ನಡ್ಡಾ ಉತ್ತರಾಧಿಕಾರಿಗೆ ಮೂವರು ನಾಯಕಿಯರು ಫೈಟ್​.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಯಾರಿಗೆ..?

author-image
Ganesh
Updated On
ನಡ್ಡಾ ಉತ್ತರಾಧಿಕಾರಿಗೆ ಮೂವರು ನಾಯಕಿಯರು ಫೈಟ್​.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಯಾರಿಗೆ..?
Advertisment
  • ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಟಫ್ ಫೈಟ್..!
  • RSSನಿಂದ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ನೀಡಲು ನಿರ್ಧಾರ
  • ಯಾರು ಆಗ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು..?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ ನಡ್ಡಾ, ಕೇಂದ್ರದ ಆರೋಗ್ಯ ಖಾತೆ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಕೇಂದ್ರದ ಸಚಿವ ಸ್ಥಾನದಲ್ಲೇ ಮುಂದುವರಿಯುವ ಇಚ್ಛೆ ಜೆ.ಪಿ ನಡ್ಡಾ ಅವರಿಗೆ ಇದೆ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಈ ತಿಂಗಳಲ್ಲೇ ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ರೇಸ್​ನಲ್ಲಿ ಮಹಿಳಾ ನಾಯಕಿಯರ ಹೆಸರು ಕೇಳಿಬಂದಿದೆ. ನಿರ್ಮಲಾ ಸೀತಾರಾಮನ್, ಡಿ‌.ಪುರಂದರೇಶ್ವರಿ, ವನತಿ ಶ್ರೀನಿವಾಸನ್ ಹೆಸರು ಮುಂಚೂಣಿಯಲ್ಲಿದೆ. ವಿಶೇಷ ಅಂದರೆ ಈ ಮೂವರು ಮಹಿಳೆಯರೂ ಆಂಧ್ರ ಪ್ರದೇಶ, ತಮಿಳುನಾಡಿನವರು. ನಿರ್ಮಲಾ ಸೀತಾರಾಮನ್, ವನತಿ ಶ್ರೀನಿವಾಸನ್ ತಮಿಳುನಾಡು ರಾಜ್ಯದವರು. ಡಿ.ಪುರಂದರೇಶ್ವರಿ ಆಂಧ್ರ ಪ್ರದೇಶದ ಎನ್​ಟಿಆರ್​ ಪುತ್ರಿ.

ಇದನ್ನೂ ಓದಿ: JP ನಡ್ಡಾ ಸ್ಥಾನಕ್ಕೆ ಜೋಶಿ ಸೇರಿ ಹಲವರು ರೇಸ್​​.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಟ್ಟ ಯಾರಿಗೆ..?

publive-image

ಬಿಜೆಪಿಯ ಮಾತೃ ಸಂಘಟನೆ ಆರ್​ಎಸ್ಎಸ್​ನಿಂದ ಮಹಿಳೆಯರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಹೀಗಾಗಿ ದಕ್ಷಿಣ ಭಾರತದ ನಾಯಕಿಯರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಗಳಿವೆ. ನಿರ್ಮಲಾ ಸೀತಾರಾಮನ್ ಸದ್ಯ ಕೇಂದ್ರದ ಹಣಕಾಸು ಖಾತೆ ಸಚಿವೆಯಾಗಿ ಕಾರ್ಯನಿರ್ವಹಿಸ್ತಿದ್ದಾರೆ. ವನತಿ ಶ್ರೀನಿವಾಸನ್ ತಮಿಳುನಾಡಿನ ಕೊಯಮತ್ತೂರು ಕ್ಷೇತ್ರದ ಶಾಸಕಿಯಾಗಿದ್ದಾರೆ. ಡಿ.ಪುರಂದರೇಶ್ವರಿ ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್​​ಟಿಆರ್ ಪುತ್ರಿ ಮತ್ತು ಮಾಜಿ ಕೇಂದ್ರ ಸಚಿವರಾಗಿದ್ದವರು. ಮೂವರ ಹೆಸರು ಸದ್ಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ಯುದ್ಧ ವಿಮಾನ ಕೇರಳದಿಂದ ಇಂಗ್ಲೆಂಡ್​​ ಏರ್​ಲಿಫ್ಟ್ – ಅಸಲಿಗೆ ಆಗಿದ್ದೇನು ಗೊತ್ತಾ?

ಅಷ್ಟೇ ಅಲ್ಲದೇ, ಅನುರಾಗ್ ಠಾಕೂರ್, ಧರ್ಮೇಂದ್ರ ಪ್ರಧಾನ್, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಅರ್ಜುನ್ ರಾಮ್ ಮೇಘವಾಲ್, ಪ್ರಹ್ಲಾದ್ ಜೋಶಿ, ನಿತಿನ್ ಗಡ್ಕರಿ, ಕಿಶನ್ ರೆಡ್ಡಿ, ವಿನೋದ್ ತಾವಡೆ ಹೆಸರುಗಳು ಕೇಳಿ ಬರುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment