newsfirstkannada.com

ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ನಿಗೂಢ ಸಾವು; ಭಾರೀ ಅನುಮಾನ ಹುಟ್ಟು ಹಾಕಿದೆ ಈ ಕೇಸ್​

Share :

Published March 20, 2024 at 11:29am

    ಸ್ಥಳೀಯರು, ಸಂಬಂಧಿಕರಿಂದ ಮಾಹಿತಿ ಪಡೆಯುತ್ತಿರೋ ಪೊಲೀಸರು

    ಫ್ಯಾಕ್ಟರಿ ಲಾಸ್ ಹಿನ್ನೆಲೆ ಸಾಕಷ್ಟು ಸಾಲ‌ ಮಾಡಿಕೊಂಡಿದ್ದ ಕುಟುಂಬ

    ಕಳೆದ 15 ವರ್ಷಗಳಿಂದ ಜೆ‌ಪಿ ನಗರದಲ್ಲೇ ವಾಸವಾಗಿದ್ದ ಕುಟುಂಬ

ಬೆಂಗಳೂರು: ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜೆ‌ಪಿ ನಗರದ ಮೂರನೇ ಹಂತದಲ್ಲಿ ನಡೆದಿದೆ. ಸುಕನ್ಯಾ ಜಯಾನಂದ (48), ನಿಖಿತ್ (28), ನಿಶಿತ್ (28) ಮೃತ ದುರ್ದೈವಿಗಳು.

ಈ ಘಟನೆ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ನಡೆದಿದೆ. ಮನೆಯಲ್ಲಿ ಜಯಾನಂದ್, ಸುಕನ್ಯಾ, ನಿಶ್ಚಿತ್, ನಿಕಿತ್ ವಾಸವಿದ್ದರು. ಹದಿನೈದು ವರ್ಷಗಳಿಂದ ಜೆಪಿ ನಗರದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದರು. ಪತಿ ಜಯಾನಂದ್ ಎಂಬುವವರು ಫ್ಯಾಕ್ಟರಿಯೊಂದನ್ನು ನಡೆಸುತ್ತಿದ್ದರು.

ಇದನ್ನು ಓದಿ: ಬೆಂಗಳೂರಲ್ಲಿ ದಾರುಣ ಘಟನೆ; ಒಂದೇ ಕುಟುಂಬದ ಮೂವರು ನಿಗೂಢ ಸಾವು

ಇತ್ತೀಚೆಗೆ ಫ್ಯಾಕ್ಟರಿ ಲಾಸ್ ಆಗಿ ಕ್ಲೋಸ್ ಮಾಡಿದ್ದರಂತೆ. ಬ್ಯುಸಿನೆಸ್ ಲಾಸ್ ಆದಮೇಲೆ ಸಾಕಷ್ಟು ತೊಂದರೆಯಾಗಿತ್ತು. ಫ್ಯಾಕ್ಟರಿ ಲಾಸ್ ಹಿನ್ನೆಲೆ ಈ ಕುಟುಂಬವು ಸಾಕಷ್ಟು ಸಾಲ‌ ಮಾಡಿಕೊಂಡಿತ್ತಂತೆ. ಪತ್ನಿ ಸುಕನ್ಯ ಮನೆಯಲ್ಲಿ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರಂತೆ. ಆಕೆಯ ಪತಿ ಜಯಾನಂದ್ ಅವರು ಬ್ಯುಸಿನೆಸ್ ಲಾಸ್ ಆಗಿ ಅನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲಿದ್ದರಂತೆ. ಇಬ್ಬರು ಮಕ್ಕಳಲ್ಲಿ ನಿಶ್ಚಿತ್ ಎಂಬಾತ ಹ್ಯಾಂಡಿಕಾಪ್ಟ್ ಆಗಿದ್ದನಂತೆ. ಮನೆಯಿಂದಲೇ ವರ್ಕ್ ಫ್ರಮ್ ಹೋಂ ಮಾಡಿ ದುಡಿಯುತ್ತಿದ್ದ ಎಂದು ತಿಳಿದುಬಂದಿದೆ.

ಇನ್ನೊಬ್ಬ ಮಗ ನಿಕಿತ್ ಕೂಡ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದನಂತೆ. ಸಾಲ ಜಾಸ್ತಿಯಾಗಿರೋ ಹಿನ್ನೆಲೆಯಲ್ಲಿ ಸಾಲಗಾರರು ಬಂದು ಸಾಲ ತೀರಿಸುವಂತೆ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ನಿನ್ನೆ ಕೂಡ ಇಬ್ಬರು ಬಂದು ಸಾಲ ವಾಪಸ್ ಕೇಳಿದ್ದರಂತೆ. ಹೀಗಾಗಿ ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿ ಒಟ್ಟು ಮೂರು ಜನ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜೆ‌ಪಿ ನಗರ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಒಂದೇ ಕುಟುಂಬದ ಮೂವರ ನಿಗೂಢ ಸಾವು; ಭಾರೀ ಅನುಮಾನ ಹುಟ್ಟು ಹಾಕಿದೆ ಈ ಕೇಸ್​

https://newsfirstlive.com/wp-content/uploads/2024/03/bng-8.jpg

Load More