newsfirstkannada.com

ರಾಜ್ಯದಲ್ಲಿ ಮೂರು ಪ್ರತ್ಯೇಕ ದುರಂತ.. ಹೃದಯ ವಿದ್ರಾವಕ ಘಟನೆಯಲ್ಲಿ ಮೂವರು ಸಾವು

Share :

Published June 1, 2024 at 1:50pm

  ಒಂದೇ ಜಿಲ್ಲೆಯಲ್ಲಿ ಇಬ್ಬರು ಕಾರ್ಮಿಕರ ದುರಂತ ಅಂತ್ಯ

  ಸಾವು ಹೀಗೆಲ್ಲ ಬರುತ್ತೆ, ಉದ್ಯೋಗಿಗಳು ಹುಷಾರಾಗಿರಬೇಕು

  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ತನಿಖೆ ಆರಂಭ

ಚಿಕ್ಕಮಗಳೂರು ಹಾಗೂ ರಾಯಚೂರಲ್ಲಿ ನಡೆದ ಮೂರು ಪ್ರತ್ಯೇಕ ದುರಂತದಲ್ಲಿ ಮೂವರು ಕೆಲಸಗಾರರು ಸಾವನ್ನಪ್ಪಿದ್ದಾರೆ. ಬಾಯ್ಲರ್ ರಿಪೇರಿ ಮಾಡುವಾಗ ಒಬ್ಬರು ಸಾವನ್ನಪ್ಪಿದ್ರೆ, ಇನ್ನೊಬ್ಬರು ವಿದ್ಯುತ್ ಶಾಕ್ ತಗುಲಿ ಹಾಗೂ ಮತ್ತೊಬ್ಬರು ಬಿಲ್ಡಿಂಗ್​ನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.

ಶಾಖದಿಂದ ಸಾವು

ಬಾಯ್ಲರ್ ರಿಪೇರಿ ಮಾಡುವಾಗ ಹೊರ ಬಂದ ಶಾಖದಿಂದ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ವಿದ್ಯಾ ಕಾಫಿ ಕ್ಯೂರಿಂಗ್​ನಲ್ಲಿ ನಡೆದಿದೆ. ಉದಯ್ (27) ಮೃತ ಕಾರ್ಮಿಕ. ಉದಯ್ ಮಡಿಕೇರಿಯ ಕುಶಾಲನಗರ ಮೂಲದವರಾಗಿದ್ದರು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆ ಆಗಿದೆ. ಬಾಯ್ಲರ್ ಸರಿಪಡಿಸುವಾಗ ಏಕಾಏಕಿ 340 ಡಿಗ್ರಿ ಶಾಖ ಹೊರಬಂದಿದೆ. ಶವಗಾರದ ಬಳಿ ಮಗನನ್ನು ಕಳೆದುಕೊಂಡ ತಾಯಿ ಕಣ್ಣೀರು ಇಡುತ್ತಿದ್ದಾಳೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರದಲ್ಲೇ ಸಾವು

ವಿದ್ಯುತ್ ಶಾಕ್​ನಿಂದ ಮರದಲ್ಲೇ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮರಗಸಿ ಮಾಡುವಾಗ ದುರಂತ ಸಂಭವಿಸಿದ್ದು, ಚಂದ್ರಪ್ಪ (45) ಅನ್ನೋರು ಮೃತಪಟ್ಟಿದ್ದಾರೆ. ಸಿಲ್ವರ್ ಮರದ ಕೊಂಬೆ ಕಡಿಯುವಾಗ ಅನಾಹುತ ನಡೆದಿದೆ. ಮರ ನೇರವಾಗಿ ಬೆಳೆಯಲೆಂದು ಸಿಲ್ವರ್ ಮರಕ್ಕೆ ಮರಗಸಿ ಅನಿವಾರ್ಯ. ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಅವಘಡ ಸಂಭವಿಸಿದೆ.

ನಿದ್ದೆ ಮಂಪರಿನಲ್ಲಿ ಬಿದ್ದು ಸಾವು

ರಾಯಚೂರು ಜಿಲ್ಲೆ ಸಿಂಧನೂರು ನಗರದ ಅಕ್ಕಮಹಾದೇವಿ ಪಿಜಿ ಸೆಂಟರ್‌ನಲ್ಲಿ ಕಾಲೇಜು ಕಟ್ಟಡ ಮೇಲಿಂದ ಬಿದ್ದು ಸೆಕ್ಯೂರಿಟಿ ಗಾರ್ಡ್ ಸಾವನ್ನಪ್ಪಿದ್ದಾರೆ. ಬಸ್ಸಯ್ಯ ಧುಮತಿ (45) ಮೃತ ಸೆಕ್ಯೂರಿಟಿ ಗಾರ್ಡ್. ರಾತ್ರಿ ಕಟ್ಟಡದ ಮೇಲೆ ಬಸ್ಸಯ್ಯ ಮಲಗಿದ್ದರು. ಮಧ್ಯರಾತ್ರಿ ನಿದ್ದೆ ಮಂಪರಿನಲ್ಲಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಮೂರು ಪ್ರತ್ಯೇಕ ದುರಂತ.. ಹೃದಯ ವಿದ್ರಾವಕ ಘಟನೆಯಲ್ಲಿ ಮೂವರು ಸಾವು

https://newsfirstlive.com/wp-content/uploads/2024/06/CKM-AND-RCR.jpg

Load More