/newsfirstlive-kannada/media/post_attachments/wp-content/uploads/2025/04/TILAK-VARMA.jpg)
ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಮುಂಬೈ ಇಂಡಿಯನ್ಸ್ (MI) 12 ರನ್ಗಳ ಅಂತರದಲ್ಲಿ ಸೋಲನ್ನು ಕಂಡಿದೆ. ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ತುಂಬಾ ಭಾವುಕರಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ವಿವಾದವೊಂದು ಭುಗಿಲೆದ್ದಿದ್ದು, ಭಾರೀ ಚರ್ಚೆ ಆಗ್ತಿದೆ.
ಏನದು..?
ಮುಂಬೈ ಇಂಡಿಯನ್ಸ್ ತಂಡದ ಎಡಗೈ ಸ್ಫೋಟಕ ಬ್ಯಾಟರ್ ತಿಲಕ್ ವರ್ಮಾ ವಿವಾದದ ಕೇಂದ್ರಬಿಂದು. ಪ್ರತಿ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ವರ್ಮಾ ನಿನ್ನೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದು ರನ್ ಗಳಿಸಲು ಪರದಾಡಿದರು. 23 ಎಸೆತದಲ್ಲಿ ಕೇವಲ 2 ಬೌಂಡರಿ ಬಾರಿಸಿ 25 ರನ್ಗಳಿಸಿ ಅಚ್ಚರಿ ಮೂಡಿಸಿದರು. ವಿಷಯ ಅದಲ್ಲ, ಮುಂಬೈ ಇಂಡಿಯನ್ಸ್ ಗೆಲ್ಲಲು 7 ಬಾಲ್ಗಳಲ್ಲಿ 24 ರನ್ಗಳ ಅಗತ್ಯವಿದ್ದಾಗ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಅವರನ್ನು ವಾಪಸ್ ಕರೆಸಿಕೊಂಡಿತು. ಅಂದರೆ ತಿಲಕ್ ವರ್ಮಾ ನಿವೃತ್ತರಾಗಿದ್ದಾರೆ. ಅವರ ಸ್ಥಾನದಲ್ಲಿ ಮಿಚೆಲ್ ಸ್ಯಾಂಟ್ನರ್ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಲಾಯಿತು. ಮುಂಬೈ ಇಂಡಿಯನ್ಸ್ ಮಾಡಿದ ಈ ತಂತ್ರ ಪ್ರಯೋಜನ ಆಗಲಿಲ್ಲ. ತಂಡವು ಅಂತಿಮವಾಗಿ 12 ರನ್‌ಗಳಿಂದ ಸೋತಿತು.
ಇದನ್ನೂ ಓದಿ: 4, 4, 4, 4, 4, 4, 4, 6, 6; ಮುಂಬೈ ಬೌಲರ್ಗಳನ್ನ ಚಚ್ಚಿದ ಓಪನರ್ ಮಿಚೆಲ್ ಮಾರ್ಷ್, ಅರ್ಧ ಶತಕ
ತಿಲಕ್ ವರ್ಮಾ 4ನೇ ಬ್ಯಾಟ್ಸ್‌ಮನ್..!
ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್ ನಿವೃತ್ತಿ ಘೋಷಿಸಿದ್ದು ಇದು ನಾಲ್ಕನೇ ಬಾರಿ. 2022ರಲ್ಲಿ ರವಿಚಂದ್ರನ್ ಅಶ್ವಿನ್ ಈ ರೀತಿ ಮೊದಲ ಬಾರಿಗೆ ನಿವೃತ್ತರಾಗಿದ್ದರು. ನಂತರ ಅಥರ್ವ ತೈಡೆ ಮತ್ತು ಸಾಯಿ ಸುದರ್ಶನ್ ಕೂಡ 2023 ರಲ್ಲಿ ನಿವೃತ್ತರಾಗಿದ್ದರು.
ಪ್ರಶ್ನೆ ಏನು..?
ಪ್ರಶ್ನೆಗಳು ತಿಲಕ್ ವರ್ಮಾ ಬಗ್ಗೆ ಮಾತ್ರವಲ್ಲ. ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆಯೂ ಇವೆ. ಯಾದವ್ 43 ಎಸೆತಗಳಲ್ಲಿ 67 ರನ್ ಗಳಿಸಿದ್ದು ನಿಜ. ಕೊನೆಯ ಹಂತದಲ್ಲಿ ಅವರ ಬ್ಯಾಟಿಂಗ್ ನಿಧಾನವಾಯಿತು. ಹಾರ್ದಿಕ್ ಪಾಂಡ್ಯ ಆರಂಭದಲ್ಲಿ ದೊಡ್ಡ ಹೊಡೆತಗಳನ್ನು ಹೊಡೆದರೂ ಕೊನೆಯಲ್ಲಿ ಅವರ ಬ್ಯಾಟ್ ದೊಡ್ಡ ಹೊಡೆತಗಳು ಹೊರಬರಲಿಲ್ಲ. ಆದರೆ ತಿಲಕ್ ಎಂತಹ ಬ್ಯಾಟ್ಸ್‌ಮನ್ ಎಂದು ಎಲ್ಲರಿಗೂ ತಿಳಿದಿದೆ. ಹೀಗಿದ್ದೂ ತಿಲಕ್ ವರ್ಮಾ ಅವರನ್ನು ವಾಪಸ್ ಕರೆಸಿಕೊಂಡಿರೋದು ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಮತ್ತೆ ಸೋಲ್ತಿದ್ದಂತೆಯೇ ಜೋರಾಗಿ ಅತ್ತ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್