ಭೀಕರ ಅಪಘಾತ.. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೊರಟಿದ್ದ ಮೂವರು ಮಹಿಳೆಯರು ಸಾವು

author-image
Ganesh
Updated On
ಭೀಕರ ಅಪಘಾತ.. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೊರಟಿದ್ದ ಮೂವರು ಮಹಿಳೆಯರು ಸಾವು
Advertisment
  • ಕೆಲಸಕ್ಕೆ ಹೊರಟಿದ್ದ ಕೂಲಿ ಕಾರ್ಮಿಕರು ದಾರುಣ ಸಾವು
  • ದುರ್ಘಟನೆಯಲ್ಲಿ ಹಲವರು ಗಂಭೀರ, ಆಸ್ಪತ್ರೆಗೆ ದಾಖಲು
  • ಈ ಭೀಕರ ದುರ್ಘಟನೆಗೆ ಕಾರಣ ಏನು ಗೊತ್ತಾ?

ಚಿಕ್ಕೋಡಿ: ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗೋಲಾ- ಜತ್ತ ಮಾರ್ಗದ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಮಹಿಳೆಯರು ಸಾವನ್ನಪ್ಪಿದ್ದಾರೆ. ಬಳ್ಳಿಗೇರಿ ಗ್ರಾಮದ ನಿವಾಸಿಗಳಾದ ಮಹಾದೇವಿ ಚೌಗಲಾ, ಗೀತಾ ದೊಡಮನಿ, ಕಸ್ತೂರಿ ಮೃತ ದುರ್ದೈವಿಗಳು. ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿದೆ.

ಇದನ್ನೂ ಓದಿ:KL ರಾಹುಲ್​​​ರನ್ನು ನಿಂದಿಸಿದ್ದಕ್ಕೆ ಶಮಿ ಆಕ್ರೋಶ.. ಗೋಯೆಂಕಾಗೆ ನಾಚಿಕೆ ಆಗಬೇಕು ಎಂದ ಸ್ಟಾರ್ ಬೌಲರ್ಸ್​..!

publive-image

ಬಳ್ಳಿಗೇರಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕ್ರೂಸರ ವಾಹನದ ಎಡಬದಿಯ ಟೈರ್ ಬ್ಲ್ಯಾಸ್ಟ್ ಆಗಿದೆ. ಪರಿಣಾಮ ಕೆಎ 24 ಎಮ್1121 ಸಂಖ್ಯೆಯ ವಾಹನ ಪಲ್ಟಿ ಆಗಿದೆ. ಕ್ರೂಸರ್ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಳ್ಳಿಗೇರಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment