪಂದ್ಯದಲ್ಲಿ ಆಗಿದ್ದೇನು ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್