ಆಪರೇಷನ್ ಕೆಲ್ಲಾರ್‌.. 14 ಹಿಟ್ ಲಿಸ್ಟ್‌ನಲ್ಲಿ 6 ಉಗ್ರರು ಫಿನಿಶ್; ಭಾರತೀಯ ಸೇನೆ ಭರ್ಜರಿ ಬೇಟೆ!

author-image
admin
Updated On
ಆಪರೇಷನ್ ಕೆಲ್ಲಾರ್‌.. 14 ಹಿಟ್ ಲಿಸ್ಟ್‌ನಲ್ಲಿ 6 ಉಗ್ರರು ಫಿನಿಶ್; ಭಾರತೀಯ ಸೇನೆ ಭರ್ಜರಿ ಬೇಟೆ!
Advertisment
  • ಅಟ್ಟಾಡಿಸಿಕೊಂಡು ಹೋಗಿ ಉಗ್ರರನ್ನ ಹೊಡೀತಿರುವ ಭದ್ರತಾ ಪಡೆ
  • ಹುಡುಕಿ, ಹುಡುಕಿ ಭಯೋತ್ಪಾದಕರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿ
  • 14 ಉಗ್ರರ ಹಿಟ್ ಲಿಸ್ಟ್ ರೆಡಿ ಮಾಡಿಕೊಂಡಿದ್ದ ಭಾರತೀಯ ಸೇನೆ

ನವದೆಹಲಿ: ಆಪರೇಷನ್ ಕೆಲ್ಲಾರ್‌ನಲ್ಲಿ 14 ಉಗ್ರರ ಹಿಟ್ ಲಿಸ್ಟ್ ರೆಡಿ ಮಾಡಿಕೊಂಡ ಭಾರತೀಯ ಸೇನೆ ಕಳೆದ 48 ಗಂಟೆಗಳಲ್ಲೇ 6 ಉಗ್ರರನ್ನ ನರಕಕ್ಕೆ ಪಾರ್ಸೆಲ್ ಮಾಡಿದೆ. ಅಟ್ಟಾಡಿಸಿಕೊಂಡು ಹೋಗಿ ಉಗ್ರರನ್ನ ಹೊಡೀತಿರುವ ಭದ್ರತಾ ಪಡೆ, ಹುಡುಕಿ, ಹುಡುಕಿ ಭಯೋತ್ಪಾದಕರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಇವತ್ತು ಪುಲ್ವಾಮಾದ ಟ್ರಾಲ್​ನಲ್ಲಿ ಭಾರತೀಯ ಸೇನೆ ಜೈಶ್ ಏ ಮೊಹಮ್ಮದ್​ನ ಮೂವರು ಉಗ್ರರನ್ನ ಹೊಡೆದುರುಳಿಸಿದೆ. ಸೇನೆ, ಉಗ್ರರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಮೂವರ ಹತ್ಯೆಯಾಗಿದೆ.

ಉಗ್ರರ ರುಂಡ ಚಂಡಾಡಿದ ಸೇನೆ!
ಕಳೆದ 2 ದಿನಗಳ ಹಿಂದೆ ಶೋಫಿಯಾನ್​ನಲ್ಲಿ ಭಾರತೀಯ ಸೇನೆ ಮೂವರು ಭಯೋತ್ಪಾದಕರನ್ನ ಹೊಡೆದುರುಳಿಸಿತ್ತು. ಮೂವರು ಉಗ್ರರನ್ನ ಸದೆ ಬಡಿದು, ಅಪಾರ ಶಸ್ತಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು.

publive-image

ಇವತ್ತು ಪುಲ್ವಾಮಾದ ಟ್ರಾಲ್​ನಲ್ಲಿ ಜೈಶ್ ಏ ಮೊಹಮ್ಮದ್ ಸಂಘಟನೆಯ ಆಸೀಫ್ ಅಹ್ಮದ್ ಶೇಖ್, ಆಮಿರ್ ನಾಝಿರ್ ವಾನಿ, ಯಾವರ್ ಅಹ್ಮದ್ ಭಟ್​ ಅನ್ನೂ ಭದ್ರತಾ ಪಡೆ ಹೊಡೆದು ಹಾಕಿದೆ. ಈ ಮೂವರೂ ಉಗ್ರರಾಗಿದ್ದು, ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯವರು ಎನ್ನಲಾಗಿದೆ.

ಇದನ್ನೂ ಓದಿ: ಭಾರತ, ಪಾಕ್ ಸಂಘರ್ಷದಲ್ಲಿ ಗೆಲುವು ಯಾರಿಗೆ? ಎಷ್ಟು ಕೋಟಿ ನಷ್ಟ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ! 

ಆಪರೇಷನ್ ಕೆಲ್ಲಾರ್ ಕಾರ್ಯಾಚರಣೆ ನಡೆಸ್ತಿರುವ ಭದ್ರತಾ ಪಡೆ ಮೊನ್ನೆ ಲಷ್ಕರ್ ಏ ತೋಯ್ಬಾದ ಮೂವರನ್ನ ಸೇನೆ ಹೊಡೆದು ಹಾಕಿತ್ತು. ಇಂದು ಕಾಶ್ಮೀರದ ಟ್ರಾಲ್‌ನಲ್ಲಿ ಮೂವರು ಜೈಷ್ ಇ ಮೊಹಮ್ಮದ್ ಸಂಘಟನೆಯ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment