IAS ಕೋಚಿಂಗ್​ ಸೆಂಟರ್​​ಗೆ ನೀರು ನುಗ್ಗಿ ಅನಾಹುತ; ಪ್ರಾಣ ಕಳೆದುಕೊಂಡ ಮೂರು ವಿದ್ಯಾರ್ಥಿಗಳು.. ಆಗಿದ್ದೇನು?

author-image
Ganesh
Updated On
ಚರಂಡಿ ಪ್ರವಾಹಕ್ಕೆ ಕೊಚ್ಚಿಹೋದ IAS ಕನಸು.. ಶ್ರೇಯಾ ಯಾದವ್ ಕುಟುಂಬದ ಭರವಸೆ ಛಿದ್ರ, ಛಿದ್ರ..
Advertisment
  • ಪ್ರಾಣ ಕಳೆದುಕೊಂಡು ಮೂವರು ವಿದ್ಯಾರ್ಥಿಗಳು ಎಲ್ಲಿಯವರು?
  • ನಿನ್ನೆ ಬೆಳಗ್ಗೆ ಓದಲು ಲೈಬ್ರರಿಗೆ ಬಂದವರು ಶವವಾಗಿ ಸಿಕ್ಕಿದ್ದಾರೆ
  • ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ ದೆಹಲಿ ಸರ್ಕಾರ

ನಿನ್ನೆ ಸುರಿದ ಭಾರೀ ಮಳೆಗೆ ದೆಹಲಿಯ ರಾಜೇಂದ್ರ ನಗರದಲ್ಲಿರುವ ರಾವ್ IAS ಅಕಾಡೆಮಿಯ ನೆಲಮಾಳಿಗೆಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಮೂವರು UPSC ಆಕಾಂಕ್ಷಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರಲ್ಲಿ ತೆಲಂಗಾಣ ಮೂಲದ ಓರ್ವ ಯುವತಿ, ಉತ್ತರ ಪ್ರದೇಶ ಮೂಲದ ಓರ್ವ ಯುವತಿ ಹಾಗೂ ಕೇರಳ ಮೂಲದ ಓರ್ವ ಯುವಕ ಸಾವನ್ನಪ್ಪಿದ್ದಾರೆ. ತಾನ್ಯಾ ಸೋನಿ (25), ಶ್ರೇಯಾ ಯಾದವ್ (25), ನವೀನ್ ಡಾಲ್ವಿನ್ ಮೃತ ದುರ್ದೈವಿಗಳು.

ಇದನ್ನೂ ಓದಿ:ಶಿರೂರು ಮಾದರಿಯಲ್ಲೇ ಮತ್ತೊಂದು ಗುಡ್ಡ ಕುಸಿತ.. ತಾಯಿ, ಮಗಳು ಮಣ್ಣಿನಡಿ ಸಿಲುಕಿ ಸಾವು

publive-image

ಮೃತ ಕೇರಳದ ವಿದ್ಯಾರ್ಥಿ ಕಳೆದ 8 ತಿಂಗಳಿಂದ ಐಎಸ್​ ಕೋಚಿಂಗ್ ಸೆಂಟರ್​ಗೆ ಸೇರಿದ್ದ. ಇವರು ಜೆಎನ್​ಯುನಲ್ಲಿ ಪಿಹೆಚ್​​ಡಿ ಕೂಡ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬೇಸ್​​ಮೆಂಟ್​ನಲ್ಲಿ ಲೈಬ್ರರಿ ಮಾಡಲಾಗಿದ್ದು, ಸುಮಾರು 150-180 ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಇದೆ.

ಅಂತೆಯೇ ಬೆಳಗ್ಗೆ 10 ಗಂಟೆಗೆ ಓದಲು ಬಂದು ಕೂತಿದ್ದರು. ಈ ವೇಳೆ ಭಾರೀ ಮಳೆಯಿಂದಾಗಿ ಚರಂಡಿಯ ತಡೆಗೋಡೆ ಒಡೆದು ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಹಲವು ವಿದ್ಯಾರ್ಥಿಗಳು ಪ್ರಾಣ ಸಂಕಟಕ್ಕೆ ಸಿಲುಕಿದ್ದರು. ಇವರಲ್ಲಿ ಮೂವರು ಮೃತಪಟ್ಟಿದ್ದಾರೆ. ದೆಹಲಿ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದೆ.

ಇದನ್ನೂ ಓದಿ:ಅರ್ಜುನ, ಜಗನ್ನಾಥ್, ಲೋಕೇಶ್ ಇನ್ನೂ ಪತ್ತೆ ಇಲ್ಲ.. ಈಶ್ವರ್ ಮಲ್ಪೆ ತಂಡ ಇವತ್ತು ಏನ್ಮಾಡುತ್ತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment