/newsfirstlive-kannada/media/post_attachments/wp-content/uploads/2025/03/TEAM-INDIA-10.jpg)
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಗೆಲುವಿನೊಂದಿಗೆ ಟೀಮ್ ಇಂಡಿಯಾ ಚಾಂಪಿಯನ್ ಆಗಿದೆ. ಭಾನುವಾರ ದುಬೈನಲ್ಲಿ ನಡೆದ ಫೈನಲ್‌ನಲ್ಲಿ ರೋಹಿತ್ ಪಡೆ 4 ವಿಕೆಟ್‌ಗಳಿಂದ ಜಯಗಳಿಸಿತು. ಈ ಗೆಲುವಿನೊಂದಿಗೆ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಮೊದಲ ತಂಡವಾಗಿ ಹೊರ ಹೊಮ್ಮಿದೆ.
ಸೌರವ್ ಗಂಗೂಲಿ ನಾಯಕತ್ವದಲ್ಲಿ ಮೊದಲ ಬಾರಿಗೆ ಮತ್ತು ಧೋನಿ ನಾಯಕತ್ವದಲ್ಲಿ ಎರಡನೇ ಬಾರಿಗೆ ಭಾರತ ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೂರನೇ ಬಾರಿಗೆ ಭಾರತ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಇದನ್ನೂ ಓದಿ: ನಿಜಕ್ಕೂ ಚಹಾಲ್ ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ರಾ? ಅಷ್ಟಕ್ಕೂ ಈ ಚೆಲುವೆ ಯಾರು?
ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಆಟಗಾರರಿಗೆ ಪದಕಗಳು ಮತ್ತು ಬಿಳಿ ಬಣ್ಣದ ಬ್ಲೇಜರ್ಸ್ ತೊಡಿಸಿ ಐಸಿಸಿ ಗೌರವಿಸಿದೆ. ಈ ಪಂದ್ಯಾವಳಿಯಲ್ಲಿ ಮೂವರು ಭಾರತೀಯ ಆಟಗಾರರು ಒಂದೇ ಒಂದು ಪಂದ್ಯವನ್ನು ಆಡದಿದ್ದರೂ ಚಾಂಪಿಯನ್ ಆದರು. ಒಟ್ಟು 15 ತಂಡದ ಸದಸ್ಯರಿಗೆ ಪದಕಗಳನ್ನು ನೀಡಲಾಯಿತು. ಅವರಲ್ಲಿ ಮೂವರು ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ.
ರಿಷಭ್ ಪಂತ್
ಟೀಮ್ ಇಂಡಿಯಾದ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್. ಇವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅವಕಾಶ ಪಡೆಯಲಿಲ್ಲ. ವಿಕೆಟ್ ಕೀಪಿಂಗ್ ಸ್ಲಾಟ್ನಲ್ಲಿ ತಂಡದ ಹಿರಿಯ ಆಟಗಾರ ಕೆಎಲ್ ರಾಹುಲ್ಗೆ ಅವಕಾಶ ಸಿಕ್ಕಿತ್ತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಎಡಗೈ ಬೌಲರ್ ಆಡ್ತಿರೋದು ಪಂತ್‌ಗೆ ಮೈನಸ್ ಆಯಿತು.
ಅರ್ಷ್ದೀಪ್ ಸಿಂಗ್
ಅರ್ಷ್ದೀಪ್ ಸಿಂಗ್ ಆಡುವ ಅವಕಾಶ ಸಿಗುವ ನಿರೀಕ್ಷೆಯಲ್ಲಿ ಇದ್ದರು. ದುಬೈನ ಮೈದಾನ ಸ್ಪಿನ್ ಟ್ರ್ಯಾಕ್ ಆಗಿದ್ದರಿಂದ ರೋಹಿತ್ ನೇತೃತ್ವದ ಟೀಂ ಇಂಡಿಯಾ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಶಮಿ ತಂಡದಲ್ಲಿ ಹಿರಿಯ ಬೌಲರ್ ಆಗಿ ಎಂಟ್ರಿ ನೀಡಿದ್ದರಿಂದ ಅರ್ಷ್ದೀಪ್ ಸಿಂಗ್ಗೆ ಆಡುವ ಅವಕಾಶ ಸಿಗಲಿಲ್ಲ.
ಇದನ್ನೂ ಓದಿ: ನಾಳೆಯಿಂದ ಬೆಂಗಳೂರಲ್ಲಿ RCB ಕ್ಯಾಂಪ್ ಆರಂಭ.. ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!
ವಾಷಿಂಗ್ಟನ್ ಸುಂದರ್
ಸ್ಪಿನ್ನರ್‌ಗಳ ಬಲದಿಂದ ಟೀಮ್ ಇಂಡಿಯಾ ಟ್ರೋಫಿ ಗೆದ್ದಿದೆ. ಇಬ್ಬರು ಕ್ವಾಲಿಟಿ ಸ್ಪಿನ್ನರ್‌ಗಳು ಮತ್ತು ಇಬ್ಬರು ಸ್ಪಿನ್ ಆಲ್‌ರೌಂಡರ್‌ಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿದೆ. ಹೀಗಿದ್ದೂ ಭಾರತೀಯ ತಂಡದಲ್ಲಿ ಮತ್ತೊಬ್ಬ ಸ್ಪಿನ್ ಆಲ್‌ರೌಂಡರ್ ಇದ್ದರು. ಅವರೇ ವಾಷಿಂಗ್ಟನ್ ಸುಂದರ್. ಅವರಿಗೆ ಆಡುವ ಅವಕಾಶ ಸಿಗಲಿಲ್ಲ.
ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗುಂಪು ಹಂತದ ಮೂರು ಪಂದ್ಯಗಳನ್ನು ಆಡಿತು. ಒಂದು ಸೆಮಿಫೈನಲ್, ಫೈನಲ್ ಸೇರಿ ಒಟ್ಟು ಐದು ಪಂದ್ಯ ಆಡಿತು. ಐದು ಪಂದ್ಯಗಳಲ್ಲಿ ಒಂದೇ ಒಂದು ಬದಲಾವಣೆ ಮಾಡಲಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಹರ್ಷಿತ್ ರಾಣಾ ಕಣಕ್ಕಿಳಿದಿದ್ದರು. ಮೂರನೇ ಪಂದ್ಯದಿಂದ ರಾಣಾ ಬದಲಿಗೆ ವರುಣ್ ಚಕ್ರವರ್ತಿ ಕಣಕ್ಕಿಳಿದಿದ್ದರು. 15 ಸದಸ್ಯರ ತಂಡದಲ್ಲಿ ಕೇವಲ 12 ಜನರಿಗೆ ಮಾತ್ರ ಆಡಲು ಅವಕಾಶ ಸಿಕ್ಕಿತು. ಉಳಿದ ಮೂವರು ಆಡದಿದ್ದರೂ ತಂಡವನ್ನು ಪ್ರತಿನಿಧಿಸುತ್ತಾರೆ. ವಾಷಿಂಗ್ಟನ್ ಸುಂದರ್ ಬದಲಿ ಫೀಲ್ಡರ್ ಆಗಿ ಕೊಡುಗೆ ನೀಡಿದರು. ಈ ಮೂವರು ಪಂದ್ಯಗಳನ್ನು ಆಡದಿದ್ದರೂ ತಂಡದಲ್ಲಿ ಅವರ ಉಪಸ್ಥಿತಿ ಬಹಳ ಮುಖ್ಯವಾಗಿದೆ. ಆದ್ದರಿಂದ ಅವರು ನಮ್ಮ ಚಾಂಪಿಯನ್ಸ್.
ಇದನ್ನೂ ಓದಿ: ಹೊಸ ಹುಡುಗಿ ಜೊತೆ ಚಹಾಲ್.. ಮೌನ ಮುರಿದ ಮಾಜಿ ಪತ್ನಿ ಧನಶ್ರೀ ವರ್ಮಾ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ