/newsfirstlive-kannada/media/post_attachments/wp-content/uploads/2025/03/VIJ-ACCIDENT.jpg)
ವಿಜಯಪುರ: ಕಾರು ಚಾಲಕನ ನಿಯಂತ್ರಣ ತಪ್ಪಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಉಕ್ಕಲಿ ಗ್ರಾಮದ ಬಳಿಯ ಹೆಗಡಿಹಾಳ ಕ್ರಾಸ್ ಬಳಿ ನಡೆದಿದೆ.
ಭೀರಪ್ಪ ಗೋಡೆಕರ್ (26), ಹಣಮಂತ ಕಡ್ಲಿಮಟ್ಟಿ (32), ಯಮನಪ್ಪ ನಾಟೀಕಾರ್ (19 ಮೃತ ದುರ್ದೈವಿಗಳು. ಸಾವನ್ನಪ್ಪಿದ ಮೂವರು ಉತ್ನಾಳ ಗ್ರಾಮದ ನಿವಾಸಿಗಳು. ಮತ್ತೋರ್ವ ಪ್ರಯಾಣಿಕ ಉಮೇಶನ (30) ಸ್ಥಿತಿ ಗಂಭೀರವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.
ಬೇವಿನ ಮರಕ್ಕೆ ಡಿಕ್ಕಿಯಾಗಿದೆ. ಅಪಘಾತದ ಹೊಡೆತಕ್ಕೆ ಕಾರು ಪಲ್ಟಿಯಾಗಿ, ನುಜ್ಜು-ಗುಜ್ಜಾಗಿದೆ. ಇನ್ನು ದುರ್ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಅಪಘಾತದ ಬಗ್ಗೆ ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ: ನಿವೃತ್ತಿಗೂ ವಿರಾಟ್ ಪಕ್ಕಾ ಪ್ಲಾನ್; ಎರಡು ಬಿಗ್ ಟಾರ್ಗೆಟ್ ಫಿಕ್ಸ್ ಮಾಡಿದ ಕೊಹ್ಲಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ