/newsfirstlive-kannada/media/post_attachments/wp-content/uploads/2024/10/ANMOL-BUFFALO-1.jpg)
ಮೈಸೂರು: ಮುಡಾ ಸೈಟ್ ಪ್ರಕರಣ ಈಗ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ದಿನೇ ದಿನೇ ಆಗುತ್ತಿರುವ ಬೆಳವಣಿಗೆ ನೋಡಿದ್ರೆ ಸಿಎಂ ಸಿದ್ದರಾಮಯ್ಯಗೆ ಇವೆಲ್ಲವೂ ಮುಂದೆ ಒಂದು ದಿನ ಕಂಟಕವಾಗಿ ಪರಿಣಮಿಸಲಿವೆಯಾ ಅನ್ನೋ ಅನುಮಾನ ಕೂಡ ಗಾಢವಾಗಿ ಮೂಡುತ್ತಿದೆ.
ಮುಡಾ 50;50 ಹಗರಣ ಪ್ರಕರಣದಲ್ಲಿ ಒಂದು ಕಡೆ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಈಗ ಕೇಂದ್ರ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯವೂ ಕೂಡ ಎಂಟ್ರಿ ಕೊಟ್ಟಿದ್ದು, ಮುಡಾ ಮೇಲೆ ದಾಳಿಯನ್ನಿಟ್ಟಿರುವ ಇಡಿ ಅಧಿಕಾರಿಗಳನ್ನು ಪ್ರಶ್ನಿಸಿದೆ. ಮತ್ತೊಂದೆಡೆ ನಿವೃತ್ತ ನ್ಯಾಯಮೂರ್ತಿ ಪಿ.ಎನ್​.ದೇಸಾಯಿ ಸಮಿತಿಯಿಂದಲೂ ಕೂಡ ತನಿಖೆ ನಡೆಯುತ್ತಿದೆ. ಮುಡಾ ಪ್ರಕರಣಕ್ಕೆ ಮೂರು ಕಡೆಯಿಂದ ದಾಳಿ ನಡೆಯುತ್ತಿದ್ದು, ಸಿಎಂ ಸಿದ್ದುಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿವೆ.
ಮೂರು ಸಂಸ್ಥೆಗಳು ಈಗಾಗಲೇ ತನಿಖೆಯನ್ನು ಚುರುಕುಗೊಳಿಸುತ್ತಿವೆ. ಲೋಕಾಯಕ್ತ ತನಿಖೆಗೆ ಕೋರ್ಟ್ ಮೂರು ತಿಂಗಳುಗಳ ಕಾಲ ಸಮಯಾವಕಾಶ ನೀಡಿದೆ. ಪ್ರಕರಣದ ತನಿಖೆಯಲ್ಲಿ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಎ4, ಎ3ಯನ್ನು ಕರೆಸಿ ವಿಚಾರಣೆಯನ್ನು ನಡೆಸಿದೆ. ಸೈಟ್, ಜಾಗದ ಮಹಜರು ಮುಗಿಸಿರುವ ಲೋಕಾಯುಕ್ತ ಅಧಿಕಾರಿಗಳು ಕೊನೆಯ ಹಂತದ ತಯಾರಿನ್ನು ನಡೆಸಿದ್ದಾರೆ.
ಇದನ್ನೂ ಓದಿ:ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಿಢೀರ್ ದಾಳಿ: ಹಲವಾರು ಕಡತಗಳು ನಾಪತ್ತೆಯಾದ ಬಗ್ಗೆ ಶಂಕೆ
ಇತ್ತ ನಿನ್ನೆಯಿಂದ ಮುಡಾದ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಲು ನಿರಂತರವಾಗಿ ದಾಖಲೆಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಅಧಿಕಾರಿಗಳಿಗೆ ಪ್ರಶ್ನೆಗಳ ಸುರಮಳೆಗೈದಿದ್ದಾರೆ ಇಡಿ ಅಧಿಕಾರಿಗಳು. ಹಲವು ಮಹತ್ವದ ಕಡತಗಳು ನಾಪತ್ತೆಯಾಗಿರುವ ಬಗ್ಗೆಯೂ ವರದಿ ಬಂದಿದೆ. ಇನ್ನು ಮತ್ತೊಂದು ಕಡೆ ಪಿ.ಎನ್ ದೇಸಾಯಿ ಕಮಿಟಿಯಿಂದ ಲಕ್ಷ ಕ್ಷ ಜೆರಾಕ್ಸ್​ಗಳನ್ನು ತೆಗೆಯುವ ಕಾರ್ಯ ನಡೆದಿದೆ. ಈ ಮೂರು ಸಂಸ್ಥೆಗಳಲ್ಲಿ ಯಾವುದೇ ಸಂಸ್ಥೆ ವರದಿ ನೀಡಿದರೂ ಲಾಕ್ ಆಗೋದು ಪಕ್ಕಾನಾ ಅನ್ನುವ ಅನುಮಾನಗಳು ಸದ್ಯ ಮೂಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us