/newsfirstlive-kannada/media/post_attachments/wp-content/uploads/2024/10/Jammu-Kashmir-AI.jpg)
ಕಾಶ್ಮೀರದಲ್ಲಿ ಅಡಗಿ ಕುಳಿತು ಭಾರತ ಮಾತೆಯ ವೀರ ಪುತ್ರರಿಗೆ ಸವಾಲಾಗಿರೋ ಉಗ್ರ ಕ್ರಿಮಿಗಳಿಗೆ ಕೇಡುಗಾಲ ಬಂದಿದೆ. ಬ್ಯಾಕ್ ಟು ಬ್ಯಾಕ್ ಬೇಟೆಯಾಡಿ ಉಗ್ರರಿಗೆ ಮಣ್ಣುಮುಕ್ಕಿಸುತ್ತಿರೋ ಸೇನೆ ಮತ್ತೊಂದು ಸಕ್ಸಸ್ ಫುಲ್ ಕಾರ್ಯಾಚರಣೆ ನಡೆಸಿದೆ. ಎಐ ತಂತ್ರಜ್ಞಾನ ಬಳಸಿ ಮೂವರು ಉಗ್ರರನ್ನ ಮಟ್ಟಹಾಕಿರೋ ಸೇನೆಯ ಈ ಆಪರೇಷನ್ ರಣರೋಚಕವಾಗಿದೆ.
ಕಣಿವೆ ನಾಡಿನಲ್ಲಿ ಹೊಂಚು ಹಾಕಿ ಕುಳಿತು ದೇಶದಲ್ಲಿ ಅಶಾಂತಿ ಸೃಷ್ಟಿಸೋ ಕುತಂತ್ರ ಹೆಣೆದಿದ್ದ ಕೀಚಕರಿಗೆ ಕೇಡುಗಾಲ ಬಂದಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಜನ್ಮ ಜಾಲಾಡುತ್ತಿರೋ ಸೇನೆ ಒಂದೊಂದೇ ನರರೂಪದ ರಕ್ಕಸರ ಹೆಡೆಮುರಿ ಕಟ್ಟುತ್ತಿದೆ. ಎಐ ತಂತ್ರಜ್ಞಾನ ನೆರವಿನಿಂದ ಸೇನೆ ಮೂವರು ಉಗ್ರರಿಗೆ ಮಣ್ಣು ಮುಕ್ಕಿಸಿರೋದು ಸೇನೆಯ ಪರಾಕ್ರಮವನ್ನ ಸಾರಿ ಹೇಳಿದೆ.
ಕಣಿವೆ ನಾಡಿನ ಕಾನನದಲ್ಲಿ ಮೂವರು ಉಗ್ರರ ರಣಬೇಟೆ
AI ನೆರವಿಂದ ಅಡಗಿ ಕೂತಿದ್ದ ಮೂವರು ಉಗ್ರರು ಫಿನಿಶ್
ಜಮ್ಮು-ಕಾಶ್ಮೀರದ ಅಖ್ನೂರ್ ವಲಯದಲ್ಲಿ ಸೇನಾ ವಾಹನಗಳ ಮೇಲೆ ದಾಳಿ ನಡೆಸಿದ್ದ ಉಗ್ರರ ವಿರುದ್ಧ ಭದ್ರತಾ ಪಡೆಗಳು ಖಡಕ್ ಕಾರ್ಯಾಚರಣೆ ಆರಂಭಿಸಿದ್ದವು. ಆಪರೇಷನ್ ಆಸನ್ ಹೆಸರಿನಲ್ಲಿ ದಟ್ಟ ಕಾನನದಲ್ಲಿ ತಲೆ ಮರೆಸಿಕೊಂಡಿದ್ದ ಉಗ್ರರ ಜನ್ಮ ಜಲಾಡಿ, ಉಗ್ರರು ಅವಿತು ಕುಳಿತಿದ್ದ ಬಿಲವನ್ನ AI ತಂತ್ರಜ್ಞಾನದ ಡ್ರೋನ್ ಸಹಾಯದಿಂದ ಪತ್ತೆ ಹಚ್ಚಿತ್ತು. ಬಳಿಕ ಅಖಾಡಕ್ಕಿಳಿದ ಭಾರತ ಮಾತೆ ಪುತ್ರರು ಮೂವರು ಉಗ್ರರಿಗೆ ಮಂಗಳ ಹಾಡಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ ಪಂತ್ಗೆ ಬಿಗ್ ಶಾಕ್; ಡೆಲ್ಲಿ ಉಳಿಸಿಕೊಂಡ ಆಟಗಾರರು ಇವರೇ ನೋಡಿ!
ದಟ್ಟಕಾನನದಲ್ಲಿ ಮಾನವ ರಹಿತ ಡ್ರೋನ್ನ ಮಿರಾಕಲ್
ಅಖ್ನೂರ್ ಪ್ರದೇಶದ ದಟ್ಟ ಕಾನನದಲ್ಲಿ ತಲೆ ಮರೆಸಿಕೊಂಡಿದ್ದ ಉಗ್ರರ ಬೇಟೆ ಸೇನೆಗೆ ಸವಾಲಾಗಿತ್ತು. ಕಾಡಿನ ಪಕ್ಕದಲ್ಲೇ ಗ್ರಾಮವೂ ಇದ್ದ ಕಾರಣ ಜನರ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಬೇಕಿತ್ತು. ಇತ್ತ ಯೋಧರಿಗೂ ಯಾವುದೇ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕಿತ್ತು.. ಹೀಗಾಗಿ ಸೇನೆ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮೊರೆ ಹೋಗಿತ್ತು.. ಮಾನವ ರಹಿತ ಡ್ರೋನ್ ಬಳಕೆ ಮಾಡಿದ ಸೇನೆ ಉಗ್ರರು ಅಡಗಿದ್ದ ನೆಲೆ ಪತ್ತೆ ಹಚ್ಚಿತ್ತು.. ಬಳಿಕ ಗುಂಡಿನ ದಾಳಿ ನಡೆಸಿ ಮೂವರು ಉಗ್ರರನ್ನ ಹತ್ಯೆ ಮಾಡಲಾಯ್ತು ಅಂತ ಸೇನೆಯ ಮೇಜರ್ ಜನರಲ್ ಸಮೀರ್ ಶ್ರೀವಾಸ್ತವ್ ಹೇಳಿದ್ದಾರೆ.
ಕಣಿವೆ ನಾಡಲ್ಲಿ ಅಡಗಿ ದೇಶದಲ್ಲಿ ಆತಂಕ ಸೃಷ್ಟಿಸಿರೋ ಉಗ್ರರಿಗೆ ಉಳಿಗಾಲವಿಲ್ಲ ಅಂತ ಆಪರೇಷನ್ ಆಸನ್ ಮೂಲಕ ಸೇನೆ ಘರ್ಜಿಸಿ ಹೇಳಿದೆ. ಸೇನೆ ನಡೆಸಿದ ಜಬರ್ದಸ್ತ್ ಆಪರೇಷನ್ಗೆ ನಾವೆಲ್ಲರೂ ಒಂದು ಸೆಲ್ಯೂಟ್ ಹೇಳಬೇಕಿದೆ. ಅಲ್ಲದೇ ಹುತಾತ್ಮ ಶ್ವಾನ ಫ್ಯಾಂಟಮ್ ಆತ್ಮಕ್ಕೂ ಶಾಂತಿ ಸಿಗಲಿ ಅಂತ ಪ್ರಾರ್ಥಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ