ಅಬ್ಬಾ.. ಹುಲಿಗೆ 24 ಕ್ಯಾರೆಟ್ ಬಂಗಾರದ ಹಲ್ಲು; ಟೈಗರ್‌ಗೆ ಯಾಕೀ ಭಾಗ್ಯ? ಇಲ್ಲಿದೆ ಕುತೂಹಲಕಾರಿ ಮಾಹಿತಿ

author-image
admin
Updated On
ಅಬ್ಬಾ.. ಹುಲಿಗೆ 24 ಕ್ಯಾರೆಟ್ ಬಂಗಾರದ ಹಲ್ಲು; ಟೈಗರ್‌ಗೆ ಯಾಕೀ ಭಾಗ್ಯ? ಇಲ್ಲಿದೆ ಕುತೂಹಲಕಾರಿ ಮಾಹಿತಿ
Advertisment
  • ಪಕ್ಕಾ ಮಾಂಸಾಹಾರಿ ಟೈಗರ್‌ಗೆ ಬಂಗಾರದ ಹಲ್ಲು ಯಾಕೆ?
  • ಇದು ಬೆಂಗಾಲ್ ಟೈಗರ್ ಜಾತಿಗೆ ಸೇರಿದ ಅಪರೂಪದ ಹುಲಿ
  • ಮೂಳೆಗಳೇ ಇಲ್ಲದ ಮಾಂಸ ಕೊಡುತ್ತಿದ್ದ ಹುಲಿ ಸಂರಕ್ಷಣಾ ಸಿಬ್ಬಂದಿ

ಇತ್ತೀಚೆಗೆ ಹುಲಿಯ ಉಗುರು ಕೊರಳಲ್ಲಿ ಹಾಕಿಕೊಂಡು ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾದವರನ್ನು ನೋಡಿದ್ದೇವೆ. ಇಲ್ಲೊಂದು ಹುಲಿಗೆ ಬಂಗಾರದ ಹಲ್ಲು ಅಳವಡಿಸಲಾಗಿದೆ. ಅದೂ ಶುದ್ಧ 24 ಕ್ಯಾರೆಟ್ ಬಂಗಾರದ ಹಲ್ಲು ಅಂದರೆ ನಿಮಗೆ ಅಚ್ಚರಿಯಾಗಬಹುದು.

ಹುಲಿಗೆ ಬಂಗಾರದ ಹಲ್ಲು ಅಂದರೆ ಅದೇನು ಮನೆಯಲ್ಲಿರುವ ಆಟಿಕೆ ಹುಲಿಯಲ್ಲ. ಪಕ್ಕಾ ಮಾಂಸಾಹಾರಿ ಪ್ರಾಣಿ ಬೆಂಗಾಲ್ ಟೈಗರ್. ಅದಕ್ಕೆ ಬಂಗಾರದ ಹಲ್ಲು ಯಾಕೆ ಅಂತೀರಾ? ಇಲ್ಲಿ ಕಾಣ್ತಿರುವ ಹುಲಿಯ ಚಿತ್ರ ಒಂದು ಬಾರಿ ನೋಡಿ. ಇದಕ್ಕೆ ಬಂಗಾರದ ಹಲ್ಲು ಅಳವಡಿಸಲಾಗಿದೆ. ಇದು ಬೆಂಗಾಲ್ ಟೈಗರ್ ಜಾತಿಗೆ ಸೇರಿದ ಅಪರೂಪದ ಹುಲಿಯಾಗಿದ್ದು ಅದರ ಒಂದು ಕೋರೆ ಹಲ್ಲು ಮಾತ್ರ ಬಂಗಾರದಿಂದ ಕೂಡಿದೆ.

publive-image

ಈ ಹುಲಿಯ ಹೆಸರು ಕಾರಾ. ಹೆಣ್ಣು ಹುಲಿ. ಇದನ್ನು 2013ರಲ್ಲಿ ಇಟಲಿಯ ಮುಗ್ನಾನೋದಲ್ಲಿ ಖಾಸಗಿಯವರು ಅಕ್ರಮವಾಗಿ ಸೆರೆಯಲ್ಲಿರಿಸಿದ್ದರು. 2015ರಲ್ಲಿ ಇದನ್ನು ರಕ್ಷಿಸಿ ಜರ್ಮನಿಗೆ ಕರೆದೊಯ್ಯಲಾಯಿತು. ಅಲ್ಲಿಂದ ಮಾಸ್ಟೀಲರ್‌ನ ಹುಲಿಗಳ ಆಶ್ರಯ ತಾಣಕ್ಕೆ ಒಯ್ಯಲಾಗಿತ್ತು.

ಇದೇನು ಕಾದಾಟದಲ್ಲಿ ತನ್ನ ಹಲ್ಲು ಕಳೆದುಕೊಂಡಿದ್ದಲ್ಲ. ಈ ಹುಲಿಯ ವಯಸ್ಸು 14 ವರ್ಷ 60 ಕೆಜಿ ತೂಕವಿದ್ದ ಈ ಹುಲಿ ಆಟಿಕೆಯನ್ನು ಅಗೆಯುವಾಗ ಹಲ್ಲು ಮುರಿದುಕೊಂಡಿತ್ತು. 2019ರಲ್ಲಿ ಈ ಹಲ್ಲು ಪೂರ್ತಿಯಾಗಿ ಮುರಿಯಬಹುದು ಎಂದು ಅರಿವಾಗಿ ಪಶು ವೈದ್ಯರು ಈ ಹುಲಿಗೆ ಸಿಲ್ವರ್ ಹಲ್ಲು ಜೋಡಿಸಲು ನಿರ್ಧರಿಸಿದ್ದರು. ಆದರೆ ನಂತರ ಅದನ್ನು ಚಿನ್ನದ ಹಲ್ಲು ಹಾಕಲು ನಿರ್ಧರಿಸಿದ್ದರು.

ಇದನ್ನೂ ಓದಿ: ಬೆಂಗಳೂರಿಗೆ ಬಂದು ಸೀರೆ ಖರೀದಿಸಿದ ನೀತಾ ಅಂಬಾನಿ; ಏನಿದರ ವಿಶೇಷ? ವಿಡಿಯೋ ಫುಲ್‌ ವೈರಲ್​! 

56.69 ತೂಕದ ಈ ಹುಲಿ, ಚಿನ್ನದ ಹಲ್ಲು ಅಳವಡಿಸಲು ವೈದ್ಯ ಡ್ಯಾನಿಶ್​ ತಂಡವು ಅರವಳಿಕೆ ನೀಡಿ ಸತತ 4 ಗಂಟೆ ಶ್ರಮಿಸಿ ಚಿನ್ನದ ಹಲ್ಲು ಅಳವಡಿಸಿದ್ದಾರೆ. ಆರಂಭದಲ್ಲಿ ಅದಕ್ಕೆ ಮೂಳೆಗಳೇ ಇಲ್ಲದ ಮಾಂಸ ನೀಡಲಾಗುತ್ತಿತ್ತು. ಈಗ ನಿಧಾನವಾಗಿ ಚಿನ್ನದ ಹಲ್ಲಿಗೆ ಹೊಂದಿಕೊಂಡಿದೆ.

ಸದ್ಯ ಈ ಹುಲಿ ಪ್ರವಾಸಿಗರ ಅಚ್ಚುಮೆಚ್ಚಿನ ಹುಲಿಯಾಗಿದೆ. ಅದರ ಬಂಗಾರದ ಹಲ್ಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ಒಂದೊಂದು ಬಾರಿ ಈ ಹುಲಿ ಬಾಯಿ ತೆಗೆಯದೇ ಪ್ರವಾಸಿಗರನ್ನು ನಿರಾಸೆ ಮೂಡಿಸುತ್ತದೆಯಂತೆ.
ಹೆಣ್ಣು ಹುಲಿ ಕಾರಾ, ಈಗ ಸರಿಯಾಗಿ ಕಚ್ಚುತ್ತದೆ. ತನ್ನ ಹೊಸ ಚಿನ್ನದ ಹಲ್ಲು ತೋರಿಸಿ ನಗುವುದನ್ನು ನೋಡಿ ನಮಗೂ ಸಂತೋಷ ಆಗುತ್ತೆ ಅಂತಾರೆ ಜೀವಶಾಸ್ತ್ರಜ್ಞ ಇವಾ ಲಿಂಡೆನ್ಸ್​ಮಿಡ್ಟ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment