newsfirstkannada.com

ಕೊಲೆ ಮಾಡಿ ಕಾಲುವೆಗೆ ಎಸೆದಿದ್ದೇವೆ-ಮಾಜಿ ಮಾಡೆಲ್ ಹತ್ಯೆಯ ರಹಸ್ಯ ಬಿಚ್ಚಿಟ್ಟ ಓರ್ವ ಆರೋಪಿ

Share :

Published January 13, 2024 at 7:16am

Update January 13, 2024 at 7:38am

  ಜನವರಿ 2 ರಂದು ದಿವ್ಯಾ ಪಹುಜಾ ಬರ್ಬರ ಕೊಲೆ

  ಅಭಿಜಿತ್ ಸಿಂಗ್​​ ವಿರುದ್ಧ ಕೊಲೆ ಮಾಡಿದ ಆರೋಪ

  ಮೃತದೇಹ ಸಾಗಿಸಲು ಚೇಲಾಗಳಿಗೆ 10 ಲಕ್ಷ ನೀಡಿದ್ದ

ಮಾಜಿ ಮಾಡೆಲ್ ದಿವ್ಯಾ ಪಹುಜಾ ಕೊಲೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ತೀವ್ರಗೊಳಿಸಿದ್ದಾರೆ. ಬಂಧಿತ ಓರ್ವ ಆರೋಪಿ ಇದೀಗ ಸತ್ಯವನ್ನು ಹೇಳಿದ್ದು ಗುರುಗ್ರಾಮ್ ಹೋಟೆಲ್​ನಲ್ಲಿ ಆಕೆಯನ್ನು ಕೊಲೆ ಮಾಡಿ ನೀರಿನ ಕಾಲುವೆಗೆ ಎಸೆದಿರೋದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿ ಬಾಲ್​ರಾಜ್ ಗಿಲ್​ನನ್ನು ಕಳೆದ ಗುರವಾರ ಪೊಲೀಸರು ಬಂಧಿಸಿದ್ದರು. ಕೊಲೆಯಾದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಅಭಿಜಿತ್ ಸಿಂಗ್, ಮೃತದೇಹವನ್ನು ಯಾರಿಗೂ ಕಾಣದಂತೆ ಎಸೆದು ಬರುವ ಟಾಸ್ಕ್​​ ಅನ್ನು ಗಿಲ್​ಗೆ ನೀಡಿದ್ದ. ಅಂತೆಯೇ ಗಿಲ್ ಪಂಜಾಬ್​​ನ ಪಟಿಯಾಲ್ ಕೆನಲ್​​ಗೆ ಎಸೆದು ಬಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

BMW ಕಾರಿನಲ್ಲಿ ಶವ ಸಾಗಾಟ

27 ವರ್ಷದ ಮಾಡೆಲ್​​ ದಿವ್ಯಾ ಪಹುಜಾ ಜನವರಿ 2 ರಂದು ಕೊಲೆಯಾಗಿದ್ದಾಳೆ. ಅಭಿಜಿತ್ ಸಿಂಗ್ ಗುರುಗ್ರಾಮ್​ನಲ್ಲಿರುವ ಸಿಟಿ ಪಿಂಟ್ ಹೋಟೆಲ್​​ನಲ್ಲಿ ಆಕೆಯನ್ನು ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಆಕೆಯ ಶವವನ್ನು ಸಾಗಿಸಲು ದೆಹಲಿಯ ಬಾಲರಾಜ್​ ಗಿಲ್​​ನನ್ನು ಸಂಪರ್ಕಿಸಿದ್ದ. ಗಿಲ್​ಗೆ ರವಿ ಎಂಬಾತ ಕೂಡ ಸಹಾಯ ಮಾಡಿದ್ದ. ಇಬ್ಬರು BMW ಕಾರಿನಲ್ಲಿ ಆಕೆಯ ಶವವನ್ನು ಹಾಕೊಂಡು ಹೋಟೆಲ್​ನಿಂದ ಹೊರಟು ಹೋಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಮತ್ತೊಂದು ವಿಚಾರ ಅಂದರೆ ಅಭಿಜಿತ್ ಇಬ್ಬರಿಗೂ 10 ಲಕ್ಷ ರೂಪಾಯಿ ಹಣವನ್ನು ಈ ಕೆಲಸಕ್ಕಾಗಿ ನೀಡಿದ್ದ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಐವರು ಆರೋಪಿಗಳಾಗಿದ್ದಾರೆ. ಅಭಿಜಿತ್ ಸಿಂಗ್, ಹೇಮ್​​ರಾಜ್, ಓಮ್ ಪ್ರಕಾಶ್, ಮೇಘಾ ಫೋಗಟ್​ನನ್ನು ಮೊದಲು ಬಂಧಿಸಲಾಗಿತ್ತು. ಇವರುಗಳು ಕೊಲೆ ಮಾಡಿದ ಆಯುಧ, ಪಹುಜಾರ ವಸ್ತುಗಳನ್ನು ಮರೆಮಾಚಲು ಸಹಾಯ ಮಾಡಿದ್ದರು. ಗಿಲ್ ಮತ್ತು ಬಾಲರಾಜ್ ಮೃತದೇಹವನ್ನು ಗೊತ್ತಾಗದೇ ಮಣ್ಣು ಮಾಡುವ ಜವಾಬ್ದಾರಿ ಹೊತ್ತಿದ್ದ. ಬಾಲರಾಜ್ ಅರೆಸ್ಟ್ ಆಗಿದ್ದಾನೆ. ಆದರೆ ರವಿ ಬಂಗ ನಾಪತ್ತೆಯಾಗಿದ್ದಾನೆ. ಸದ್ಯ ಮೃತದೇಹಕ್ಕಾಗಿ ತೀವ್ರ ಶೋಧಕಾರ್ಯ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಮಾಡಿ ಕಾಲುವೆಗೆ ಎಸೆದಿದ್ದೇವೆ-ಮಾಜಿ ಮಾಡೆಲ್ ಹತ್ಯೆಯ ರಹಸ್ಯ ಬಿಚ್ಚಿಟ್ಟ ಓರ್ವ ಆರೋಪಿ

https://newsfirstlive.com/wp-content/uploads/2024/01/Divya-Pahuja.jpg

Load More