/newsfirstlive-kannada/media/post_attachments/wp-content/uploads/2025/03/THREE-MOST-mysterious.jpg)
ಭಾರತ ಅತಿಹೆಚ್ಚು ಕಾಡುಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಭಾರತದಲ್ಲಿ ಸುಮಾರು 80.9 ಮಿಲಿಯನ್ ಹೆಕ್ಟೆರ್ನಷ್ಟು ವಿಶಾಲವಾದ ಕಾಡುಗಳಿವೆ. ಈ ದಟ್ಟಾರಣ್ಯಗಳು ಹಲವು ರಹಸ್ಯಗಳನ್ನು ತಮ್ಮೊಡಲಲ್ಲಿ ಹೊತ್ತುಕೊಂಡು ಇಂದಿಗೂ ಮಾನವನ ಜಗತ್ತಿಗೆ ವಿಸ್ಮಯಕಾರಿಯಾಗಿ ನಿಂತಿವೆ. ಅದರಲ್ಲೂ ಕೆಲವೊಂದು ಕಾಡುಗಳ ಒಳಗೆ ಪ್ರವೇಶಿಸಲು ನೂರು ಬಾರಿ ಯೋಚನೆ ಮಾಡುವ ಮಟ್ಟಿಗೆ ರಹಸ್ಯವನ್ನು ನಿಗೂಢತೆಯನ್ನು ಹೊತ್ತುಕೊಂಡು ಕುಳಿತಿವೆ.
ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್ ನೀಡದ ಏರ್ ಇಂಡಿಯಾ ಯಡವಟ್ಟು.. ಕುಸಿದು ಬಿದ್ದ 82ರ ವೃದ್ಧೆ! ಆಮೇಲಾಗಿದ್ದೇನು?
ಅದರಲ್ಲೂ ಭಾರತದ ಪ್ರಮುಖ ಈ ಮೂರು ಕಾಡುಗಳಲ್ಲಿ ಅತ್ಯಂತ ರಹಸ್ಯವಾದ ಘಟನೆಗಳು ನಡೆಯುತ್ತವೆ.ಅದನ್ನು ಶಬ್ದಗಳಿಂದ ಬಣ್ಣಿಸಲು ಸಾಧ್ಯವಿಲ್ಲ. ಸ್ಥಳೀಯ ಜನರು ಹೇಳುವ ಪ್ರಕಾರ ಈ ಕಾಡುಗಳಲ್ಲಿ ಒಂದು ಅಲೌಕಿಕ ಶಕ್ತಿಗಳು ವಾಸಗೊಂಡಿವೆ ಎಂದು ಹೇಳುತ್ತಾರೆ. ಆ ಪ್ರಮುಖ ಮೂರು ರಹಸ್ಯಮಯ ಕಾಡುಗಳು ಯಾವುವು ಎಲ್ಲಿವೆ ಎನ್ನುವುದನ್ನು ನೋಡುವುದಾದ್ರೆ.
ಸುಂದರ್ಬನ್ಸ್: ಪಶ್ಚಿಮ ಬಂಗಾಳ
ಪಶ್ಚಿಮ ಬಂಗಾಳದಲ್ಲಿರುವ ಈ ಸುಂದರ್ಬನ್ಸ್ ಎಂಬ ಕಾಡು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಮೈಂಗ್ರೋವ್ ಕಾಡು ಎಂದು ಪ್ರಸಿದ್ಧಿ ಪಡೆದಿದೆ. ಈ ದಟ್ಟವಾದ ಕಾಡು ತನ್ನ ರಹಸ್ಯಮಯ ಕಥೆಗಳಿಂದ ಹಾಗೂ ಬಂಗಾಲಿ ಹುಲಿಗಳು ವಾಸಿಸುವ ಪ್ರಸಿದ್ಧ ಕಾಡು ಎಂದು ಖ್ಯಾತಿ ಪಡೆದಿದೆ. ಇಲ್ಲಿನ ಜವುಗುಗಟ್ಟಿದ ಭೂಮಿ ಹಾಗೂ ದಟ್ಟವಾಗಿ ಬೆಳೆದ ಮರಗಳು ಹಾಗೂ ಸಸಿಸಗಳು ಇನ್ನುಷ್ಟು ಭಯಾನಕವಾಗಿವೆ. ಈ ಕಾಡಿನಲ್ಲಿ ಆಗಾಗ ಬೆಚ್ಚಿ ಬೀಳಿಸುವಂತಹ ಘಟನೆಗಳು ನಡೆಯುತ್ತವೆ. ಹೀಗಾಗಿ ಜನರು ಈ ಕಾಡಿನೊಳಗೆ ಪ್ರವೇಶಿಸಲು ನೂರು ಬಾರಿ ಯೋಚಿಸುತ್ತಾರೆ. ಇಲ್ಲಿ ಬನ್ಬೀಬಿ ಹಾಗೂ ದಕ್ಷಿಣ್ ರೈ ಎಂಬ ಆತ್ಮಗಳು ಅಲೆದಾಡುತ್ತವೆ. ಇವುಗಳನ್ನು ಬೇಘೋ ಭೂತ್ ಅಂತಲೇ ಕರೆಯಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಗಿರ್ ಫಾರೆಸ್ಟ್- ಗುಜರಾತ್
ಗಿರ್ ಫಾರೆಸ್ಟ್ ಎಂದ ತಕ್ಷಣ ನಮಗೆ ಕಣ್ಣಿನ ಮುಂದೆ ಬರೋದು ಅಲ್ಲಿ ನೆಲೆಗೊಂಡಿರುವ ಭಯಾನಕ ಸಿಂಹಗಳ ಚಿತ್ರ. ಏಷಿಯಾದ ಅತ್ಯಂತ ದೊಡ್ಡ ಸಿಂಹಗಳ ಅಭಿಯಾರಣ್ಯ ಗಿರ್ ಅರಣ್ಯದಲ್ಲಿದೆ. ಆದರೆ ಇದರ ಹೊರತಾಗಿಯೂ ಕೂಡ ಇಲ್ಲಿ ಈ ಕಾಡಿನ ಬಗ್ಗೆ ಅನೇಕ ರಹಸ್ಯಮಯ ಕಥೆಗಳು ಪ್ರಚಲಿತದಲ್ಲಿವೆ. ದಟ್ಟವಾದ ಅರಣ್ಯ ಹಾಗೂ ಅಲ್ಲಿನ ಕಾಡು ಪ್ರಾಣಿಗಳ ಘರ್ಜನೆ ಮತ್ತು ಪ್ರಚಲಿತದಲ್ಲಿರುವ ಕಥೆಗಳು ಈ ಕಾಡಿನೊಳಕ್ಕೆ ಹೋಗಲು ಬಯಸುವವರ ಬೆವರಿಳಿಸಿಬಿಡುತ್ತವೆ.
ಡೌ ಹಿಲ್- ಕುರ್ಸಿಯೊಂಗ್
ಪಶ್ಚಿಮ ಬಂಗಾಳದ ಕುರ್ಸಿಯೊಂಗ್ ನಗರದಲ್ಲಿರುವ ದಟ್ಟ ಅರಣ್ಯದ ಹೆಸರು ಡೌ ಹಿಲ್ ಅಂತ. ಈ ಒಂದು ಅರಣ್ಯದಲ್ಲಿ ಭೂತಗಳು ವಾಸಗೊಂಡಿವೆ ಎಂಬ ಪ್ರತೀತಿ ಇದೆ. ಜನರು ಅನುಭವಕ್ಕೂ ಕೂಡ ಇದು ಬಂದಿದೆ. ತಲೆ ಬುರುಡೆ ಇಲ್ಲದ ಭೂತಗಳು ಇಲ್ಲಿ ಓಡಾಡುತ್ತವೆಯಂತೆ. ಆತ್ಮಗಳ ಅರಚಾಟ ಮಧ್ಯರಾತ್ರಿಯಲ್ಲಿ ಈ ಕಾಡಿನಿಂದ ಕೇಳಿ ಬರುತ್ತದೆಯಂತೆ. ಈ ಎಲ್ಲಾ ಅನುಭವಗಳನ್ನು ಸ್ಥಳೀಯರು ಪಡೆದಿದ್ದಾರೆ ಹೀಗಾಗಿಯೇ ಈ ಅರಣ್ಯದತ್ತ ತಲೆ ಮಾಡಿಯೂ ಕೂಡ ಅಲ್ಲಿಯ ಜನರು ಮಲಗುವುದಿಲ್ಲ. ಅರಣ್ಯದೊಳಗೆ ಪ್ರವೇಶ ಮಾಡಲು ಉತ್ಸಾಹ ತೋರಿಸುವ ಪ್ರವಾಸಿಗರಿಗೂ ಕೂಡ ಅವರು ತಮಗಾದ ಅನುಭವವನ್ನು ಹೇಳಿ ತಡೆಯುತ್ತಾರೆ. ಹೀಗಾಗಿ ಈ ಕಾಡಿನಲ್ಲಿ ಪ್ರವೇಶ ಪಡೆಯುವುದು ಅಷ್ಟು ಸರಳವಲ್ಲ. ಒಳಗೆ ಹೋದವರು ಆಚೆ ಬಂದ ಉದಾಹರಣೆಗಳು ಕೂಡ ಇಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಛಾವಾ ಸಿನಿಮಾ ನೋಡಿ ರಾತ್ರೋರಾತ್ರಿ ಭೂಮಿ ಅಗೆದ ಜನ.. ಸಿಕ್ಕೇ ಬಿಡ್ತಾ ರಾಶಿ ರಾಶಿ ಚಿನ್ನ..?
ಒಂದು ವೇಳೆ ಈ ಅರಣ್ಯವನ್ನು ನೋಡಲೇಬೇಕು ಎಂಬುದು ನಿಮ್ಮ ಆಸೆಯಾಗಿದ್ದರೆ ಸ್ವಲ್ಪ ಸಾವಧಾನದಿಂದ ಇರಬೇಕು. ಸ್ಥಳೀಯ ಗೈಡ್ಗಳ ಸಹಾಯವಿಲ್ಲದೇ ನೀವು ಈ ಅರಣ್ಯದೊಳಗೆ ಪ್ರವೇಶ ಮಾಡಿದ್ದೇ ಆದಲ್ಲಿ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಕಾರಣ ಪ್ರಕೃತಿ ತನ್ನ ಒಡಲಲ್ಲಿ ನೂರಾರು ನಿಗೂಢತೆಗಳನ್ನು ಇಟ್ಟುಕೊಂಡು ಕುಳಿತಿದ್ದಾಳೆ. ಅವು ಅನುಭವಕ್ಕೆ ಬರುವವರೆಗೂ ಕಟ್ಟು ಕಥೆಗಳು ಅನಿಸುತ್ತವೆ ಒಂದು ಬಾರಿ ಅನುಭವಕ್ಕೆ ಬಂದರೆ ಅದು ಕಟ್ಟು ಕಥೆ ಎಂದು ಹೇಳಲು ಹೊರಟವರೇ ಆಚೆಗೆ ಬರುವುದಿಲ್ಲ. ಕಾರಣ ಸೃಷ್ಟಿಯಲ್ಲಿ ನಮ್ಮ ಅರಿವಿನ ಆಚೆಗೂ ಒಂದು ರಹಸ್ಯ, ನಿಗೂಢತೆ ಹಾಗೂ ವಿಸ್ಮಯಗಳು ಇವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ