/newsfirstlive-kannada/media/post_attachments/wp-content/uploads/2024/09/TEAM-INDIA-1.jpg)
ಇತ್ತೀಚೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ನ್ಯೂಜಿಲೆಂಡ್​​ ಬರೋಬ್ಬರಿ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್​ ತಂಡ 1-0 ಅಂತರದ ಮುನ್ನಡೆ ಸಾಧಿಸಿದೆ.
ಇನ್ನು, 2ನೇ ಟೆಸ್ಟ್​​ ಪಂದ್ಯವೂ ಪುಣೆಯಲ್ಲಿರೋ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಅಕ್ಟೋಬರ್​​ 24ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 28ರ ವರೆಗೆ ನಡೆಯಲಿದೆ. ಈ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಮೇಜರ್​ ಸರ್ಜರಿ ಆಗಲಿದೆ.
2ನೇ ಟೆಸ್ಟ್​​ನಿಂದ ಮೂವರಿಗೆ ಗೇಟ್​ ಪಾಸ್​​​
ಮೊದಲ ಟೆಸ್ಟ್​​ನಲ್ಲಿ ಹೀನಾಯ ಸೋಲಿನ ಬಳಿಕ ಟೀಮ್​ ಇಂಡಿಯಾ ಸ್ಟಾರ್​​ ಬ್ಯಾಟರ್​​​ ಕೆ.ಎಲ್​​ ರಾಹುಲ್​ ಹೆಚ್ಚು ಟೀಕೆಗೆ ಒಳಗಾಗಿದ್ದಾರೆ. ತವರಿನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸೋ ಮೂಲಕ ರಾಹುಲ್​ ಹೆಚ್ಚು ನಿರಾಸೆ ಮೂಡಿಸಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಇವರು 2ನೇ ಇನ್ನಿಂಗ್ಸ್​ನಲ್ಲಿ ಕೇವಲ 12 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಹೀಗಾಗಿ ಇವರು 2ನೇ ಟೆಸ್ಟ್​​ ಪಂದ್ಯದಿಂದ ಔಟ್​ ಆಗಬಹುದು.
ಬೆಂಗಳೂರು ಟೆಸ್ಟ್‌ನಲ್ಲಿ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸಾಕಷ್ಟು ನಿರಾಸೆ ಮೂಡಿಸಿದ್ರು. ತನ್ನ ತವರು ಪಿಚ್‌ನಲ್ಲಿಯೂ ಸಿರಾಜ್ ವಿಕೆಟ್ ಪಡೆಯಲು ಪರದಾಡಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದ ಇವರು, 2ನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಇವರ ಬದಲಿಗೆ ಆಕಾಶ್ ದೀಪ್​ಗೆ ಚಾನ್ಸ್ ನೀಡುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ಕೊಟ್ರೂ ಕುಲದೀಪ್ ಹೆಚ್ಚು ಪ್ರಭಾವ ಬೀರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದ್ರೂ ಇವರ ಎಕಾನಮಿಯಲ್ಲಿ 5ಕ್ಕಿಂತಲೂ ಹೆಚ್ಚು ರನ್​ ಬಿಟ್ಟುಕೊಟ್ರು. ಇವರನ್ನು ಕೈ ಬಿಟ್ಟು, ಆಲ್‌ರೌಂಡರ್ ಅಕ್ಷರ್ ಪಟೇಲ್​ಗೆ ಮಣೆ ಹಾಕೋ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ