newsfirstkannada.com

KSRTC ಬಸ್, ಓಮಿನಿ ಮಧ್ಯೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು

Share :

Published April 11, 2024 at 2:32pm

  ನಾಲ್ವರು ಗಂಭೀರ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ

  ಒಂದು ಮಗು ಸೇರಿ ಒಟ್ಟು ನಾಲ್ವರಿಗೆ ಗಂಭೀರ ಗಾಯವಾಗಿದೆ

  ದುರ್ಘಟನಾ ಸ್ಥಳಕ್ಕೆ ನ್ಯಾಮತಿ ಪೊಲೀಸರು ಭೇಟಿ, ಪರಿಶೀಲನೆ

ದಾವಣಗೆರೆ: KSRTC ಬಸ್ ಹಾಗೂ ಓಮಿನಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಬಳಿ ದುರ್ಘಟನೆ ನಡೆದಿದೆ. ನಂಜುಂಡಪ್ಪ, ರಾಕೇಶ್, ದೇವರಾಜ್ ಮೃತ ದುರ್ದೈವಿಗಳು. ಒಂದು ಮಗು ಸೇರಿ ನಾಲ್ವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಕೆಲವರನ್ನು ತಾಲೂಕು ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಓವರ್ ಟೇಕ್ ಮಾಡುವ ಅವಸರ.. ನಿಯಂತ್ರಣ ತಪ್ಪಿ NANO ಕಾರು ಅಪಘಾತ..! ವಿಡಿಯೋ

ಇನ್ನೂ ಕೆಲವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗ್ತಿದೆ. ಎಲ್ಲರೂ ಹೊನ್ನಾಳಿ ತಾಲೂಕಿನ ಅರಬಘಟ ಮೂಲದವರು ಎಂದು ತಿಳಿದುಬಂದಿದೆ. ನ್ಯಾಮತಿ ಪೊಲೀಸರು ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಬಸ್, ಓಮಿನಿ ಮಧ್ಯೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/04/DVG-ACCIDENT.jpg

Load More