/newsfirstlive-kannada/media/post_attachments/wp-content/uploads/2025/07/Shubman-Gill1.jpg)
ವಿಶ್ವ ಕ್ರಿಕೆಟ್‌ನ ಕ್ಲಾಸ್ ಬ್ಯಾಟರ್ಗಳಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ಕೂಡ ಒಬ್ಬರು. ಸೈಲೆಂಟ್ ಆಗೇ ಮ್ಯಾಚ್ ಫಿನಿಶ್ ಮಾಡೋ ಸೈಲೆಂಟ್ ಬ್ಯಾಟರ್. ಇಂತಹ ಕ್ಲಾಸಿ ಬ್ಯಾಟರ್ ಶುಭ್ಮನ್ ಇದೀಗ ಮತ್ತೊಬ್ಬ ಬಾಬರ್ ಅಝಂ ಆಗಿಬಿಟ್ರಾ ಎಂಬ ಅನುಮಾನ ಹುಟ್ಟಿದೆ. ಅದು ಯಾಕೆ|.
ಶುಭ್ಮನ್ ಗಿಲ್ ವಿಶ್ವ ಕ್ರಿಕೆಟ್‌ನ ಪ್ರಿನ್ಸ್. ಕ್ರಿಕೆಟ್ ಲೋಕದ ನಯಾ ಸೂಪರ್ ಸ್ಟಾರ್. ಈತನ ಬ್ಯಾಟಿಂಗ್ ಟೆಕ್ನಿಕ್, ಸ್ಟ್ರೈಲಿಶ್ ಶಾಟ್ಸ್, ಟೈಮಿಂಗ್ ನಿಜಕ್ಕೂ ಅದ್ಬುತ. ಈತನ ಕ್ಲಾಸಿಕ್ ಬ್ಯಾಟಿಂಗ್ ನೋಡೋದೆ ಒಂದು ಚೆಂದ. ಇಂಗ್ಲೆಂಡ್ ಸರಣಿಯಲ್ಲಿ ಜಬರ್ದಸ್ತ್ ಪರ್ಫಾಮನ್ಸ್ ನೀಡಿದ್ದ ಶುಭ್ಮನ್, ವಿಶ್ವ ಕ್ರಿಕೆಟ್ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ರು. ಶತಕಗಳ ಮೇಲೆ ಶತಕ ಸಿಡಿಸಿ ಸೆಂಚುರಿ ಸ್ಟಾರ್ ಆಗಿ ಅಭಿಮಾನಿಗಳ ಮನವನ್ನು ಗೆದ್ದಿದ್ದರು. ಶುಭ್ಮನ್ ಆಟ ನೋಡಿದ ಕ್ರಿಕೆಟ್ ಪಂಡಿತರು ಊಘೆ ಊಘೆ ಎಂದಿದ್ರು. ಆದ್ರೀಗ ಅದೇ ಶುಭ್ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ಟೀಕೆಗಳು ವ್ಯಕ್ತವಾಗ್ತಿದೆ.
2 ಮ್ಯಾಚ್, 3 ಶತಕ, 585 ರನ್.. ಶುಭ್ಮನ್ ಸೆನ್ಸೇಷನ್..!
ಇಂಗ್ಲೆಂಡ್ ಟೂರ್ಗೂ ಮುನ್ನ ಶುಭ್ಮನ್ ಗಿಲ್ ಬ್ಯಾಟಿಂಗ್ ಬಗ್ಗೆ ಪ್ರಶ್ನೆಗಳಿದ್ದವು. ಆದ್ರೆ, ಆ ಪ್ರಶ್ನೆಗಳಿಗೆ ಬ್ಯಾಟ್ನಿಂದಲೇ ಉತ್ತರ ನೀಡಿದ್ದ ಶುಭ್ಮನ್ ಗಿಲ್, ಅಕ್ಷರಶಃ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಹೆಂಡಿಗ್ಲೆಯ ಮೊದಲ ಇನ್ನಿಂಗ್ಸ್ನಲ್ಲಿ 147 ರನ್ ಬಾರಿಸಿದ್ದ ಗಿಲ್, ಎಡ್ಜ್ಬಾಸ್ಟನ್ನ ಟೆಸ್ಟ್ನ ಎರಡೂ ಇನ್ನಿಂಗ್ಸ್ನಲ್ಲಿ ಮಿಂಚಿದ್ದರು. ಒಂದು ಶತಕ, ಒಂದು ದ್ವಿಶತಕ ಸಹಿತ 430 ರನ್ ಕೊಳ್ಳೆ ಹೊಡೆದಿದ್ದರು. ಮೊದಲ 2 ಟೆಸ್ಟ್ ಪಂದ್ಯಗಳಿಂದಲೇ 3 ಶತಕ ಸಹಿತ 585 ರನ್ ಚಚ್ಚಿದ್ದರು.
ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಶುಭ್ಮನ್
ಮೊದಲ 2 ಪಂದ್ಯಗಳ 4 ಇನ್ನಿಂಗ್ಸ್ಗಲ್ಲಿ ಶುಭ್ಮನ್ ಗಿಲ್ 146.25 ಬ್ಯಾಟಿಂಗ್ ಅವರೇಜ್ನಲ್ಲಿ 585 ರನ್ ಗಳಿಸಿದ್ದರು. ಮೂರು ಶತಕ ಸಿಡಿಸಿ ಮಿಂಚಿದ್ರು.
3 ಇನ್ನಿಂಗ್ಸ್ಗಳಿಂದ ಸೌಂಡೇ ಮಾಡ್ತಿಲ್ಲ ಶುಭ್ಮನ್ ಬ್ಯಾಟ್..!
ಹೆಡಿಂಗ್ಲೆ ಹಾಗೂ ಎಡ್ಜ್ಬಾಸ್ಟನ್ನಲ್ಲಿ ಬ್ಲಾಕ್ ಬಸ್ಟರ್ ಪರ್ಫಾಮೆನ್ಸ್ ನೀಡಿದ್ದ ಶುಭ್ಮನ್, ಲಾರ್ಡ್ಸ್ ಟೆಸ್ಟ್ ಪಂದ್ಯದಿಂದ ಕಂಪ್ಲೀಟ್ ಸೈಲೆಂಟ್ ಆಗಿದ್ದಾರೆ. ಸಾಲಿಡ್ ಟಚ್ನಲ್ಲಿದ್ದ ಶುಭ್ಮನ್ ರನ್ ಗಳಿಸಲು ಪರದಾಡ್ತಿದ್ದಾರೆ. ಶುಭ್ಮನ್ ಬ್ಯಾಟಿಂಗ್ ನೋಡ್ತಿದ್ರೆ. ನಾವ್ ಮೊದಲ ಎರಡು ಟೆಸ್ಟ್ನಲ್ಲಿ ನೋಡಿದ ಶುಭ್ಮನ್ ಗಿಲ್ ಇವ್ರೇನಾ..? ಎಂಬ ಪ್ರಶ್ನೆ ಉದ್ಬವವಾಗ್ತಿದೆ. ಕಳೆದ 2 ಟೆಸ್ಟ್ ಪಂದ್ಯಗಳ 3 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಶುಭ್ಮನ್, 11.33ರ ಬ್ಯಾಟಿಂಗ್ ಅವರೇಜ್ನಲ್ಲಿ 34 ರನ್ ಗಳಿಸಿದ್ದಾರೆ. ಈ ಪೈಕಿ ಶುಭ್ಮನ್ ಗಳಿಸಿದ ಗರಿಷ್ಠ ರನ್ ಕೇವಲ 16.
ಮತ್ತೊಬ್ಬ ಬಾಬರ್ ಅಜಂ ಆಗಿದ್ದಾರಾ ಪಂಜಾಬ್ ಪುತ್ತರ್..?
ಶುಭ್ಮನ್ ಗಿಲ್, ಡೇಂಜರಸ್ ಬ್ಯಾಟರ್ ಅನ್ನೋದ್ರಲ್ಲಿ ನೋ ಡೌಟ್. ಆದ್ರೆ, ಶುಭ್ಮನ್ ಆಟ ಬ್ಯಾಟಿಂಗ್ ಫ್ರೆಂಡ್ಲಿ ಫ್ಲಾಟ್ ಟ್ರ್ಯಾಕ್ ಪಿಚ್ಗಳಿಗೆ ಮಾತ್ರವೇ ಸಿಮೀತವಾಗಿದೆ. ಗಿಲ್ರ ಈ ಬ್ಯಾಟಿಂಗ್ ನೋಡಿದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಮತ್ತೊಬ್ಬ ಬಾಬರ್ ಅಜಂ ಅಂತಾನೇ ಟೀಕಿಸಿದ್ದಾರೆ. ಮೊದಲ ಎರಡು ಪಂದ್ಯಗಳು ನಡೆದ ಹೆಂಡಿಗ್ಲೆ ಹಾಗೂ ಎಡ್ಜ್ಬಾಸ್ಟನ್ ಪಿಚ್ಗಳು ಕಂಪ್ಲೀಟ್ ಪ್ಲ್ಯಾಟ್ ಟ್ರ್ಯಾಕ್ಗಳಾಗಿದ್ವು. ಆದ್ರೆ, ಕೊನೆ ಎರಡು ಟೆಸ್ಟ್ ಪಂದ್ಯಗಳು ನಡೆದ ಲಾರ್ಡ್ಸ್ ಹಾಗೂ ಮ್ಯಾಂಚೆಸ್ಟರ್ ಪಿಚ್ಗಳು ಬೌಲರ್ಸ್ಗೆ ಹೆಚ್ಚು ನೆರವಾಗ್ತಿವೆ. ಫ್ಲಾಟ್ ಟ್ರ್ಯಾಕ್ನಲ್ಲಿ ಅಬ್ಬರಿಸಿದ ಶುಭ್ಮನ್, ಟಫ್ ಕಂಡೀಷನ್ಸ್ನಲ್ಲಿ ಸೈಲೆಂಟ್ ಆಗಿದ್ದಾರೆ. ಕಳೆದ 4 ಟೆಸ್ಟ್ ಪಂದ್ಯಗಳ ಪ್ರದರ್ಶನ ಮಾತ್ರವಲ್ಲ.. ಗಿಲ್ ಕರಿಯರ್ನ ಟ್ರ್ಯಾಕ್ ರೆಕಾರ್ಡ್ ಕೂಡ ಶುಭ್ಮನ್ ಪ್ಲಾಟ್ ಟ್ರ್ಯಾಕ್ನ ಹೀರೋ ಎನ್ತಿವೆ.
ಇದನ್ನೂ ಓದಿ:ಅಚ್ಚರಿ ಅನಿಸಿದರೂ ಇದು ಸತ್ಯ.. 1 ವರ್ಷದ ಮಗು ಕಚ್ಚಿದ್ದಕ್ಕೆ ಸ್ಥಳದಲ್ಲೇ ಜೀವ ಬಿಟ್ಟ ನಾಗರ ಹಾವು!
ಆಸಿಸ್, ಆಫ್ರಿಕಾದಲ್ಲಿ ವಿಂಡೀಸ್ನಲ್ಲಿ ಗಿಲ್ ಆಟ
ಆಸ್ಟ್ರೇಲಿಯಾದಂತ ಟಫ್ ಕಂಡೀಷನ್ನಲ್ಲಿ 11 ಇನ್ನಿಂಗ್ಸ್ಗಳಿಂದ 352 ರನ್ ಗಳಿಸಿರುವ ಶುಭ್ಮನ್, ಸೌತ್ ಆಫ್ರಿಕಾದಲ್ಲಿ 4 ಇನ್ನಿಂಗ್ಸ್ಗಳಿಂದ 74 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ 3 ಇನ್ನಿಂಗ್ಸ್ಗಳಿಂದ 45 ರನ್ ಗಳಿಸಿದ್ದಾರೆ.
ಟೀಕೆಗಳಿಗೆ ಬ್ಯಾಟ್ನಿಂದ ಉತ್ತರಿಸ್ತಾರಾ ಶುಭ್ಮನ್ ಗಿಲ್..?
ಕಳೆದ ಮೂರು ಇನ್ನಿಂಗ್ಸ್ಗಳಿಂದ 16, 6, 12 ರನ್ಗಳಿಸಿರುವ ಶುಭ್ಮನ್ ಗಿಲ್, 2ನೇ ಇನ್ನಿಂಗ್ಸ್ನಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟಬೇಕಿದೆ. ಇದು ಕೇವಲ ಟೀಕೆಗಳಿಗೆ ಉತ್ತರಿಸುವ ಸಲುವಾಗಿ ಮಾತ್ರವೇ ಅಲ್ಲ. ಇಲ್ಲ ಸರಣಿ ಮ್ಯಾಂಚೆಸ್ಟರ್ನಲ್ಲೇ ಫಿನಿಷ್ ಆಗೋದು ಫಿಕ್ಸ್. ಹೀಗಾಗಿ, ಟಫ್ ಕಂಡೀಷನ್ಸ್ನಲ್ಲೂ ಬಿಗ್ ಇನ್ನಿಂಗ್ಸ್ ಕಟ್ಟುವ ಕಲೆಗಾರಿಕೆಯನ್ನ ಶುಭ್ಮನ್ ಗಿಲ್ ಕಲಿಯಬೇಕಿದೆ. ಇಲ್ಲ ಟೀಕೆಗಳನ್ನ ಎದುರಿಸುತ್ತಲೇ ಇರಬೇಕಾಗೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ