VIDEO: ರಸ್ತೆ ಪಕ್ಕದ ಕಲ್ಲಿಗೆ ಕಾರು ಗುದ್ದಿ ಮೂವರು ಸಾವು.. ಅಪಘಾತದ ಭಯಾನಕ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ

author-image
AS Harshith
Updated On
VIDEO: ರಸ್ತೆ ಪಕ್ಕದ ಕಲ್ಲಿಗೆ ಕಾರು ಗುದ್ದಿ ಮೂವರು ಸಾವು.. ಅಪಘಾತದ ಭಯಾನಕ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ
Advertisment
  • ಕುಡಿದ ಮತ್ತಿನಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಐವರು
  • ಸಾವಿಗೂ ಮುನ್ನ ಅಪಘಾತದ ವಿಡಿಯೋ ಚಿತ್ರೀಕರಣ
  • ಲವ್ ಫೇಲ್ಯೂರ್ ಹಾಡು ಹಾಕಿಕೊಂಡು ಹೋಗುವಾಗ ಅಪಘಾತ

ವಿಜಯಪುರ: ರಸ್ತೆ ಪಕ್ಕದ ಕಲ್ಲಿಗೆ ಕಾರು ಗುದ್ದಿ ಮೂವರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಬಸವನಬಾಗೇವಾಡಿ -ಇಂಗಳೇಶ್ವರ ಮಾರ್ಗ ಮಧ್ಯದಲ್ಲಿ ಅಪಘಾತ ಸಂಭವಿಸಿದೆ. ಡೆಡ್ಲಿ ಆಕ್ಸಿಡೆಂಟ್ ಲೈವ್ ವಿಡಿಯೋ ಮೊಬೈಲ್​​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಡರಾತ್ರಿ ಕುಡಿದ ಮತ್ತಿನಲ್ಲಿ ಕಾರು ಚಲಿಸುವಾಗ ಅಪಘಾತವಾಗಿದೆ. ಅಪಘಾತದಲ್ಲಿ ಇಬ್ಬರಾದ ಮಲ್ಲು ಡೋಲಗೊಂಡ (32), ಪರಶು ಮಿಣಜಿಗಿ (26) ನರಳಾಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೇವಣಸಿದ್ಧ ಶೇಕಣ್ಣಿ (27) ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

publive-image

ಇದನ್ನೂ ಓದಿ: ಕೇದಾರನಾಥ ದೇವಸ್ಥಾನದಲ್ಲಿ 228kg ಚಿನ್ನ ನಾಪತ್ತೆ! ಈ ಗಂಭೀರ ಆರೋಪ ಮಾಡಿದ್ಯಾರು ಗೊತ್ತಾ?

ಜುಲೈ 8ರಂದು ರಾತ್ರಿ 10-32ಕ್ಕೆ ನಡೆದಿದ್ದ ಘಟನೆ ಇದಾಗಿದೆ. ಐವರು ಬಸವನಬಾಗೇವಾಡಿಯಿಂದ ಇಂಗಳೇಶ್ವರ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಕುಡಿದ ಮತ್ತಿನಲ್ಲಿ ಖುಷಿಯಲ್ಲಿ ತೇಲಾಡುತ್ತಿದ್ದರು. ಈ ವೇಳೆ ಆಕ್ಸಿಡೆಂಟ್ ಆಗಿದೆ. ಐವರ ಪೈಕಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಬದುಕುಳಿದಿದ್ದಾರೆ. ಮೃತರು ಇಂಗಳೇಶ್ವರ ಗ್ರಾಮದವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಪರೀತ ಮಳೆ, ಹಳ್ಳದಂತಾದ ಬಸ್ ನಿಲ್ದಾಣ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಬಸವನಬಾಗೇವಾಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿಕೊಂಡು ರಾತ್ರಿ ಕಾರಿನಲ್ಲಿ ಇಂಗಳೇಶ್ವರ ಗ್ರಾಮಕ್ಕೆ ತೆರಳುತ್ತಿದ್ದರು. ಕಾರಿನ ಮುಂಭಾಗದ ಕುಳಿತು ಮಲ್ಲು ತನ್ನ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನು. ‘ಹೇಂಗಿದ್ದಿ ಹೆಂಗ್ಯಾದಿ ಕುಡುಕ ಕುಡುಕ ಅಂತ ಕರಿಯಬ್ಯಾಡ ನೀನ’ ಅನ್ನೋ ಲವ್ ಫೇಲ್ಯೂರ್ ಜಾನಪದ ಹಾಡು ಹಾಕಿಕೊಂಡು ಕಾರಿನಲ್ಲಿ ತೆರಳಿದ್ದರು.


">July 16, 2024

ಇದನ್ನೂ ಓದಿ: ಡ್ರಗ್ಸ್​​ ಕೇಸ್​​ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್! 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

ಕುಡಿದ ಮತ್ತಿನಲ್ಲಿ ಕಾರಿನಲ್ಲಿ ಹಾಡು ಹಾಕಿಕೊಂಡು ಐವರು ಖುಷಿಯಾಗಿ ತೆರಳುತ್ತಿದ್ದರು. ಆದರೆ ಓವರ್ ಸ್ಪೀಡ್ ನಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಲ್ಲಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದ ವಿಡಿಯೋ ಮತ್ತು ನರಳಾಟದ ಆಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment