/newsfirstlive-kannada/media/post_attachments/wp-content/uploads/2024/06/NEET.jpg)
ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ NEET ಕೂಡ ಒಂದಾಗಿದೆ. ತಾಜಾ ಸಮಾಚಾರ ಏನೆದರೆ ಉತ್ತರ ಪ್ರದೇಶ ಆಗ್ರದಲ್ಲಿರುವ ಕುಟುಂಬ ಒಂದರ ಮೂವರು ಮಕ್ಕಳು ಸ್ಪೆಷಲ್ ಸಾಧನೆ ಮಾಡಿದ್ದಾರೆ. ಕಳೆದ ಶನಿವಾರ ಪ್ರಕಟವಾದ ನೀಟ್ ಪರೀಕ್ಷೆಯ ಫಲಿತಾಂಶದಲ್ಲಿ ಮೂವರು ಮಕ್ಕಳು ಮೆಚ್ಚುವಂತಹ ಮಾರ್ಕ್ಸ್​ ತೆಗೆದು ವೈದ್ಯಕೀಯ ಕೋರ್ಸ್​ಗೆ ಸೆಲೆಕ್ಟ್ ಆಗಿದ್ದಾರೆ.
ದಯಾಲ್​ಬಾಗ್ ನಿವಾಸಿ ಬೋಲಾರಾಮ್ ತ್ಯಾಗಿ ಕುಟುಂಬದ ಮಕ್ಕಳು ಈ ಸಾಧನೆ ಮಾಡಿದ್ದಾರೆ. ಅವಿಭಕ್ತ ಕಟುಂಬ ಇವರದ್ದಾಗಿದ್ದು, ಬೋಲಾರಾಮ್​ಗೆ ಮೂವರು ಮಕ್ಕಳು. ಮಹಾವೀರ್ ತ್ಯಾಗಿ, ಹೆತ್ರಾಮ್ ತ್ಯಾಗಿ, ಶಿವ ತ್ಯಾಗಿ ಎಂಬ ಮಕ್ಕಳಿದ್ದಾರೆ. ಮಹಾವೀರ್ ತ್ಯಾಗಿ ಅವರ ಮಕ್ಕಳಾದ ಪೂಜಾ, ಮನೋಜ್ ನೀಟ್ ಪರೀಕ್ಷೆಯಲ್ಲಿ ಱಂಕ್ ಬಂದಿದ್ದಾರೆ. ಜೊತೆಗೆ ಶಿವು ಅವರ ಮಗಳು ಮಾನ್ಸಿ ಅವರು ಕೂಡ ತೇರ್ಗಡೆಯಾಗಿದ್ದಾರೆ. ಮಹಾವೀರ್ ತ್ಯಾಗಿ ಅವರ ಹಿರಿಯ ಮಗ ಅಜಯ್ ತ್ಯಾಗಿ ಅನ್ನೋರು ಕೂಡ MBBS ಓದುತ್ತಿದ್ದಾರೆ.
ಹೇತ್ರಾಮ್ ಅನ್ನೋರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶಿವ ತ್ಯಾಗಿ ಉದ್ಯಮಿಯಾಗಿದ್ದಾರೆ. ಬೋಲಾರಾಮ್ ತ್ಯಾಗಿ ಕೂಡ ಬ್ಯುಸಿನೆಸ್​ಮ್ಯಾನ್ ಆಗಿದ್ದಾರೆ. ಈ ಕುಟುಂಬದ ಮಕ್ಕಳ ಸಾಧನೆಗೆ ಎಲ್ಲರೂ ಖುಷಿಯಾಗಿದ್ದಾರೆ. ವರದಿಗಳ ಪ್ರಕಾರ ಇವರು ಕಳೆದ ಎರಡು ವರ್ಷಗಳಿಂದ ಮೊಬೈಲ್​ನಿಂದ ದೂರ ಇದ್ದರು. ಸೋಶಿಯಲ್ ಮೀಡಿಯಾವನ್ನು ಬಳಸುತ್ತಿರಲಿಲ್ಲ. 14 ಗಂಟೆಗಳ ಕಾಲ ಓದುತ್ತಿದ್ದರು. ಟಿವಿ ಕೂಡ ನೋಡುತ್ತಿರಲಿಲ್ಲ ಎಂದು ವರದಿಯಾಗಿದೆ. ಮೂವರು 720ಕ್ಕೆ ಪೂಜಾ 676, ಮನೋಜ್ 671, ಮಾನಸಿ 640 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us