/newsfirstlive-kannada/media/post_attachments/wp-content/uploads/2024/06/CKM-DIED.jpg)
ಚಿಕ್ಕಮಗಳೂರು: ತೆಪ್ಪ ಮುಳುಗಿ ಭದ್ರಾನದಿಯಲ್ಲಿ ನಾಪತ್ತೆ ಆಗಿದ್ದ ಮೂವರ ಮೃತದೇಹವನ್ನು ಪತ್ತೆ ಹಚ್ಚಿ ಹೊರ ತರಲಾಗಿದೆ. ಭದ್ರಾ ನದಿಯಲ್ಲಿ ಮೂವರ ಶವ ಪತ್ತೆಯಾಗಿದೆ.
ಅಗ್ನಿಶಾಮಕ ದಳ, ಸ್ಥಳೀಯ ಮುಳುಗು ತಜ್ಞರು ಸೇರಿ ಶವವನ್ನು ಹೊರಕ್ಕೆ ತಂದಿದ್ದಾರೆ. ಸದ್ಯ ಮೃತದೇಹವನ್ನು ಎನ್ಆರ್ಪುರ ತಾಲೂಕಿನ ಮುತ್ತಿನಕೊಪ್ಪ ಶವಗಾರಕ್ಕೆ ರವಾನೆ ಮಾಡಲಾಗಿದೆ. ನಿನ್ನೆಯೂ ಶೋಧ ಕಾರ್ಯಚರಣೆ ನಡೆಸಲಾಗಿತ್ತು. ಕತ್ತಲಾದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆಯಿಂದ ಶೋಧ ಕಾರ್ಯ ನಡೆಸಿದ ಸಿಬ್ಬಂದಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ:ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್.. ಮೀಸಲಾತಿಯನ್ನು ಶೇಕಡಾ 65ಕ್ಕೆ ಹೆಚ್ಚಿಸುವ ಆದೇಶ ರದ್ದು..!
ನಿನ್ನೆ ಪ್ರವಾಸಕ್ಕೆ ಎಂದು ಭದ್ರಾ ನದಿಯ ಹಿನ್ನೀರಿಗೆ ಮೂವರು ಆಗಮಿಸಿದ್ದರು. ತೆಪ್ಪದಲ್ಲಿ ತೆರಳುವಾಗ ಮಗುಚಿಬಿದ್ದು ನೀರು ಪಾಲಾಗಿದ್ದರು. ಅದೀಲ್, ಸಾಜೀದ್, ಅಪ್ದಾಖಾನ್ ಮೃತಪಟ್ಟವರು. ಇವರು ಶಿವಮೊಗ್ಗ ದ ವಿದ್ಯಾನಗರ ಮೂಲದವರು. ಎನ್ಆರ್ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ದುರ್ಘಟನೆ ನಡೆದಿದೆ.
ಇದನ್ನೂ ಓದಿ:ದರ್ಶನ್ ಕೇಸ್ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ