Advertisment

VIDEO: ಕ್ಯಾಮರಾದಲ್ಲಿ ಸೆರೆಯಾಯ್ತು ಲಂಚಾವತಾರ; ಬಂದ ಹಣ ಹಂಚಿಕೊಂಡು ಸಿಕ್ಕಿಬಿದ್ದ ಪೊಲೀಸ್ರು..!

author-image
Gopal Kulkarni
Updated On
VIDEO: ಕ್ಯಾಮರಾದಲ್ಲಿ ಸೆರೆಯಾಯ್ತು ಲಂಚಾವತಾರ; ಬಂದ ಹಣ ಹಂಚಿಕೊಂಡು ಸಿಕ್ಕಿಬಿದ್ದ ಪೊಲೀಸ್ರು..!
Advertisment
  • ಬಂದ ಲಂಚವನ್ನು ಹಂಚಿಕೊಂಡು ನಗೆಬೀರಿದ ಮೂವರು ಪೊಲೀಸರು
  • ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಟ್ರಾಫಿಕ್ ಪೊಲೀಸರ ಲಂಚಾವತಾರ
  • ಪಾಪದ ಹಣವುಂಡ ಮೂವರೂ ಪೊಲೀಸರು ಆದ್ರು ಅಮಾನತು

ನವದೆಹಲಿ: ದೆಹಲಿಯ ಗಾಜಿಪುರದಲ್ಲಿ ಟ್ರಾಫಿಕ್​ ಪೊಲೀಸರು ಬಂದ ಲಂಚವನ್ನ ಹಂಚಿಕೊಳ್ಳುತ್ತಿರುವ ದೃಶ್ಯ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಗಾಜಿಪುರದಲ್ಲಿರುವ ಚೆಕ್​ಪೋಸ್ಟ್ ಒಂದರಲ್ಲಿ ಮೂವರು ಪೊಲೀಸರು ಒಂದೇ ಕಡೆ ಕುಳಿತು ಆ ದಿನ ಬಂದಿದ್ದ ಲಂಚದ ಹಣವನ್ನ ಹಂಚಿಕೊಳ್ಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

Advertisment

ಇದನ್ನೂ ಓದಿ:ಕೋಲ್ಕತ್ತಾ ವೈದ್ಯೆ ಸಾವಿಗೆ ಮನಮಿಡಿದ IMA ಅಧ್ಯಕ್ಷ; ಕಣ್ಣೀರು ತರಿಸುತ್ತೆ ಅಶೋಕನ್ ಭಾವುಕ​ ಪತ್ರ

ಗಾಜಿಪುರದ ಥ್ರಿಲ್ ಲೌರಿ ಸರ್ಕಲ್​ನಲ್ಲಿ ಈ ಘಟನೆ ನಡೆದಿದೆ. ಹಣದ ಕಟ್ಟನ್ನು ಕೈಯಲ್ಲಿ ಹಿಡಿದುಕೊಂಡಿರುವ ಒಬ್ಬ ಟ್ರಾಫಿಕ್ ಪೊಲೀಸ್​ ಉಳಿದ ಇಬ್ಬರು ಟ್ರಾಫಿಕ್ ಪೊಲೀಸರ ಜೊತೆ ಕುಳಿತಕೊಂಡು ಎಣಿಕೆ ಹಾಕಿ ಅವರವರಿಗೆ ಬರಬೇಕಾದ ಹಣವನ್ನು ಹಂಚುತ್ತಾನೆ. ಈ ಒಂದು ವಿಡಿಯೋ ಪೊಲೀಸ್ ಚೆಕ್​ಪೋಸ್ಟ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು.ಸೋಷಿಯಲ್ ಮಿಡಿಯಾದಲ್ಲಿಯೂ ಸಹ ಪೋಸ್ಟ್ ಆಗಿದೆ. ಈ ವಿಡಿಯೋ ನೋಡಿದ ಜನರು ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಛೀಮಾರಿ ಹಾಕುತ್ತಿದ್ದಾರೆ.

Advertisment


">August 17, 2024


ಇನ್ನು ಈ ವಿಷಯ ತಿಳಿದಿರುವ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮೂವರು ಪೊಲೀಸರು, ಇಬ್ಬರು ಅಸಿಸ್ಟಂಟ್ ಸಬ್ ಇನ್ಸ್​ಪೆಕ್ಟರ್ ಸೇರಿದಂತೆ ಹೆಡ್ ಕಾನ್ಸ್​ಟೇಬಲ್​ರನ್ನ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: VIDEO: ಕೋಲ್ಕತ್ತಾ ವೈದ್ಯೆ ಕೇಸ್​​.. ನನಗೆ ನಾಚಿಕೆ ಆಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಕೊಹ್ಲಿ

ಅಲ್ಲದೇ ಮೂವರನ್ನು ಈಗಾಗಲೇ ಅಮಾನತು ಮಾಡಿದ್ದು, ಮುಂದೆ ಅವರ ಮೇಲೆ ಸಮರ್ಪಕ ತನಿಖೆಯನ್ನು ಮಾಡಲಾಗುವುದು ಎಂದು ಕೂಡ ಉಲ್ಲೇಖಿಸಿದ್ದಾರೆ.

Advertisment

ಕೆಲವು ತಿಂಗಳುಗಳ ಹಿಂದಷ್ಟೇ ಅಂದ್ರೆ ಇದೇ ಜುಲೈನಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬ ರಸೀದಿ ನೀಡದೇ ಸಂಚಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಯ ಬಳಿ 5 ಸಾವಿರ ರೂಪಾಯಿ ವಸೂಲಿ ಮಾಡಿದ್ದು ಕೂಡ ಸುದ್ದಿಯಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment