/newsfirstlive-kannada/media/post_attachments/wp-content/uploads/2023/06/JCB.jpg)
ಪ್ರಾತಿನಿಧಿಕ ಚಿತ್ರ
ರಾಯಚೂರು: ಮಲಗಿದ್ದವರ ಮೇಲೆ ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನಿಲವಂಜಿಯಲ್ಲಿ ನಡೆದಿದೆ. ವಿಷ್ಣು (26), ಶಿವರಾಮ್ (28), ಬಲರಾಮ್(30) ಮೃತ ದುರ್ದೈವಿಗಳು.
ಜಮೀನಿನಲ್ಲಿ ಬೋರ್‌ವೆಲ್ ಕೊರೆದು ರಾತ್ರಿ ವೇಳೆ ಕಾಲುದಾರಿಯಲ್ಲಿ ಮೂವರು ಯುವಕರು ಮಲಗಿದ್ದರು. ಈ ವೇಳೆ ಕಾಲುದಾರಿಯಲ್ಲಿ ಬಂದ ಜೆಸಿಬಿ ಮೂವರು ಯುವಕರ ಮೇಲೆ ಹರಿದಿದೆ. ಪರಿಣಾಮ ಅಲ್ಲೇ ಉಸಿರು ಚೆಲ್ಲಿದ್ದಾರೆ. ಸಾವನ್ನಪ್ಪಿದವರು ಚತ್ತಿಸ್ಗಢ ಮೂಲದವರು ಎಂದು ತಿಳಿದುಬಂದಿದೆ.
ಇನ್ನು ನಿಲವಂಜಿ ಗ್ರಾಮದ ಬಾಲಯ್ಯ ಎಂಬುವವರಿಗೆ ಸೇರಿದ ಜೆಸಿಬಿ ಇದಾಗಿದ್ದು, ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ