ಲಾರಿಗೆ ಡಿಕ್ಕಿ.. ಹೊಸೂರಲ್ಲಿ ಮೂವರು ವಿದ್ಯಾರ್ಥಿಗಳು ದುರಂತ ಅಂತ್ಯ

author-image
Ganesh
Updated On
ಲಾರಿಗೆ ಡಿಕ್ಕಿ.. ಹೊಸೂರಲ್ಲಿ ಮೂವರು ವಿದ್ಯಾರ್ಥಿಗಳು ದುರಂತ ಅಂತ್ಯ
Advertisment
  • ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಸವಾರ ಡಿಕ್ಕಿ
  • ಮೂವರು ಶಾಲಾ ವಿದ್ಯಾರ್ಥಿಗಳ ದಾರುಣ ಅಂತ್ಯ
  • ಹೊಸೂರಿನ ಮತ್ತಿಗೆರೆ ರಸ್ತೆಯಲ್ಲಿ ಅಪಘಾತ

ಆನೇಕಲ್: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಮೂವರು ಶಾಲಾ ವಿಧ್ಯಾರ್ಥಿಗಳು ದುರಂತ ಅಂತ್ಯ ಕಂಡಿದ್ದಾರೆ. ತಮಿಳುನಾಡು ಹೊಸೂರಿನ ಮತ್ತಿಗೆರೆ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

ಮದನ್ ಕುಮಾರ್, ಹರೀಶ್ ಕುಮಾರ್, ಅರಿಯನ್ ಸಿಂಗ್ ಮೃತ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದರು. ಶಾಲೆ ಬಿಟ್ಟ ಬಳಿಕ ಮೂವರು ಸ್ನೇಹಿತರು ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡಿದ್ದರು.

publive-image

ಈ ವೇಳೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಸದ್ಯ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾ ಎಸ್ಪಿ ರಾಣತುರೈ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಗಂಡನ ನದಿಗೆ ತಳ್ಳಿದ್ದ ಕೇಸ್​​ಗೆ ಟ್ವಿಸ್ಟ್​.. ಅವನೇ ಹಾರಿದ್ನಾ? ಈಗ ಗದ್ದೆಮ್ಮ ಪರ ಅನುಕಂಪ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment