newsfirstkannada.com

ಅಮೆರಿಕಾದಲ್ಲಿ ಸೇತುವೆಯಿಂದ 20 ಅಡಿ ಕೆಳಗೆ ಬಿದ್ದ ಕಾರು; ಮೂವರು ಭಾರತೀಯ ಯುವತಿಯರು ಸಾವು

Share :

Published April 27, 2024 at 3:15pm

Update April 27, 2024 at 6:09pm

    ಸೇತುವೆ ಮೇಲಿನಿಂದ ಬಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ

    ಮೇಲಿನಿಂದ ಬಿದ್ದ ರಭಸಕ್ಕೆ ಕಾರು ತುಂಡು, ತುಂಡಾಗಿದೆ

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಡ್ರೈವರ್​

ಅತಿ ವೇಗದಲ್ಲಿ ಹೋಗುತ್ತಿದ್ದ ಕಾರೊಂದು ಬ್ರಿಡ್ಜ್​ ಮೇಲಿಂದ 20 ಅಡಿ ಕೆಳಕ್ಕೆ ಬಿದ್ದ ಪರಿಣಾಮ ಮೂವರು ಭಾರತೀಯ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದು ಅಮೆರಿಕದ ದಕ್ಷಿಣ ಕೆರೊಲಿನಾ ರಾಜ್ಯದ ಗ್ರೀನ್‌ವಿಲ್ಲೆ ಕೌಂಟಿ ಬಳಿ ಈ ಆಕ್ಸಿಡೆಂಟ್ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಮೂವರು ಮಹಿಳೆಯರನ್ನು ಗುಜರಾತ್‌ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಎಂದು ಗುರುತಿಸಲಾಗಿದೆ. ಎಸ್‌ಯುವಿ ಕಾರಿನ ಚಾಲಕ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸ್ಟೈಲ್​ ಆಗಿ ಕೂಲ್​ಡ್ರಿಂಕ್ಸ್​ ಕುಡಿಯುವುದಕ್ಕಿಂತ 1 ಎಳೆನೀರು ಕುಡಿಯಿರಿ.. ತೆಂಗಿನ ನೀರಿನ ಎನರ್ಜಿ ಗೊತ್ತಾ?

ಇದನ್ನೂ ಓದಿ: ಊಟ ಬಿಟ್ಟು ದಿನಕ್ಕೆ ಒಬ್ಬೊಬ್ರು ಒಂದೊಂದು ಖರ್ಜೂರ ತಿನ್ನುತ್ತಿದ್ದ ಫ್ಯಾಮಿಲಿ​; ಇಬ್ಬರು ಸಹೋದರರು ಸಾವು

ಕಾರು ಅತಿವೇಗವಾಗಿ ಚಾಲನೆ ಮಾಡಿದ್ದರಿಂದ ಅಪಘಾತ ಸಂಭವಿಸಿ ಸೇತುವೆ ಮೇಲಿನ 4 ಲೈನ್​ ರಸ್ತೆಗಳನ್ನು ದಾಟಿ 20 ಅಡಿ ಕೆಳಕ್ಕೆ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಆನ್ ಸ್ಪಾಟ್ ಮೃತಪಟ್ಟಿದ್ದಾರೆ. ಡ್ರೈವರ್​​ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಬಿದ್ದ ರಭಸಕ್ಕೆ ಎಲ್ಲ ಪೀಸ್ ಪೀಸ್ ಆಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಪೊಲೀಸರು ಕಾರಿನ ವೇಗವನ್ನು ಸಿಸಿಟಿವಿಯಲ್ಲಿ ಪೊಲೀಸರು ಗಮನಿಸಿದಾಗ ನಿಗದಿತ ವೇಗಕ್ಕಿಂತ ಭಾರೀ ವೇಗದಲ್ಲೇ ಕಾರು ಚಲಿಸಿದ್ದರಿಂದ ಇಂತಹ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕಾದಲ್ಲಿ ಸೇತುವೆಯಿಂದ 20 ಅಡಿ ಕೆಳಗೆ ಬಿದ್ದ ಕಾರು; ಮೂವರು ಭಾರತೀಯ ಯುವತಿಯರು ಸಾವು

https://newsfirstlive.com/wp-content/uploads/2024/04/CAR-1-1.jpg

Load More