/newsfirstlive-kannada/media/post_attachments/wp-content/uploads/2025/01/TILAK_VARMA_JUMP.jpg)
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ T20 ಸರಣಿಯ 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ರಣರೋಚಕ ಗೆಲುವು ಪಡೆದಿದೆ. ಈ ಮೂಲಕ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಇದರ ಜೊತೆ 3ನೇ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲಲೇ ಬೇಕಾದ ಅನಿವಾರ್ಯ ಇದೆ. ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ತಿಲಕ್ ವರ್ಮಾ ವಿಶೇಷವಾದ ದಾಖಲೆ ಬರೆದಿದ್ದಾರೆ.
ಎದುರಾಳಿ ಇಂಗ್ಲೆಂಡ್ ನೀಡಿದ 165 ರನ್ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಅಭಿಷೇಕ್, ಸಂಜು ಜೋಡಿ ಈ ಸಲ ಬೇಸರ ತರಿಸಿತು. ಕ್ಯಾಪ್ಟನ್ ಸೂರ್ಯ ಕೂಡ ಔಟ್ ಆಗಿರುವುದು ಭಾರೀ ನಿರಾಸೆ ಮೂಡಿಸಿತು. ವಿಕೆಟ್ ಬೀಳುತ್ತಿದ್ದರೂ ಧೈರ್ಯದಿಂದ ಹೋರಾಡಿದ ತಿಲಕ್ ವರ್ಮಾ ಪಂದ್ಯದಲ್ಲಿ ಎದುರಾಳಿ ಬೌಲರ್ಗಳಿಗೆ ಬೆವರಿಳಿಸಿದರು.
ಇದನ್ನೂ ಓದಿ:IPL 2025ರಲ್ಲೂ ಫ್ಯಾನ್ಸ್ಗೆ ಫುಲ್ ಮನರಂಜನೆ.. ಮಹೇಂದ್ರ ಸಿಂಗ್ ಧೋನಿ ಸಿದ್ಧತೆ ಹೇಗಿದೆ?
ಚಿದಂಬರಂ ಸ್ಟೇಡಿಯಂನಲ್ಲಿ ಚಿತ್ತಾರ ಮೂಡಿಸಿದ ಯಂಗ್ ಪ್ಲೇಯರ್, ಕೇವಲ 55 ಎಸೆತಗಳಲ್ಲಿ 4 ಫೋರ್, 5 ಭರ್ಜರಿ ಸಿಕ್ಸರ್ ಸಮೇತ 72 ರನ್ ಗಳಿಸಿ ಅಜೇಯರಾಗಿ ಭಾರತಕ್ಕೆ ಗೆಲುವು ತಂದರು. ಟಿ20 ಪಂದ್ಯಗಳಲ್ಲಿ ಸತತವಾಗಿ ಔಟ್ ಆಗದೇ 318 ರನ್ ಗಳಿಸಿದ್ದಾರೆ. ಕಳೆದ 4 ಪಂದ್ಯಗಳಲ್ಲಿ ತಿಲಕ್ ವರ್ಮಾ ಔಟ್ ಆಗದೇ ಅಜೇಯರಾಗಿ ಉಳಿಯುತ್ತಿದ್ದಾರೆ. ಈ ರೀತಿಯಾಗಿ ಅಜೇಯರಾಗಿ ಉಳಿದು ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಆಗಿದ್ದಾರೆ.
ತಿಲಕ್ ವರ್ಮಾ ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಪ್ರದರ್ಶನ ನೋಡುವುದಾದರೆ, ದಕ್ಷಿಣ ಆಫ್ರಿಕಾ ವಿರುದ್ಧ 56 ಎಸೆತಗಳಲ್ಲಿ 107, ಮತ್ತೆ ಆಫ್ರಿಕಾ ವಿರುದ್ಧ 47 ಎಸೆತಗಳಲ್ಲಿ 120, 19 ರನ್ಸ್ ಹಾಗೂ ಇಂಗ್ಲೆಂಡ್ ವಿರುದ್ಧ ಈಗ ಔಟಾಗದೆ 72 ರನ್ ಗಳಿಸಿದ್ದಾರೆ. ಈ ಎಲ್ಲ ಸೇರಿ 318 ರನ್ಗಳನ್ನು ಔಟ್ ಆಗದೇ ತಿಲಕ್ ಗಳಿಸಿದ್ದಾರೆ. ಈ ಮೂಲಕ ನ್ಯೂಜಿಲೆಂಡ್‌ನ ಮಾರ್ಕ್ ಚಾಪ್‌ಮನ್ 271 ರನ್ಗಳ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಔಟ್ ಆಗದೇ ಹೆಚ್ಚು ರನ್ ಗಳಿಸಿದವರ ಪಟ್ಟಿ
- ತಿಲಕ್ ವರ್ಮಾ (ಭಾರತ)- 318 (107*, 120*, 19*, 72*)
- ಮಾರ್ಕ್ ಚಾಪ್‌ಮನ್ (ನ್ಯೂಜಿಲೆಂಡ್)- 271 (65*, 16*, 71*, 104*, 15)
- ಆರೋನ್ ಫಿಂಚ್ (ಆಸ್ಟ್ರೇಲಿಯಾ)- 240 (68*, 172)
- ಶ್ರೇಯಸ್ ಅಯ್ಯರ್ (ಭಾರತ)- 240 (57*, 74*, 73*, 36)
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 239 (100*, 60*, 57*, 2*, 20)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ