newsfirstkannada.com

ಚೂರಿ ತೋರಿಸಿ 17 ಲಕ್ಷ ರೂಪಾಯಿ ದೋಚಿದ ಚೋರರು.. ಸಿನಿಮಾ ಸ್ಟೈಲ್​ನಲ್ಲಿ ಕಳ್ಳರ ಹಿಡಿದ ಪೊಲೀಸರು..!

Share :

Published February 28, 2024 at 9:25am

Update February 28, 2024 at 9:27am

    ಕಳ್ಳರ ಹಿಡಿದ ಪೊಲೀಸರಿಗೆ ಬಂಪರ್ ಬಹುಮಾನ ಘೋಷಣೆ

    ಘಟನೆ ನಡೆದ 24 ಗಂಟೆಯಲ್ಲಿ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ

    ಸೈಟ್ ಖರೀದಿಸಲು ತಂದ ಹಣ ಎಗರಿಸಿದ್ದ ಕಿರಾತಕ ಕಳ್ಳರು

ಕೊಪ್ಪಳದ ಕಾರಟಗಿಯಲ್ಲಿ ಸಿನಿಮಿಯ ಮಾದರಿಯಲ್ಲಿ ಹಣ ದೋಚಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದು ಸುಮಾರು 17.32 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ.

ಹಣ ಕಳೆದುಕೊಂಡ ಅಮರಾಪುರದ ಸುರೇಶರೆಡ್ಡಿ ಬ್ಯಾಗ್​ನಲ್ಲಿ 20 ಲಕ್ಷ ನಗದು ಇಟ್ಟುಕೊಂಡು ಸಿಂಧನೂರು ಕಡೆಗೆ ತೆರಳುವಾಗ ಕಾರಿನಲ್ಲಿ ಬಂದ ನಾಲ್ವರು ಖದೀಮರು ಚಾಕು ತೋರಿಸಿ ಹಣ ದೋಚಿದ್ದಾರೆ. ದರೋಡೆಕೋರರ ಬೆನ್ನು ಹತ್ತಿದ ಪೊಲೀಸರು 24 ಗಂಟೆಯಲ್ಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಮಂಗಳವಾರ ವೇಳೆಗೆ ಮತ್ತೆ ಮೂವರನ್ನು ಬಲೆಗೆ ಕೆಡವಿ ವಶಕ್ಕೆ ಪಡೆದಿದ್ದಾರೆ.

ಗಂಗಾವತಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದಾಗ ದಾಳಿ ನಡೆಸಿದ್ದು, ಹುಸೇನಬಾಷಾ ಅಲಿಯಾಸ್ ಸಲೀಂ, ಶಿವಮೂರ್ತಿ, ಉದಯಸಿಂಗ್, ಹನುಮೇಶ, ಹುಸೇನ್ ಬಾಷಾ ಅಲಿಯಾಸ್ ಬಾಷಾ, ಪೃಥ್ವಿರಾಜ್ ಬಂಧಿತರು ಎಂದು ಮಂಗಳವಾರ ಎಸ್ಪಿ ಯಶೋದಾ ವಂಟಗೋಡಿ ಮಾಹಿತಿ ನೀಡಿದ್ದಾರೆ. ಸೈಟ್ ಖರೀದಿಗೆಂದು ಹಣ ಜೋಡಿಸಿಕೊಂಡು ಸುರೇಶ ರೆಡ್ಡಿ ಗಂಗಾವತಿಗೆ ಬಂದಿದ್ದರು. ಸೈಟ್ ಮಾಲೀಕರು ಬಾರದ ಕಾರಣ ಹಣವನ್ನು ಹನುಮೇಶ ಬಳಿ ಇಟ್ಟುಕೊಳ್ಳಲು ತಿಳಿಸಿದ್ದಾನೆ. ಮರು ದಿನ ಬಂದಾಗಲೂ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯದ ಕಾರಣ ಹಣ ತೆಗೆದುಕೊಂಡು ವಾಪಸ್ ಸಿಂಧನೂರಿಗೆ ತೆರಳುತ್ತಿದ್ದಾಗ ಕಳ್ಳರು ದಾಳಿ ಮಾಡಿದ್ದಾರೆ.

ಹನಮೇಶನೇ ಬಾಷಾ ಎಂಬಾತನಿಗೆ ಸುರೇಶ ರೆಡ್ಡಿ ಹಣ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಬಾಷಾ ತನ್ನ ಸ್ನೇಹಿತರೊಡಗೂಡಿ ಕೃತ್ಯ ಎಸಗಿದ್ದಾನೆಂದು ಎಸ್ಪಿ ವಿವರಿಸಿದ್ದಾರೆ. ಬಂಧಿತರಿಂದ 17.32 ಲಕ್ಷ ರೂ. ನಗದು, ಕಾರು, 1 ಬೈಕ್, ಕೃತ್ಯಕ್ಕೆ ಬಳಸಿದ ಚಾಕು, ಚೂರಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಪತ್ತೆ ಮಾಡಿದ ತನಿಖಾ ತಂಡಕ್ಕೆ ಬಹುಮಾನ ನೀಡಲಾಗುವುದೆಂದು ಎಸ್ಪಿ ತಿಳಿಸಿದ್ದಾರೆ. ಡಿವೈಎಸ್ಪಿಗಳಾದ ಸಿದ್ದಲಿಂಗಪ್ಪಗೌಡ ಪಾಟೀಲ್, ಮುತ್ತಣ್ಣ ಸರವಗೋಳ, ಸಿಪಿಐ ಸುರೇಶ ಇದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೂರಿ ತೋರಿಸಿ 17 ಲಕ್ಷ ರೂಪಾಯಿ ದೋಚಿದ ಚೋರರು.. ಸಿನಿಮಾ ಸ್ಟೈಲ್​ನಲ್ಲಿ ಕಳ್ಳರ ಹಿಡಿದ ಪೊಲೀಸರು..!

https://newsfirstlive.com/wp-content/uploads/2024/02/KPL-THIVES-1.jpg

Load More