/newsfirstlive-kannada/media/post_attachments/wp-content/uploads/2025/01/tilak_varma-1.jpg)
ತಿಲಕ್ ವರ್ಮಾ ಕರಿಯರ್​ ಮುಗಿದು ಹೋಯಿತು, ಟೀಮ್ ಇಂಡಿಯಾ ಕಮ್​ಬ್ಯಾಕ್ ಕಷ್ಟ ಅನ್ನೋ ಟೈಮ್ ಬಂದಿತ್ತು. ಆದ್ರೆ ಈತನೇ ಈಗ ಮ್ಯಾಚ್​ ವಿನ್ನರ್. ಸಿಗುವ ಒಂದೊಂದೂ ಚಾನ್ಸ್ ಕೂಡ ಉಪಯೋಗಿಸಿಕೊಳ್ಳುತ್ತಿರುವ ತಿಲಕ್, ಟೀಮ್ ಇಂಡಿಯಾದ ವಿಜಯ ತಿಲಕ ಆಗುತ್ತಿದ್ದಾರೆ. ತನ್ನ ವಿಧ್ವಂಸಕಾರಿ ಬ್ಯಾಟಿಂಗ್​ನಿಂದ ಕಮ್​ಬ್ಯಾಕ್ ಅಂದ್ರೆ, ಹಿಂಗಿರಬೇಕು ಅನ್ನೋದನ್ನ ತೋರಿಸಿದ್ದಾರೆ.
ಅಖಾಡದಲ್ಲಿ ವಾರಿಯರ್​​​ನಂತ ಹೋರಾಟ, ಫಿಯರ್​ ಲೆಸ್ ಬ್ಯಾಟಿಂಗ್. 150ರ ವೇಗದ ಜೋರ್ಫಾ ಆರ್ಚರ್​ ಕೂಡ ಲೆಕ್ಕಕ್ಕಿಲ್ಲ. ಸುಲಭವಾಗಿ ಅಷ್ಟ ದಿಕ್ಕುಗಳಿಗೂ ಚೆಂಡನ್ನು ಪರಿಚಯಿಸುವ ಪವರ್ ಹಿಟ್ಟರ್. ಕಂಡೀಷನ್ಸ್​ ಲೆಕ್ಕಕ್ಕಿಲ್ಲ. ಪರಿಸ್ಥಿತಿ ಬಗ್ಗೆ ಕೇರ್ ಮಾಡಲ್ಲ. ಸಮಯ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಚಾಣಕ್ಷ​. ಇದಕ್ಕೆಲ್ಲಾ ಕೇರ್ ಆಫ್ ಅಡ್ರೆಸ್​ ಒನ್ ಆ್ಯಂಡ್ ಒನ್ಲಿ ತಿಲಕ್ ವರ್ಮಾ.
/newsfirstlive-kannada/media/post_attachments/wp-content/uploads/2025/01/Tilak-Varma.jpg)
ಇಂಥಹ ಎಲ್ಲಾ ಕ್ವಾಲಿಟೀಸ್​ಗೆ ಸಾಕ್ಷಿಯಾಗಿದ್ದು ಇಂಗ್ಲೆಂಡ್ ಎದುರಿನ 2ನೇ ಟಿ20 ಮ್ಯಾಚ್. 166ರ ಟಾರ್ಗೆಟ್​ ಬೆನ್ನಟ್ಟಿದ್ದ ಟೀಮ್ ಇಂಡಿಯಾ, ನಿಜಕ್ಕೂ ಸೋಲಿನ ಸುಳಿಯಲ್ಲಿತ್ತು. ಟಾಪ್ ಆಟಗಾರರೆಲ್ಲಾ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರು. ಆದ್ರೆ, ಆರಂಭದಿಂದ ಅಂತ್ಯದ ತನಕ ವಾರಿಯರ್​ನಂತೆ ಹೋರಾಡಿ ವಿಜಯ ತಿಲಕವನ್ನಿಟ್ಟಿದ್ದು ತಿಲಕ್ ವರ್ಮಾ. ಇಂಥಹ ಮ್ಯಾಚ್ ವಿನ್ನರ್ ತಿಲಕ್​ ಕರಿಯರ್​​, ಫಸ್ಟ್​ ಹಾಫ್​ನಲ್ಲೇ ಬಹುತೇಕ ಅಂತ್ಯವಾಗಿತ್ತು.
ಕರಿಯರ್​ಗೆ ಟ್ವಿಸ್ಟ್ ಕೊಟ್ಟ ರಿಯಾನ್ ಪರಾಗ್ ಇಂಜುರಿ!
​2023ರ ಆಗಸ್ಟ್​ 3, ವೆಸ್ಟ್​ ಇಂಡೀಸ್ ಎದುರಿನ ಟಿ20 ಪಂದ್ಯದಲ್ಲಿ ಡೆಬ್ಯು ಮಾಡಿದ್ದ ತಿಲಕ್, ಮೊದಲ 3 ಪಂದ್ಯಗಳಲ್ಲಿ ಡಿಸೆಂಟ್ ಪರ್ಫಾಮೆನ್ಸ್​ ನೀಡಿದ್ದರು. ಬಳಿಕ ಟಿ20ಯಲ್ಲಿ ಖಾಯಂ ಸ್ಥಾನವೂ ಸಿಕ್ಕಿತ್ತು. ಆದ್ರೆ, ಆರಂಭಿಕ 3 ಪಂದ್ಯಗಳ ಬಳಿಕ ತಿಲಕ್ ವರ್ಮಾ ಆಟದ ಶೈಲಿ ಬದಲಾಗಿತ್ತು. ಭರವಸೆ ಹುಟ್ಟುಹಾಕಿದ್ದ ತಿಲಕ್, ಸೈಲೆಂಟ್ ಆಗಿ ಹಳಿ ತಪ್ಪಿದ್ದ. 16 ಪಂದ್ಯಗಳಿಂದ ಜಸ್ಟ್​ 336 ರನ್​ ಕಲೆ ಹಾಕಿದ ತಿಲಕ್, ಅಫ್ಘನ್ ಸರಣಿ ಬಳಿಕ ಟೀಮ್ ಇಂಡಿಯಾದಿಂದ ಕಿಕ್​ಔಟ್ ಆಗಿದ್ದರು.
ಗಂಭೀರ್ ಕೋಚ್ ಅದ್ಮೇಲೆ, ಜಿಂಬಾಬ್ವೆ, ಶ್ರೀಲಂಕಾ, ಬಾಂಗ್ಲಾ ಎದುರಿನ ಸರಣಿಗಳಿಂದ ತಿಲಕ್​ ಡ್ರಾಪ್ ಆಗಿದ್ರು.ಟೀಮ್ ಇಂಡಿಯಾಗೆ ಕಮ್​ಬ್ಯಾಕ್ ಬಹುತೇಕ ಕಷ್ಟವಾಗಿತ್ತು. ರಿಯಾನ್ ಪರಾಗ್ ಇಂಜುರಿ, ತಿಲಕ್ ಕಮ್​ಬ್ಯಾಕ್​ಗೆ ದಾರಿ ಮಾಡಿಕೊಡ್ತು.
ತಿಲಕ್ ಸಕ್ಸಸ್ ಹಿಂದೆ ಸೂರ್ಯಕುಮಾರ್ ಕೃಪೆ..!
ಸೌತ್ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ತಿಲಕ್, ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಂಚಿಕೊಂಡರು. ಸೌತ್ ಆಫ್ರಿಕಾ ಪ್ರವಾಸ ಮೊದಲ 2 ಪಂದ್ಯಗಳಲ್ಲಿ ಕ್ರಮವಾಗಿ 33, 20 ರನ್​​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದ ತಿಲಕ್​, ಕ್ಯಾಪ್ಟನ್ ಸೂರ್ಯ ಬಳಿಕ 3ನೇ ಸ್ಥಾನದಲ್ಲಿ ಬ್ಯಾಟ್​ ಬೀಸುವುದಾಗಿ ಕೇಳಿದರು. ಇದಕ್ಕೆ ಪೂರಕವಾಗಿ ಸ್ಪಂಧಿಸಿದ ಸೂರ್ಯ ಗ್ರೀನ್ ಸಿಗ್ನಲ್ ನೀಡಿದ್ದರು. ಸ್ಥಾನ ಸಿಕ್ಕ ಬೆನ್ನಲ್ಲೇ ತಿಲಕ್, ವಿಧ್ವಂಸ ಸೃಷ್ಟಿಸಿದರು.
3ನೇ ಪಂದ್ಯದಲ್ಲಿ ಅಜೇಯ 120 ರನ್ ಚಚ್ಚಿದ್ದ ತಿಲಕ್ ವರ್ಮಾ, 4ನೇ ಟಿ20ಯಲ್ಲಿ ಅಜೇಯ 107 ರನ್ ಸಿಡಿಸಿದರು. ಅಷ್ಟೇ ಅಲ್ಲ, ಇದೀಗ ಇಂಗ್ಲೆಂಡ್ ಎದುರು ಅದ್ಭುತ ಆಟವಾಡಿದ ತಿಲಕ್, ವೃತ್ತಿ ಜೀವನದ ಆರಂಭಿಕ 16 ಪಂದ್ಯಗಳಿಂದ ಗಳಿಸಿದ್ದ​ 336 ರನ್​ಗಳನ್ನು ಕೊನೆ 6 ಪಂದ್ಯಗಳಲ್ಲೇ ಕ್ರಾಸ್ ಮಾಡಿದ್ದಾರೆ.
ಕೊನೆ 6 ಪಂದ್ಯಗಳಲ್ಲಿ ತಿಲಕ್ ವರ್ಮಾ
ಕೊನೆ 6 ಪಂದ್ಯಗಳಿಂದ 371 ರನ್ ಸಿಡಿಸಿರುವ ತಿಲಕ್ ವರ್ಮಾ, 185.50ರ ಬ್ಯಾಟಿಂಗ್ ಅವರೇಜ್​ನಲ್ಲಿ ರನ್ ಗಳಿಸಿದ್ದಾರೆ. 1 ಅರ್ಧಶತಕ, 2 ಶತಕ ಸಿಡಿಸಿರುವ ಸೂರ್ಯ, 175ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: BIGG BOSS ರನ್ನರ್ ಅಪ್ ತ್ರಿವಿಕ್ರಮ್ ಫಸ್ಟ್ ರಿಯಾಕ್ಷನ್.. ವಿನ್ನರ್ ಹನುಮಂತು ಬಗ್ಗೆ ಏನಂದ್ರು?
/newsfirstlive-kannada/media/post_attachments/wp-content/uploads/2025/01/TILAK_VARMA_JUMP.jpg)
ಟಿ20 ಕ್ರಿಕೆಟ್​ನಲ್ಲಿ ತಿಲಕ್ ಅಜೇಯ ರನ್ ದಾಖಲೆ..!
ಸೌತ್ ಆಫ್ರಿಕಾ ಪ್ರವಾಸದಲ್ಲಿ ಕಮ್​​ಬ್ಯಾಕ್ ಮಾಡಿದ ತಿಲಕ್ ವರ್ಮಾ, ಕಳೆದ 4 ಪಂದ್ಯಗಳಿಂದ ಅಜೇಯ ರನ್​ ಸರದಾರರಾಗಿ ಮೆರೆದಾಡ್ತಿದ್ದಾರೆ. ಸೌತ್ ಆಫ್ರಿಕಾ ಎದುರಿನ ಕೊನೆ 2 ಪಂದ್ಯಗಳಲ್ಲಿ ಅಜೇಯ ಶತಕ ಗಳಿಸಿದ್ದ ತಿಲಕ್ ವರ್ಮಾ, ಇಂಗ್ಲೆಂಡ್ ಎದುರು ಕ್ರಮವಾಗಿ ಅಜೇಯ 19, 72 ರನ್ ಗಳಿಸಿದ್ದಾರೆ. ಇದರೊಂದಿಗೆ ಟಿ20ಯಲ್ಲಿ ಅಜೇಯ 318 ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಜೇಯ 258 ರನ್ ಗಳಿಸಿದ್ದ ಕೊಹ್ಲಿ ದಾಖಲೆಯನ್ನು ಛಿದ್ರಗೊಳಿಸಿರುವ ತಿಲಕ್, 3ನೇ ಕ್ರಮಾಂಕದ ಉತ್ತರಾಧಿಕಾರತ್ವಕ್ಕೆ ನಾನೇ ಬೆಸ್ಟ್​ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.
ಸೌತ್ ಆಫ್ರಿಕಾ ಸರಣಿಯಿಂದ ಸಾಲಿಡ್ ಫಾರ್ಮ್​ನಲ್ಲಿರುವ ತಿಲಕ್, ದಿನೇ ದಿನೇ ಮ್ಯಾಚ್ ವಿನ್ನರ್ ಆಗಿ ರೂಪುಗೊಳ್ತಿದ್ದಾರೆ. ಇದು ಹೀಗೆ ಮುಂದುವರಿದು ಮತ್ತಷ್ಟು ಸಾಧನೆ ಮಾಡಲಿ ಅನ್ನೋದೇ ಫ್ಯಾನ್ಸ್ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us