ಅಭಿಮಾನಿಗಳ ಅತಿರೇಕದ ಪರಮಾವಧಿ; ಪುಷ್ಪ-2 ನೋಡಲು ಹೋಗಿದ್ದ ಮೂವರು ಜೀವವನ್ನೇ ಬಿಟ್ಟರು!

author-image
Ganesh Nachikethu
Updated On
ಅಭಿಮಾನಿಗಳ ಅತಿರೇಕದ ಪರಮಾವಧಿ; ಪುಷ್ಪ-2 ನೋಡಲು ಹೋಗಿದ್ದ ಮೂವರು ಜೀವವನ್ನೇ ಬಿಟ್ಟರು!
Advertisment
  • ದುರಂತಗಳಿಗೆ ಸಾಕ್ಷಿಯಾದ ಪುಷ್ಪ-2 ಸಿನಿಮಾ ಸಂಭ್ರಮ
  • ಪುಷ್ಪ-2 ಚಿತ್ರ ನೋಡಲು ಹೋದಾಗ ನೂಕುನುಗ್ಗಲು..!
  • ಹೈದ್ರಾಬಾದ್ ಸಂಧ್ಯಾ ಥಿಯೇಟರ್​​​ನಲ್ಲಿ ದೊಡ್ಡ ದುರಂತ

ಇದು ಅಭಿಮಾನ ಅತಿರೇಕದ ಪರಮಾವಧಿ. ಯಾವುದೇ ಆದ್ರೂ ಅತಿಯಾದ್ರೆ ವಿಷ. ಇಲ್ಲಿ ಆಗಿರೋದು ಅದೇ. ಬಹುನಿರೀಕ್ಷಿತ ಪುಷ್ಪ-2 ಸಿನಿಮಾ ವರ್ಲ್ಡ್​​ವೈಡ್ ರಿಲೀಸ್​ ಆಗಿದೆ. ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ಆದ್ರೆ ಪುಷ್ಪ-2 ಮೇಲಿನ ಅಭಿಮಾನವೇ ಸಾವು-ನೋವುಗಳಿಗೆ ಕಾರಣವಾಗಿದೆ.

ವಿಶ್ವದೆಲ್ಲೆಡೆ ಪುಷ್ಪ-2 ದರ್ಬಾರ್ ಶುರುವಾಗಿದೆ. ಥಿಯೇಟರ್​ಗಳ ಎದುರು ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಲ್ಲು ಅರ್ಜುನ್ ಗತ್ತು-ಗೈರತ್ತು ಹುಚ್ಚೆಬ್ಬಿಸಿದೆ. ‘ಪುಷ್ಪರಾಜ’ನ ಜಾತ್ರೆ ನೋಡಲು ಅಭಿಮಾನಿಗಳ ಸಾಗರ ನುಗ್ಗುತ್ತಿದೆ. ಈ ಸಂಭ್ರಮ, ಸಡಗರ ಸಾವು-ನೋವಿಗೂ ಸಾಕ್ಷಿಯಾಗಿದೆ.

ಪುಷ್ಪ-2 ಚಿತ್ರ ನೋಡಲು ಹೋದಾಗ ನೂಕುನುಗ್ಗಲು!

ಟಾಲಿವುಡ್​ ಐಕಾನ್ ಸ್ಟಾರ್ ಅಲ್ಲು ಅರ್ಜುನ್, ನ್ಯಾಷನಲ್ ಕ್ರಷ್ ರಶ್ಮಿಕಾ ಜೋಡಿಯ ಪುಷ್ಪ-2 ವಿಶ್ವಾದ್ಯಂತ ತೆರೆಗಪ್ಪಳಿಸಿದೆ. ಎಲ್ಲೆಡೆ ಸುನಾಮಿಯಂತೆ ಮುಗಿಬಿದ್ದು ಅಭಿಮಾನಿಗಳು ಸಿನಿಮಾ ವೀಕ್ಷಿಸ್ತಿದ್ದಾರೆ. ಆದ್ರೆ ಫಸ್ಟ್ ಡೇ ಫಸ್ಟ್ ಶೋ ನೋಡುವ ಕಾತುರ ಹೈದ್ರಾಬಾದ್​​ನಲ್ಲಿ ಮೂವರನ್ನು ಬಲಿ ಹಾಕಿದೆ. ನಿನ್ನೆ ರಾತ್ರಿ ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ ಬಳಿ ಪ್ರೀಮಿಯರ್ ಶೋ ವೇಳೆ ದುರಂತ ಸಂಭವಿಸಿದೆ. ನಿನ್ನೆ ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್​ ಬರ್ತಾರೆ ಎಂಬ ಸುದ್ದಿ ತಿಳಿದು ಅಪಾರ ಪ್ರಮಾಣದ ಅಭಿಮಾನಿಗಳು ಸೇರಿದ್ದರು. ಥಿಯೇಟರ್ ಒಳಗೆ ನುಗ್ಗಲು ಯತ್ನಿಸಿದಾಗ ಜನರ ನಿಯಂತ್ರಣಕ್ಕಾಗಿ ಪೊಲೀಸರು ಲಾಠಿ ಬೀಸಿದ್ದಾರೆ. ಜನ ಭಯಭೀತರಾಗಿ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಸಿನಿಮಾ ನೋಡಲು ಬಂದಿದ್ದು ಈ ವೇಳೆ ತಾಯಿ ಹಾಗೂ ಇಬ್ಬರು ಮಕ್ಕಳು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸೇರಿಸಿದ್ರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಊರ್ವಶಿ ಥಿಯೇಟರ್ ಎದುರು ಅಭಿಮಾನಿಗಳ ಹುಚ್ಚಾಟ!

ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ಅಭಿಮಾನಿಳು ಹುಚ್ಚಾಟ ಮೆರೆದಿದ್ದಾರೆ. ಸ್ಕ್ರೀನ್‌ ಮುಂದೆ ಬೆಂಕಿ ಹಚ್ಚಿ ಸಂಭ್ರಮಾಚರಣೆ ನಡೆಸಿದ್ದಾರೆ. ಪುಷ್ಪ ಚಿತ್ರ ಹಾಡು ಬರುತ್ತಿದ್ದಂತೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಸಿಬ್ಬಂದಿ ಸ್ಕ್ರೀನ್​ಗೆ ತೊಂದರೆ ಆಗುತ್ತೆ ಎಂದಿದ್ದಾರೆ. ಹೀಗಾಗಿ ಸಿಬ್ಬಂದಿ ಹಾಗೂ ಅಭಿಮಾನಿಗಳ ನಡುವೆ ವಾಗ್ವಾದ ನಡೆದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಹುಚ್ಚಾಟ ಮೆರೆಯುತ್ತಿದ್ದ ಅಭಿಮಾನಿಗಳನ್ನ ವಶಕ್ಕೆ ಪಡೆದಿದ್ದಾರೆ.

ಪುಷ್ಪ-2 ನೋಡಲು ಹೋಗ್ತಿದ್ದ ಯುವಕ ದಾರುಣ ಸಾವು

ಮತ್ತೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಪುಷ್ಪ-2 ಸಿನಿಮಾ ನೋಡಲು ತೆರಳುತ್ತಿದ್ದ ಯುವಕ ರೈಲಿಗೆ ಸಿಲುಕಿ ದಾರುಣ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ರೈಲ್ವೇ ಸೇತುವೆ ಬಳಿ ದುರಂತ ನಡೆದಿದೆ. ಮೃತ ಯುವಕನನ್ನು ಆಂಧ್ರಪ್ರದೇಶದ ಪಾಲಕೊಂಡ ನಿವಾಸಿ 19 ವರ್ಷದ ಪ್ರವೀಣ್ ಅಂತ ಗುರುತಿಸಲಾಗಿದೆ. ರೈಲ್ವೇ ಹಳಿ ದಾಟುವ ವೇಳೆ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ:ಪುಷ್ಪ-2 ನೋಡುವ ಆತುರ, ಕರ್ನಾಟಕದಲ್ಲೂ ದುರಂತ.. 19 ವರ್ಷಕ್ಕೆ ಬದುಕು ಮುಗಿಸಿದ ಯುವಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment