/newsfirstlive-kannada/media/post_attachments/wp-content/uploads/2025/05/PBKS-6.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವರ್ಷಗಳ ನಂತರ ಐಪಿಎಲ್ನಲ್ಲಿ ಫೈನಲ್‌ಗೆ ತಲುಪಿದೆ. ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಬೆಂಗಳೂರು ಐತಿಹಾಸಿಕ ಗೆಲುವು ದಾಖಲಿಸಿದೆ. ಅರ್ಹತಾ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತವರು ನೆಲದಲ್ಲಿ ಆಡಿದರೂ ಸೋಲನ್ನು ಎದುರಿಸಿದೆ. ಪಂಜಾಬ್ ಸೋಲಿಗೆ ಮೂರು ಕಾರಣಗಳು ಇಲ್ಲಿದೆ.
ವೇಗದ ದುಬಾರಿ..
ಮೊದಲ ಅರ್ಹತಾ ಪಂದ್ಯ ಮುಲ್ಲನ್‌ಪುರ ಕ್ರೀಡಾಂಗಣದಲ್ಲಿ ನಡೆಯಿತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಸ್ಕೋರ್ 170 ರನ್‌ಗಳು. ಇಲ್ಲಿನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಸಹಾಯಕವಾಗಿದೆ. ಇಲ್ಲಿ ದೊಡ್ಡ ಸ್ಕೋರ್ ನಿರೀಕ್ಷೆ ಅಸಾಧ್ಯ. ಆದರೂ ಪಂಜಾಬ್ ಬ್ಯಾಟ್ಸ್‌ಮನ್‌ಗಳು 200+ ರನ್ ಗಳಿಸಲು ಔಟಾದವರಂತೆ ವರ್ತಿಸುತ್ತಿದ್ದರು. ಪಂಜಾಬ್ ಕಿಂಗ್ಸ್ನ ವಿಕೆಟ್‌ಗಳ ಬಗ್ಗೆ ವಿಮರ್ಷೆ ಮಾಡಿದ್ರೆ, ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್ಗಳಿಸಲು ಪ್ರಯತ್ನಿಸಿ ಔಟ್ ಆಗಿದ್ದಾರೆ.
ಇದನ್ನೂ ಓದಿ: ಫೈನಲ್‌ಗೆ ಎಂಟ್ರಿ ಕೊಟ್ಟ ಆರ್ಸಿಬಿ.. ಕರ್ನಾಟಕದಲ್ಲಿ ಸಂಭ್ರಮ ಹೇಗಿತ್ತು..? Photos
ಟಾಸ್ ಸೋತ ನಾಯಕ
ಟಾಸ್ ಸಮಯದಲ್ಲಿ ಅಯ್ಯರ್ ಸ್ವತಃ ತಾವು ಮೊದಲು ಬೌಲಿಂಗ್ ಮಾಡಲು ಬಯಸಿದ್ದಾಗಿ ಒಪ್ಪಿಕೊಂಡರು. ಪಿಚ್‌ನಲ್ಲಿ ಸಾಕಷ್ಟು ಹುಲ್ಲು ಇತ್ತು. ಜೊತೆಗೆ ರಾತ್ರಿ ಆಗುತ್ತಿದ್ದಂತೆಯೇ ಇಬ್ಬನಿಯೂ ಬೀಳುತ್ತಿತ್ತು. ಪಂಜಾಬ್ ಇಲ್ಲಿ 170-180 ರನ್ ಗಳಿಸಿದ್ದರೂ ಇಬ್ಬನಿಯಿಂದಾಗಿ ಡಿಫೆಂಡ್ ಮಾಡಿಕೊಳ್ಳೋದು ಸುಲಭ ಇರಲಿಲ್ಲ.
ಬ್ಯಾಕ್ ಟು ಬ್ಯಾಕ್ ವಿಕೆಟ್..
ಟಿ20 ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ ಸಣ್ಣ ಪಾಲುದಾರಿಕೆ ದೊಡ್ಡ ಸ್ಕೋರ್ಗೆ ಕಾರಣವಾಗುತ್ತದೆ. ಆದರೆ ಪಂಜಾಬ್‌ನ ಬ್ಯಾಟಿಂಗ್ ಲೈನ್ ಅಪ್ ಕೆಟ್ಟದಾಗಿತ್ತು. ಒಂದು ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿತ್ತು. ಆದರೆ ಮುಂದಿನ 11 ರನ್‌ಗಳಲ್ಲಿ 3 ವಿಕೆಟ್‌ಗಳು ಬಿದ್ದವು. ಶಶಾಂಕ್ ಸಿಂಗ್ ವಿಕೆಟ್ ಬೀಳುವ ಮುನ್ನ ಪಂಜಾಬ್ ಸ್ಕೋರ್ 60/5 ಆಗಿತ್ತು. ಆದರೆ ಇಲ್ಲಿಯೂ ತಂಡವು 18 ರನ್‌ಗಳ ಅಂತರದಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಸೋಲಿನ ಹಿನ್ನೆಲೆಯಲ್ಲಿ ಪಂಜಾಬ್ ನಿರಾಸೆ ಪಡಬೇಕಿಲ್ಲ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶ ಮಾಡಲು ಅವಕಾಶ ಇದೆ.
ಇದನ್ನೂ ಓದಿ: ಸೋಲಿಗೆ ಕಾರಣ ತಿಳಿಸಿದ ಶ್ರೇಯಸ್ ಅಯ್ಯರ್.. ಹೊಣೆ ಮಾಡಿದ್ದು ಯಾರನ್ನ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ