newsfirstkannada.com

Video: ಮನೆಗೆ ನುಗ್ಗಿ ಸಿಕ್ಕ, ಸಿಕ್ಕವರಿಗೆ ಪರಚಿದ ಚಿರತೆ; ಮೂವರಿಗೆ ಗಂಭೀರ ಗಾಯ

Share :

Published December 19, 2023 at 8:28pm

Update December 19, 2023 at 8:29pm

    ಬೆಳ್ಳಂಬೆಳಗ್ಗೆ ಜಿಎಸ್‌ ಕಾಲೋನಿಯ ಮನೆ ಒಳಗೆ ನುಗ್ಗಿದ್ದ ಚಿರತೆ

    ಚಿರತೆ ಸೆರೆ ಹಿಡಿಯೋ ಕಾರ್ಯಾಚರಣೆಯಲ್ಲಿ ಮತ್ತಷ್ಟು ಆಪತ್ತು!

    ಇಬ್ಬರು ಅರಣ್ಯ ಸಿಬ್ಬಂದಿ ಸೇರಿದಂತೆ ಮೂವರಿಗೆ ಗಂಭೀರ ಗಾಯ

ಗುವಾಹಟಿ: ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆ ಇಡೀ ದಿನ ಭಾರೀ ಆತಂಕ ಸೃಷ್ಟಿಸಿದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಇಂದು ಬೆಳಗ್ಗೆಯೇ ಗುವಾಹಟಿ ಜನವಸತಿ ಪ್ರದೇಶಕ್ಕೆ ನುಗ್ಗಿದ ವ್ಯಾಘ್ರ ಸಿಕ್ಕ, ಸಿಕ್ಕವರ ಮೇಲೆ ದಾಳಿ ಮಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಬೋನು ಅಳವಡಿಸಿದ್ದರು.

ಅರಣ್ಯ ಇಲಾಖೆಗೂ ಬೋನಿಗೂ ಬೀಳದ ಚಿರತೆ ಜನವಸತಿ ಪ್ರದೇಶದಲ್ಲಿ ಮನೆಯಿಂದ ಮನೆಗೆ ನುಗ್ಗಿತ್ತು. ಫಟಾಸಿಲ್ ಅಂಬ್ರಿಯ ಜಿಎಸ್ ಕಾಲೋನಿಯ ಮನೆಯಲ್ಲಿ ಚಿರತೆ ಮೊದಲಿಗೆ ಪ್ರತ್ಯಕ್ಷವಾಗಿತ್ತು. ಚಿರತೆ ಹಿಡಿಯಲು ಹರಸಾಹಸ ಪಡಲಾಗಿದೆ. ಚಿರತೆ ಸೆರೆ ಹಿಡಿಯೋ ಕಾರ್ಯಾಚರಣೆಯಲ್ಲಿ ಗಾಬರಿಯಾಗಿದ್ದ ಚಿರತೆ ಇಬ್ಬರು ಅರಣ್ಯ ಸಿಬ್ಬಂದಿ ಸೇರಿದಂತೆ ಮೂವರಿಗೆ ಗಂಭೀರ ಗಾಯ ಮಾಡಿದೆ.

ಮನೆಯಲ್ಲಿದ್ದವರಿಗೆ ಪರಚಿದ ಚಿರತೆ ನಂತರ ಮಹಡಿಯ ಮೇಲೆ ಹೋಗಿ ತಿರುಗಾಡುತ್ತಿತ್ತು. ಕೊನೆೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕೊನೆಗೂ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಮನೆಗೆ ನುಗ್ಗಿ ಸಿಕ್ಕ, ಸಿಕ್ಕವರಿಗೆ ಪರಚಿದ ಚಿರತೆ; ಮೂವರಿಗೆ ಗಂಭೀರ ಗಾಯ

https://newsfirstlive.com/wp-content/uploads/2023/12/Guwahatti-Leopard.jpg

Load More