NIA ಭರ್ಜರಿ ಬೇಟೆ.. ಪರಪ್ಪನ ಅಗ್ರಹಾರ ಜೈಲಿನ ASI, ಮನೋವೈದ್ಯ ಸೇರಿ ಮೂವರು ಶಂಕಿತರ ಬಂಧನ

author-image
Bheemappa
Updated On
NIA ಭರ್ಜರಿ ಬೇಟೆ.. ಪರಪ್ಪನ ಅಗ್ರಹಾರ ಜೈಲಿನ ASI, ಮನೋವೈದ್ಯ ಸೇರಿ ಮೂವರು ಶಂಕಿತರ ಬಂಧನ
Advertisment
  • ಚಿನ್ನಾಭರಣ, ನಗದು, ಡಿಜಿಟಲ್ ದಾಖಲೆಗಳು ಅಧಿಕಾರಿಗಳ ವಶಕ್ಕೆ
  • ಎನ್​ಐಎ ಅಧಿಕಾರಿಗಳಿಂದ ಒಟ್ಟು ಐದು ಕಡೆ ದಾಳಿ ನಡೆಸಲಾಗಿತ್ತು
  • ಶಂಕಿತ ಭಯೋತ್ಪಾದಕನ ತಾಯಿ ಕೂಡ ಇದೀಗ ಅರೆಸ್ಟ್ ಆಗಿದ್ದಾರೆ

ಬೆಂಗಳೂರು: 5 ಕಡೆ ದಾಳಿ ಮಾಡಿರುವ ಎನ್​ಐಎ (National Investigation Agency) ಅಧಿಕಾರಿಗಳು ಸಿಲಿಕಾನ್ ಸಿಟಿ ಹಾಗೂ ಕೋಲಾರದಲ್ಲಿ ಮೂವರು ಶಂಕಿತರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರದ ಮನೋವೈದ್ಯ ನಾಗರಾಜ್, ಎಎಸ್​ಐ ಚಾನ್ ಪಾಷಾ ಹಾಗೂ ತಲೆಮರೆಸಿಕೊಂಡಿರುವ ಶಂಕಿತ ಜುನೈದ್ ಅಹ್ಮದ್ ಅವರ ತಾಯಿ ಅನೀಸ್ ಫಾತೀಮಾರನ್ನು ಬಂಧಿಸಲಾಗಿದೆ. ಶೋಧನಾ ಸಮಯದಲ್ಲಿ, ಬಂಧಿತ ಆರೋಪಿಗಳು ಮತ್ತು ಇತರ ಶಂಕಿತರ ಮನೆಗಳಿಂದ ವಿವಿಧ ಡಿಜಿಟಲ್ ಸಾಧನಗಳು, ನಗದು, ಚಿನ್ನ ಮತ್ತು ಅಪರಾಧ ದಾಖಲೆ ವಶಪಡಿಸಿಕೊಳ್ಳಲಾಗಿದೆ. ದಾಳಿಯ ವೇಳೆ 2 ವಾಕಿಟಾಕಿ, ಚಿನ್ನಾಭರಣ ಹಾಗೂ ನಗದು, ಡಿಜಿಟಲ್ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ.

ಜೈಲಿನಿಂದಲೇ ಕರ್ನಾಟಕ ಸೇರಿ ದೇಶದಲ್ಲಿ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದ 5 ಕಡೆಗಳಲ್ಲಿ ಎನ್​​ಐಎ ದಾಳಿ ನಡೆಸಿತ್ತು. ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ ನಾಗರಾಜ್, ಎಎಸ್‌ಐ ಚಾನ್​​ ಪಾಷಾ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡ ಶಂಕಿತ ಜುನೈದ್ ಅಹ್ಮದ್‌ನ ತಾಯಿ ಅನೀಸ್ ಫಾತೀಮಾ ಅರೆಸ್ಟ್ ಆಗಿದ್ದಾರೆ. ದಾಳಿ ವೇಳೆ ಆರೋಪಿಗಳ ಮನೆಯಲ್ಲಿದ್ದ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ:ಕಾವೇರಿ ನದಿಗೆ ಹಾರಿದ ಯುವತಿ.. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಜಂಟಿ ಕಾರ್ಯಾಚರಣೆ

publive-image

ನಾಲ್ಕೈದು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿ ಕೆಲಸ ಮಾಡಿಕೊಂಡಿದ್ದ ನಾಗರಾಜ್ ಈ ನಡುವೆ ಜೀವಾವಧಿ ಶಿಕ್ಷೆಗೆ ಗುರಿಯಾದ ಎಲ್​ಇಟಿ ಸಂಘಟನೆ ದಕ್ಷಿಣ ಭಾರತದ ಮುಖ್ಯಸ್ಥ ಟಿ.ನಾಸೀರ್​ಗೆ ಮೊಬೈಲ್ ನೀಡಿ ಸಹಾಯ ಮಾಡಿದ್ದನು ಎನ್ನಲಾಗಿದೆ. ನಾಗರಾಜ್ ಕಳ್ಳ ಕೃತ್ಯಕ್ಕೆ ಸಹಾಯಕಿ ಪವಿತ್ರಾ ಎಂಬಾಕೆಯ ಸಹಾಯ ಮಾಡಿದ್ದಳು ಎನ್ನಲಾಗಿದೆ.

ಶಂಕಿತ ಜುನೈದ್ ಅಹ್ಮದ್ ತಾಯಿ ಅನೀಸ್ ಫಾತೀಮಾ ಜೈಲಿನಲ್ಲಿರುವ ಟಿ.ನಾಸೀರ್ ಎಲ್‌ಇಟಿಗೆ ಸಂಘಟನೆ ಮಾಡಲು ನಿಧಿ ಸಂಗ್ರಹದ ಆರೋಪವಿದೆ. ಹಾಗೂ ಇತರೆ ವಿಚಾರಗಳ ಬಗ್ಗೆ ನೀಡುತ್ತಿದ್ದ ಮಾಹಿತಿಯನ್ನ ವಿದೇಶದಲ್ಲಿರುವ ಮಗನಿಗೆ ರವಾನಿಸಿದ್ದಾರೆ. ಚಾಂದ್ ಪಾಷಾ, 2022ರಿಂದ ಟಿ.ನಾಸೀರ್ ಪರವಾಗಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment