newsfirstkannada.com

KRS ಹಿನ್ನೀರಿನಲ್ಲಿ‌ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳ ದಾರುಣ ಸಾವು

Share :

Published July 16, 2023 at 1:56pm

Update July 16, 2023 at 1:58pm

  ಕಾಲೇಜು ಮುಗಿಸಿ ಈಜಲು ಹೋಗಿದ್ದ ವಿದ್ಯಾರ್ಥಿಗಳು

  ನೇರ ಮನೆಗೆ ತೆರಳದೇ KRS ಹಿನ್ನೀರಿಗೆ ಹೋಗಿ ದುರಂತ

  ಮೈಸೂರಿನ ಸಂತ ಜೋಸೆಫ್ ಕಾಲೇಜಿನ ಸ್ಟುಡೆಂಟ್ಸ್

ಮೈಸೂರು: ಕೃಷ್ಣಾ ರಾಜ ಸಾಗರ್ (KRS) ಹಿನ್ನೀರಿನಲ್ಲಿ‌ ಮೂವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ತಾಲೂಕಿನ ಮೀನಾಕ್ಷಿಪುರ ಬಳಿ ನಡೆದಿದೆ.

ಪ್ರವೀಣ್, ವರುಣ್, ಭರತ್ ಮೃತಪಟ್ಟ ವಿದ್ಯಾರ್ಥಿಗಳು. ಈ ಮೂವರು ಮೈಸೂರಿನ ಸಂತ ಜೋಸೆಫ್ ಕಾಲೇಜಿನಲ್ಲಿ BCA ವ್ಯಾಸಂಗ ಮಾಡುತ್ತಿದ್ದರು. ಸಾವನ್ನಪ್ಪಿದ ವಿದ್ಯಾರ್ಥಿಗಳು ತಾಲೂಕಿನ ರಾಮಕೃಷ್ಣ ನಗರ, ಪಡುವಾರಹಳ್ಳಿ, ಶ್ರೀರಂಗಪಟ್ಟಣದ ಬಲ್ಲೇನಹಳ್ಳಿ ಗ್ರಾಮಗಳಿಗೆ ಸೇರಿದವರಾಗಿದ್ದಾರೆ.

ನಿನ್ನೆ ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿಗಳು ಕೆಆರ್​ಎಸ್​ ಹಿನ್ನೀರಿನಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ನೀರಲ್ಲಿ ಆಟವಾಡುವಾಗ ನೀರಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೈಸೂರಿನ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KRS ಹಿನ್ನೀರಿನಲ್ಲಿ‌ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳ ದಾರುಣ ಸಾವು

https://newsfirstlive.com/wp-content/uploads/2023/07/MYS_THREE_DIE.jpg

Load More