/newsfirstlive-kannada/media/post_attachments/wp-content/uploads/2025/06/chamarajanagar1.jpg)
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯ ಒಂದರಲ್ಲೇ 5 ಹುಲಿಗಳ ಕಳೆಬರ ಪತ್ತೆಯಾಗಿದ್ದವು. ಈ ಪ್ರಕರಣವು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ, ಮೂರು ಮರಿ ದುರಂತ ಅಂತ್ಯ! ವಿಷಪ್ರಾಸನ ಶಂಕೆ
ಇದೀಗ ನಾಲ್ವರನ್ನ ಶಂಕಿತ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ಎಲ್ಲರನ್ನೂ ಪ್ರತ್ಯೇಕವಾಗಿ ಇಟ್ಟು ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ಗಾಜನೂರು, ಕೊಪ್ಪ ಹಾಗೂ ಮೀಣ್ಯಂ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/06/chamarajanagar.jpg)
ಸದ್ಯ ಎಲ್ಲಾ 5 ಹುಲಿಗಳ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ನಿನ್ನೆ ತಾಯಿ ಹುಲಿ ಮರಣೋತ್ತರ ಪರೀಕ್ಷೆ ನಡೆದಿತ್ತು. ಇಂದು ನಾಲ್ಕು ಹುಲಿ ಮರಿಗಳ ಮರಣೋತ್ತ ಪರೀಕ್ಷೆಯನ್ನು ವೈದ್ಯರು ನಡೆಸಿದ್ದಾರೆ. ಎಪಿಸಿಸಿಎಫ್ ನೇತೃತ್ವದಲ್ಲಿ, ಪ್ರಾಣಿ ಶಾಸ್ತ್ರಜ್ಞರು ಹಾಗೂ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆದಿದೆ. ಹುಲಿಗಳ ಮೃತ ದೇಹದ ಪ್ರಮುಖ ಅಂಗಾಂಗಳನ್ನ ಸಿಬ್ಬಂದಿ ಸಂಗ್ರಹಣೆ ಮಾಡಿದ್ದಾರೆ. ಮೂರು ಗುಂಪುಗಳಲ್ಲಿ ಮಾದರಿ ಸಂಗ್ರಹಿಸಿ ಪ್ರತ್ಯೇಕವಾಗಿ ಮೂರು ಲ್ಯಾಬ್ ಗಳಿಗೆ ಸ್ಯಾಂಪಲ್ ಗಳ ರವಾನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ