/newsfirstlive-kannada/media/post_attachments/wp-content/uploads/2024/12/Devdutt-Padikkal-RCB-News.jpg)
ಇಂದಿನಿಂದ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲಿದೆ. ಈಗಾಗಲೇ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಿರೋ ಆರ್‌ಸಿಬಿ ಬಲಿಷ್ಠ ತಂಡ ಕಟ್ಟಿದೆ. 22 ಆಟಗಾರರನ್ನು ಹೊಂದಿರೋ ತಂಡದಲ್ಲಿ ಪ್ಲೇಯಿಂಗ್-11 ಆಯ್ಕೆ ಮಾಡೋದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಈ ಮೂವರು ಆಟಗಾರರಿಗೆ ಆರ್‌ಸಿಬಿ ಪ್ಲೇಯಿಂಗ್ ಎಲೆವೆನ್ನಲ್ಲಿ ಸ್ಥಾನ ಸಿಗೋದು ಡೌಟ್ ಆಗಿದ್ದು, ಇವರು ಬೆಂಚ್ ಕಾಯಲೇಬೇಕಿದೆ.
ಆರ್‌ಸಿಬಿ ತಂಡದಲ್ಲಿಲ್ಲ ಕನ್ನಡಿಗನಿಗೆ ಸ್ಥಾನ
ಕರ್ನಾಟಕ ಸ್ಟಾರ್ ಪ್ಲೇಯರ್ ದೇವದತ್ ಪಡಿಕ್ಕಲ್ ಅವರನ್ನು ಆರ್‌ಸಿಬಿ ಟೀಮ್ 2 ಕೋಟಿಗೆ ಖರೀದಿಸಿದೆ. ಆದರೆ ಅವರಿಗೆ ಆಡುವ ಅವಕಾಶ ತುಂಬಾ ಕಡಿಮೆ. ಇದಕ್ಕೆ ದೊಡ್ಡ ಕಾರಣ ಅವರ ಕಳಪೆ ಫಾರ್ಮ್. ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನೀಡಿದ ಪ್ರದರ್ಶನ ಅಷ್ಟಕಷ್ಟೇ. RCB ಮಿಡಲ್ ಆರ್ಡರ್ ಬ್ಯಾಟರ್ ಆಗಿ ಲಿಯಾಮ್ ಲಿವಿಂಗ್ಸ್ಟೋ, ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ದಂಡು ಇದೆ. ಇಂತಹ ಪರಿಸ್ಥಿತಿಯಲ್ಲಿ ಪಡಿಕ್ಕಲ್ಗೆ ಅವಕಾಶ ಸಿಗೋದು ಡೌಟ್.
ಸ್ಟಾರ್ ಬೌಲರ್ಗಿಲ್ಲ ಅವಕಾಶ
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಅವರನ್ನು ಬರೋಬ್ಬರಿ 1 ಕೋಟಿ ನೀಡಿ ಖರೀದಿ ಮಾಡಲಾಗಿದೆ. ಆದರೆ ಅವರು ಕಳೆದ ಮೂರು ವರ್ಷಗಳಿಂದ ಐಪಿಎಲ್‌ನ ಭಾಗವಾಗಿಲ್ಲ. ಅವರು ರಾಷ್ಟ್ರೀಯ ತಂಡದಿಂದ ಹೊರಗಿದ್ದಾರೆ. ಆರ್‌ಸಿಬಿ ತಂಡದಲ್ಲಿ ಜೋಶ್ ಹೇಜಲ್ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್ ರೀತಿಯ ದೈತ್ಯ ಬೌಲಿಂಗ್ ಪಡೆ ಇದೆ. ಹೀಗಾಗಿ ಲುಂಗಿ ಆಡುವ 11 ರಲ್ಲಿ ಅವಕಾಶ ಪಡೆಯೋದು ತುಂಬಾ ಕಷ್ಟ.
ಲಂಕಾ ಸ್ಟಾರ್ ತುಷಾರ್ ಆಡೋದು ಡೌಟ್
ಶ್ರೀಲಂಕಾದ ಸ್ಟಾರ್ ವೇಗಿ ನುವಾನ್ ತುಷಾರ. ಇವರನ್ನು ಆರ್‌ಸಿಬಿ 1.60 ಕೋಟಿ ರೂಪಾಯಿಗೆ ಖರೀದಿಸಿದೆ. ಇವರು ಕೂಡ ಪ್ಲೇಯಿಂಗ್-11ನಲ್ಲಿ ಅವಕಾಶ ಪಡೆಯೋದು ಕಷ್ಟ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾಗ ಸಿಕ್ಕ ಅವಕಾಶಗಳನ್ನು ಬಳಸಿಕೊಂಡಿಲ್ಲ.
ಇದನ್ನೂ ಓದಿ:ಇಂದು ಕೆಕೆಆರ್ ವಿರುದ್ಧ ಬಲಿಷ್ಠ ಆರ್‌ಸಿಬಿ ತಂಡ ಕಣಕ್ಕೆ; ಯಾರಿಗೆಲ್ಲಾ ಸ್ಥಾನ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ