newsfirstkannada.com

ಮೈಸೂರು-ಅಯೋಧ್ಯಾಧಾಮ ರೈಲಲ್ಲಿ ಹೈಡ್ರಾಮಾ; ಯಾತ್ರಿಗಳಿದ್ದ ಬೋಗಿಗೆ ನುಸುಳಿ ಬೆಂಕಿ ಹಚ್ಚುವ ಧಮ್ಕಿ

Share :

Published February 23, 2024 at 7:17am

  ಕಿಡಿಗೇಡಿಗಳನ್ನ ಒಪ್ಪಿಸಿದ್ರೂ ಬಿಟ್ಟು ಕಳಿಸಿದ ರೈಲ್ವೇ ಪೊಲೀಸರು

  ಮೂವರು ಅನ್ಯಕೋಮಿನ ಯುವಕರಿಂದ ಯಾತ್ರಿಕರಿಗೆ ಧಮ್ಕಿ

  ಮೈಸೂರು-ಅಯೋಧ್ಯಧಾಮ ರೈಲಿನಲ್ಲಿ ನೂರಾರು ರಾಮಭಕ್ತರು

ಅಯೋಧ್ಯೆ ಯಾತ್ರಿಕರು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ದಾಂಧಲೆ ನಡೆದಿದೆ. ಅಯೋಧ್ಯೆಗೆ ಹೋಗಿ ಮರಳಿ ಬರ್ತಿದ್ದ ರೈಲಿನಲ್ಲಿ ಅನ್ಯಕೋಮಿನ ಕೆಲ ಕಿಡಿಗೇಡಿಗಳು ಪುಂಡಾಟ ನಡೆಸಿದ್ದಾರೆ. ರೈಲು ಹತ್ತಿ ಯಾತ್ರಿಕರಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಬೋಗಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದು, ಹೊಸಪೇಟೆ ನಿಲ್ದಾಣದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು ಹೊಸಪೇಟೆ ರೈಲು ನಿಲ್ದಾಣದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ರೈಲು ಹೊರಡುತ್ತಿದ್ದಂತೆ ರಾಮಭಕ್ತರೆಲ್ಲ ಜೈ ಶ್ರೀರಾಮ್ ಘೋಷಣೆ ಕೂಗಿದರು. ಕ್ಷುಲ್ಲಕ ಕಾರಣಕ್ಕೆ ಹಿಂದೂ ಯುವಕ ಹಾಗೂ ಅನ್ಯಕೋಮಿನ ಯುವಕರ ನಡುವೆ ವಾಗ್ವಾದ ನಡೆದಿದೆ. ಮೈಸೂರು-ಅಯೋಧ್ಯಾಧಾಮ ರೈಲು 2 ಗಂಟೆ ಸ್ಥಗಿತಗೊಂಡ ಘಟನೆ ಹೊಸಪೇಟೆ ರೈಲು ನಿಲ್ದಾಣದಲ್ಲಿ ನಡೆದಿದೆ.

ಇದು ಪುಂಡಾಟವೋ, ಕಾನೂನು ಭಯವಿಲ್ಲದ ಕಿಡಿಗೇಡಿಗಳ ಕೃತ್ಯ. ಅಯೋಧ್ಯೆಗೆ ಹೋಗಿ ಮರಳಿ ಬರುತ್ತಿದ್ದ ರೈಲಿನಲ್ಲಿ ದಾಂಧಲೆ ನಡೆದಿದೆ. ಮೂವರು ಅನ್ಯಕೋಮಿನ ಯುವಕರಿಂದ ಯಾತ್ರಿಕರಿಗೆ ಧಮ್ಕಿ ಹಾಕಲಾಗಿದೆ. ಅಯೋಧ್ಯೆ ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಂದ್ಹಾಗೆ ಈ ಘಟನೆ ನಡೆದಿರೋದು ಹೊಸಪೇಟೆ ರೈಲು ನಿಲ್ದಾಣದಲ್ಲಿ.

ಮೈಸೂರು-ಅಯೋಧ್ಯಾ ಧಾಮ ರೈಲಿನಲ್ಲಿ ನೂರಾರು ರಾಮಭಕ್ತರು ಪ್ರಯಾಣಿಸ್ತಿದ್ರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಹಿಂದೂ ಹಾಗೂ ಅನ್ಯಕೋಮಿನ ಯುವಕನ ಜೊತೆ ವಾಗ್ವಾದ ನಡೆದಿದೆ. ಜಗಳ ಶುರುವಾದ ವೇಳೆ ಪದೇ ಪದೇ ಚೈನ್ ಎಳೆದ ಕಾರಣ ಟ್ರೈನ್ ಮುಂದೆ ಸಾಗಲು ಸಾಧ್ಯವಾಗಿಲ್ಲ. ಈ ವೇಳೆ, ಅನ್ಯಕೋಮಿನ ಯುವಕ ರೈಲಿಗೆ ಬೆಂಕಿ ಹಚ್ಚೋದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ..

ಅಯೋಧ್ಯೆ ರೈಲಿನಲ್ಲಿ ಆಗಿದ್ದೇನು?

 • ಅಯೋಧ್ಯೆ ರೈಲಿನ ಬೋಗಿ ಸಂಖ್ಯೆ ಎರಡರಲ್ಲಿ ನಡೆದ ಘಟನೆ
 • ಬೋಗಿಯಲ್ಲಿ ಅಯೋಧ್ಯೆ ಪ್ರಯಾಣಿಕರಿಗೆ ಮಾತ್ರ ಅವಕಾಶ
 • ಯಾತ್ರಿಕರ ಜೊತೆಗೆ ವಾಗ್ವಾದಕ್ಕಿಳಿದ ಮೂವರು ಕಿಡಿಗೇಡಿಗಳು
 • ಬೋಗಿಗೆ ಬೆಂಕಿ ಹಚ್ಚುವ ಧಮ್ಕಿ ಹಾಕಿದ್ದಾರೆ ಎಂಬ ಆರೋಪ
 • ಹೊಸಪೇಟೆ ನಿಲ್ದಾಣದಲ್ಲಿ ಪೊಲೀಸರಿಗೆ ಒಪ್ಪಿಸಿದ ಯಾತ್ರಿಕರು
 • ವಿಚಾರಣೆ ನಡೆಸಿ ಕ್ರಮ ಕೈಗೊಳ್ಳದೆ ಬಿಟ್ಟು ಕಳಿಸಿದ ಪೊಲೀಸ್ರು
 • ಇದ್ರಿಂದ ಆಕ್ರೋಶಗೊಂಡು ಘೋಷಣೆ ಕೂಗಿದ ಯಾತ್ರಿಕರು

ಪರಿಸ್ಥಿತಿ ವಿಕೋಪಕ್ಕೆ ತಿರುಗ್ತಿದ್ದಂತೆ ಸ್ಥಳಕ್ಕೆ ಬಂದ ಎಸ್ಪಿ ಶ್ರೀಹರಿಬಾಬು, ಎಲ್ಲರ ಮನವೊಲಿಸಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರೈಲು ಹೊರಡುತ್ತಿದ್ದಂತೆ ನಿಲ್ದಾಣದಲ್ಲೇ ಭಕ್ತರು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಅಯೋಧ್ಯೆಗೆ ಸತತ 11ನೇ ದಿನವಾದ ನಿನ್ನೆ ರೈಲು ಹೊರಟಿದೆ. ಆದ್ರೆ, ಇದೇ ಮೊದಲ ಬಾರಿಗೆ ಈ ರೀತಿಯ ವಿವಾದ ಏರ್ಪಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರು-ಅಯೋಧ್ಯಾಧಾಮ ರೈಲಲ್ಲಿ ಹೈಡ್ರಾಮಾ; ಯಾತ್ರಿಗಳಿದ್ದ ಬೋಗಿಗೆ ನುಸುಳಿ ಬೆಂಕಿ ಹಚ್ಚುವ ಧಮ್ಕಿ

https://newsfirstlive.com/wp-content/uploads/2024/02/VIJ_TRAIN_2.jpg

Load More