Advertisment

ದೀಪಾವಳಿಗೆಂದು ಊರಿಗೆ ಬಂದವರ ದುರಂತ ಅಂತ್ಯ; ನೀರಿನ ಹೊಂಡದಲ್ಲಿ ಮುಳುಗಿ ಮೂವರ ಸಾ*ವು!

author-image
Gopal Kulkarni
Updated On
ದೀಪಾವಳಿಗೆಂದು ಊರಿಗೆ ಬಂದವರ ದುರಂತ ಅಂತ್ಯ; ನೀರಿನ ಹೊಂಡದಲ್ಲಿ ಮುಳುಗಿ ಮೂವರ ಸಾ*ವು!
Advertisment
  • ಹಬ್ಬಕ್ಕೆಂದು ಊರಿಗೆ ಬಂದವರು ನೀರು ಪಾಲಾದ ಮೂವರು
  • ಈಜಲು ಹೊಂಡಕ್ಕೆ ಇಳಿದ ಇಬ್ಬರು ಯುವಕರು ಓರ್ವ ಯುವತಿ
  • ಈಜು ಬಾರದೇ ಹೊಂಡದಲ್ಲಿ ಮುಳುಗಿ ಪ್ರಾಣ ಬಿಟ್ಟ ಮೂವರು

ನೀರಿನ ಹೊಂಡದಲ್ಲಿ ಬಿದ್ದು ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಂಬತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಓರ್ವ ಯುವತಿ ಇಬ್ಬರು ಯುವಕರು ನೀರು ಪಾಲಾದ ದುರಂತಕ್ಕೆ ಈ ಗ್ರಾಮ ಸಾಕ್ಷಿಯಾಗಿದೆ.

Advertisment

ಇದನ್ನೂ ಓದಿ:ಎಮ್ಮೆ ನಮ್ಮ ಹೆಮ್ಮೆ.. ಗಡಿನಾಡ ದೀಪಾವಳಿಯಲ್ಲೊಂದು ವಿಶಿಷ್ಟ ಆಚರಣೆ!

ಮೃತರನ್ನು 27 ವರ್ಷದ ರಂಜಿತ್​, 21 ವರ್ಷದ ಅಭಿಲಾಷ್ ಹಾಗೂ 24 ವರ್ಷದ ರಮ್ಯ ಎಂದು ಗುರುತಿಸಲಾಗಿದೆ. ಯಲಹಂಕ ನಿವಾಸಿ ಸುಭ್ರಮಣಿ ಅವರ ಮಗ ರಂಜನ್ ಕಮ್ಮತ್ತನಹಳ್ಳಿ ಮೂಲದ ಬೆಂಗಳೂರಿನ ಕಿತ್ತಗಾನಹಳ್ಳಿ ನಿವಾಸಿ ಲಕ್ಷ್ಮೀನಾರಾಯಣಪ್ಪ ಅವರ ಮಗಲ ಅಭಿಲಾಷ್, ಬೆಂಗಳೂರಿನ ಕಮ್ಮತ್ತನಹಳ್ಳಿ ನಿವಾಸಿ ನಾಗಭೂಷಣ್ ಅವರ ಪುತ್ರಿ ರಮ್ಯಾ ಎಂದು ಮೃತರನ್ನು ಗುರುತಿಸಲಾಗಿದೆ.

ಇದನ್ನೂ ಓದಿ:ಪ್ರತಿಭಾವಂತ ನಿರ್ದೇಶಕನನ್ನು ಬಲಿ ಪಡೀತಾ ಅವರ ಲೈಫ್​ಸ್ಟೈಲ್​? ಗುರುಪ್ರಸಾದ್​ ಬದುಕಲ್ಲಿ ನಡೆದಿದ್ದು ಏನು?

ದೀಪಾವಳಿ ವೇಳೆ ಹಬ್ಬಕ್ಕೆ ಊರಿಗೆ ಅಂತ ಬಂದಿದ್ದ  ಯುವತಿ ಯುವಕರು ಈಜಲು ಹೋಗಿದ್ದಾರೆ. ಈ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment