newsfirstkannada.com

ಸಿನಿಮೀಯ ರೀತಿಯಲ್ಲಿ ಪ್ಲಾನ್​​; ATMನಿಂದ 24 ಲಕ್ಷ ದೋಚಿದ ಖದೀಮರನ್ನು ಹೆಡೆಮುರಿ ಕಟ್ಟಿದ ಪೊಲೀಸರು 

Share :

Published July 17, 2023 at 9:08am

Update July 17, 2023 at 9:11am

    ಎಟಿಎಂನಲ್ಲಿದ್ದ 24 ಲಕ್ಷ ದೋಚಿ ಪರಾರಿಯಾಗಿದ್ದ 4 ಜನರ ಬಂಧನ

    ಎಟಿಎಂಗೆ ಒಂಚೂರು ಹಾನಿ ಮಾಡದೆ ಹಣ ಎಗರಿಸಿದ ಖತರ್ನಾಕ್​ ಕಳ್ಳರು

    ಹಣ ಕಳ್ಳತನದ ಬಗ್ಗೆ ಸಿಎಂಎಸ್​ ಕಂಪನಿ ಮ್ಯಾನೇಜರ್​ ಪೊಲೀಸರಿಗೆ ದೂರು

ಎಟಿಎಂನಲ್ಲಿದ್ದ ಹಣವನ್ನ ದರೋಡೆ ಮಾಡಿದ್ದ ನಾಲ್ವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ನದೀಂ, ಶ್ರೀರಾಮ್, ಅರುಳ್ ಕುಮಾರ್ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ.

ಬಂಧಿತ ನಾಲ್ವರು ಖದೀಮರು ಎಟಿಎಂನಲ್ಲಿದ್ದ 24 ಲಕ್ಷ ದೋಚಿ ಪರಾರಿಯಾಗಿದ್ದರು. ಅರುಳ್​ ಎಂಬಾತ ಹಣ ತುಂಬುವ ಕಸ್ಟೋಡಿಯನ್​ ಆಗಿದ್ದು, ಈತ ಹಣವನ್ನು ಏಟಿಎಂ ಗೆ ತುಂಬಿಸಿ ಸೇಪ್ಟಿ  ಡೋರ್​ ಲಾಕ್​ ಮಾಡದೇ ಹೋಗ್ತಿದ್ದ. ಈತ ಹೋದ ಬಳಿಕ ಈ ಮೂವರು ಹೆಲ್ಮೆಟ್​ ಧರಿಸಿ ಬಂದಿದ್ದಾರೆ. ಎಟಿಎಂಗೆ ಒಂಚೂರು ಹಾನಿ ಮಾಡದೇ ಹಣ ಎಗರಿಸಿದ್ದಾರೆ.

ಹಣ ಕಳ್ಳತನದ ಬಗ್ಗೆ ಸಿಎಂಎಸ್​ ಕಂಪನಿ ಮ್ಯಾನೇಜರ್​ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ನಾಲ್ವರನ್ನ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮೀಯ ರೀತಿಯಲ್ಲಿ ಪ್ಲಾನ್​​; ATMನಿಂದ 24 ಲಕ್ಷ ದೋಚಿದ ಖದೀಮರನ್ನು ಹೆಡೆಮುರಿ ಕಟ್ಟಿದ ಪೊಲೀಸರು 

https://newsfirstlive.com/wp-content/uploads/2023/07/ATM-Thevese.jpg

Load More