/newsfirstlive-kannada/media/post_attachments/wp-content/uploads/2024/11/Tiktok-star.jpg)
ಜಗತ್ತಿನಲ್ಲಿ ಪ್ರತಿಯೊಂದು ಜೀವಿಗೂ ಸಾವು ನಿಶ್ಚಿತ. ಇಂದು ಜನಿಸಿದವನು ನಾಳೆ ಸಾಯಲೇಬೇಕು. ಆದರೆ ಕೆಲವರಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ತಿಳಿದಿರುತ್ತದೆ. ಹೀಗಾಗಿ ಭಯವಿಲ್ಲದೆ ಮರಣ ಹೊಂದುತ್ತಾರೆ. ಅದರಂತೆಯೇ ಆಸ್ಟ್ರೇಲಿಯಾ ಮೂಲಕ ಟಿಕ್​ಟಾಕ್​ ತಾರೆಯಾದ ಬೆಲ್ಲಾ ಬ್ರಾಡ್​ಪೋರ್ಡ್​ ಸಾವಿನ ಘೋಷಣೆಯ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡುವಂತೆ ಮಾಡಿದ್ದಾರೆ.
ಬೆಲ್ಲಾ ಬ್ರಾಡ್​ಪೋರ್ಡ್​ ಕ್ಯಾನ್ಸರ್​ ಎಂಬ ಮಾರಕ ಕಾಯಿಲೆಗೆ ತುತ್ತಾಗಿದ್ದರು. ಆದರೆ ಅಚ್ಚರಿಯ ವಿಚಾರವೆಂದರೆ ಸಾಯುವುದಕ್ಕೂ ಮುನ್ನ ತನ್ನ ಮರಣ ಘೋಷಣೆಯ ವಿಡಿಯೋ ಮಾಡಿದ್ದು, ವಿಡಿಯೋದ ಪ್ರಕಾರ ಸತ್ತ ಕೆಲ ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​​ ಆಗಿದೆ.
/newsfirstlive-kannada/media/post_attachments/wp-content/uploads/2024/11/Tiktok-star-1.jpg)
24 ವರ್ಷದ ಬೆಲ್ಲಾ ಬ್ರಾಡ್​​ಪೋರ್ಡ್​​ ರಾಬ್ಡೋಮಿಯೋಸಾರ್ಕೋಮಾ ಎಂಬ ಅಪರೂಪದ ಕ್ಯಾನ್ಸರ್​​ನೊಂದಿಗೆ ಹೋರಾಡುತ್ತಿದ್ದಳು. ಅದಕ್ಕೂ ಮುನ್ನ ತನ್ನ ಸಾವಿನ ಕುರಿತ ‘ಗೆಟ್​ ರೆಡಿ ವಿತ್​ ಮಿ’ ಎಂಬ ಘೋಷಣೆಯ ವಿಡಿಯೋ ಮಾಡಿದ್ದಾಳೆ.
ಇದನ್ನೂ ಓದಿ: VIDEO: ಚಿಕ್ಕಮ್ಮ ರೀಲ್ಸ್​ ಮಾಡೋದರಲ್ಲೇ ಬ್ಯುಸಿ.. ಕಣ್ಮೆದುರೇ ಕೊಚ್ಚಿಕೊಂಡು ಹೋದಳು ಪುಟ್ಟ ಬಾಲಕಿ!
ಅಕ್ಟೋಬರ್​ 15ರಂದು ರಾಬ್ಡೋಮಿಯೋಸಾರ್ಕೋಮಾ ಕಾಯಿಲೆಗೆ ತುತ್ತಾಗಿ ಬೆಲ್ಲಾ ಕೊನೆಯುಸಿರೆಳೆಯುತ್ತಾಳೆ ಎಂದು ವಿಡಿಯೋದ ಟೈಟಲ್​ ಹೇಳಿದೆ. ಬೆಲ್ಲಾ ಸಾವನ್ನಪ್ಪಿದ ಬಳಿಕ ಅಂದರೆ ಅಕ್ಟೋಬರ್​ 31ರಂದು ಆಕೆಯ ವಿಡಿಯೋ ಅಪ್ಲೋಡ್​ ಆಗಿದೆ.
ಬೆಲ್ಲಾ ಬ್ರಾಡ್​​ಪೋರ್ಡ್, ಹನ್ನೊಂದು ನಿಮಿಷಗಳ ವಿಡಿಯೋದಲ್ಲಿ ತನ್ನ ನಿಧನದ ಬಗ್ಗೆ ತಾನೇ ಘೋಷಿಸಿದ್ದಾಳೆ. ಜೊತೆಗೆ ಟಿಕ್​ ಟಾಕ್​ ಪ್ರಯಾಣದ ಬಗ್ಗೆ ಮಾತನಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್​ ಮತ್ತು ಫಾಲೋವರ್ಸ್​​ಗಳಿಂದ ಸಿಕ್ಕಿದ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ.
/newsfirstlive-kannada/media/post_attachments/wp-content/uploads/2024/11/Tiktok-star-2.jpg)
ವಿಡಿಯೋದಲ್ಲಿ ‘‘ನನಗೆ ಟರ್ಮಿನಲ್​ ಕ್ಯಾನ್ಸರ್​ ಇದೆ. ನನ್ನ ಜೀವನ ಕೊನೆಗೊಂಡಿದೆ. ನಾನು ನಿಧನಹೊಂದಿದ್ದೇನೆ. ಹಾಗಾಗಿ ನಾನು ‘ಗೆಡ್​ ರೆಡಿ ವಿತ್​ ಮಿ’ ಎಂದು ಹೇಳಲು ಬಯಸುತ್ತೇನೆ. ನಾನು ನನ್ನ ಫ್ಯಾಷನನ್ನು ಪ್ರೀತಿಸುತ್ತೇನೆ. ನನ್ನನ್ನು ಫಾಲೋ ಮಾಡಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನ ವಿಡಿಯೋಗಳನ್ನು ಮತ್ತೆ ಮತ್ತೆ ನೋಡುತ್ತಿರಿ’’ ಎಂದು ಹೇಳಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us