newsfirstkannada.com

RAIN Alert: ಇಂದಿನಿಂದ 5 ದಿನ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆ.. ಎಲ್ಲೆಲ್ಲಿ ವರುಣಾರ್ಭಟ?

Share :

Published April 18, 2024 at 2:32pm

    ಏಪ್ರಿಲ್ 18ರಿಂದ ಏಪ್ರಿಲ್‌ 22ವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ, ಮಳೆ!

    ಏಪ್ರಿಲ್ 21ರಂದು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯ ಎಚ್ಚರಿಕೆ

    ಕಳೆದೆರಡು ದಿನಗಳಿಂದ ಮರೆಯಾಗಿದ್ದ ಮಳೆರಾಯ ಮತ್ತೆ ಅಬ್ಬರಿಸೋ ಸೂಚನೆ

ಬೆಂಗಳೂರು: ಭಯಾನಕ ಬಿಸಿಲಿಗೆ ಬಸವಳಿದು ಹೋಗಿದ್ದ ರಾಜ್ಯದ ಜನರಿಗೆ ಬೇಸಿಗೆ ಮಳೆ ತುಸು ತಂಪೆರೆದು ಹೋಗಿದೆ. ರಾಜ್ಯದ ಹಲವೆಡೆ ಮೊದಲ ಮಳೆ ಪ್ರತ್ಯಕ್ಷವಾಗಿ ಮೈ ಮನ ಉಲ್ಲಾಸವಾಗುವಂತೆ ಮಾಡಿದೆ. ಆದರೆ, ಕಳೆದೆರಡು ದಿನಗಳಿಂದ ಮರೆಯಾಗಿದ್ದ ಮಳೆರಾಯ ಮತ್ತೆ ರಾಜ್ಯದಲ್ಲಿ ದರ್ಶನ ಕೊಡುವ ಮುನ್ಸೂಚನೆ ಸಿಕ್ಕಿದೆ.

ರಾಜ್ಯದ ಹವಮಾನ ಇಲಾಖೆ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ. 18ನೇ ಏಪ್ರಿಲ್ ಅಂದ್ರೆ ಇಂದಿನಿಂದ 5 ದಿನಗಳ ಕಾಲ ರಾಜ್ಯದಲ್ಲಿ ಹಲವೆಡೆ ಸಾಧಾರಣ ಮಳೆಯ ಜೊತೆಗೆ ಗುಡುಗು ಮಿಂಚಿನ ವಾತಾವರಣ ಕಂಡು ಬರುವ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: ದುಬೈನಲ್ಲಿ ಸುರಿದ ಮಹಾಮಳೆಗೆ ಮೋಡ ಬಿತ್ತನೆ ಕಾರಣವಲ್ಲ; ಅಸಲಿ ವಿಷಯ ಬಹಿರಂಗ; ಏನದು?

ರಾಜ್ಯಾದ್ಯಂತ ಅಲ್ಲಲ್ಲಿ ಚದುರಿದಂತೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಏಪ್ರಿಲ್ 18ರಿಂದ 22ವರೆಗೆ ಸಾಧಾರಣ ಮಳೆಯಾಗಲಿದೆ. ಅದರಲ್ಲೂ ಏಪ್ರಿಲ್ 21ರಂದು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯ ಎಚ್ಚರಿಕೆ ನೀಡಲಾಗಿದೆ.

ಇಂದು ಹಾಸನ, ಮೈಸೂರು, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಬೆಳಗಾವಿ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RAIN Alert: ಇಂದಿನಿಂದ 5 ದಿನ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆ.. ಎಲ್ಲೆಲ್ಲಿ ವರುಣಾರ್ಭಟ?

https://newsfirstlive.com/wp-content/uploads/2024/04/rain6.jpg

Load More