/newsfirstlive-kannada/media/post_attachments/wp-content/uploads/2025/04/Tim_David_1.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಟಿಮ್ ಡೇವಿಡ್ ಹೈದ್ರಾಬಾದ್ ವಿರುದ್ಧ ಫೀಲ್ಡಿಂಗ್ ಮಾಡುವ ವೇಳೆ ಆರ್ಮ್ಸ್ಟ್ರಿಂಗ್ ಇಂಜುರಿಗೆ ಒಳಗಾಗಿದ್ದರು.
ಇದುವರೆಗೂ ಟಿಮ್ ಡೇವಿಡ್ ಇಂಜುರಿ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಮೂಲಗಳ ಪ್ರಕಾರ ಟಿಮ್, ಲಕ್ನೋ ವಿರುದ್ಧದ ಮಹತ್ವದ ಪಂದ್ಯಕ್ಕೆ ಅಲಭ್ಯರಾಗೋ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಟಿಮ್ ಡೇವಿಡ್ ಫೀಲ್ಡ್ಗೆ ಇಳಿಯದಿದ್ರೆ, ಇಂಗ್ಲೀಷ್ ಆಲ್ರೌಂಡರ್ ಲಿಯಾಮ್ ಲಿಂಗ್ಸ್ಟೋನ್ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯಲಿದ್ದಾರೆ. ಆರ್ಸಿಬಿ ಮ್ಯಾನೇಜ್ಮೆಂಟ್ ಸಹ, ಟಿಮ್ ಡೇವಿಡ್ ಮೆಡಿಕಲ್ ರಿಪೋರ್ಟ್ಗಾಗಿ ಕಾಯ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಲಕ್ನೋದಲ್ಲಿ ಇವತ್ತು ಆರ್ಸಿಬಿಗೆ ಒಂದಲ್ಲ, ಎರಡು ಸವಾಲ್..! ಏನದು..?
ಹೇಜಲ್ವುಡ್ ಜೋಶ್
ಆರ್ಸಿಬಿಯ ಸೂಪರ್ಸ್ಟಾರ್ ಪೇಸರ್ ಜೋಷ್ ಹೇಜಲ್ವುಡ್, ಶೋಲ್ಡರ್ ಇಂಜುರಿಯಿಂದ ರಿಕವರ್ ಆಗಿದ್ದಾರೆ. ಆಸಿಸ್ನಿಂದ ಸೀದಾ ಆರ್ಸಿಬಿ ಕ್ಯಾಂಪ್ಗೆ ಎಂಟ್ರಿ ಕೊಟ್ಟಿರುವ ಹೇಝಲ್ವುಡ್, ಲಕ್ನೋ ವಿರುದ್ಧ ಪಂದ್ಯ ಆಡಲಿದ್ದಾರೆ. ಹೇಝಲ್ವುಡ್ ಆಗಮನದಿಂದ ಬೆಂಗಳೂರು ತಂಡಕ್ಕೆ ಬಿಗ್ ಬೂಸ್ಟ್ ಆಗಿದೆ. ಆ ಮೂಲಕ ಆರ್ಸಿಬಿಯ ಬೌಲಿಂಗ್ ಅಟ್ಯಾಕ್ ಕೂಡ ಬಲ ತುಂಬಿದಂತಾಗಿದೆ.
ಲಕ್ನೋ ಸೂಪರ್ಜೈಂಟ್ಸ್ ತಂಡ ಲೀಗ್ನ ಕೊನೆಯ ಪಂದ್ಯವನ್ನ ಗೆದ್ದು, ಟೂರ್ನಿಗೆ ಗುಡ್ಬೈ ಹೇಳಲು ಹೊರಟಿದ್ರೆ, ಅತ್ತ ಆರ್ಸಿಬಿ ಗೆಲ್ಲಲೇಬೇಕಾದ ಪಂದ್ಯದಲ್ಲಿ ಅದೃಷ್ಟದ ಹುಡುಕಾಟದಲ್ಲಿದೆ. ಲಕ್ನೋದಲ್ಲಿ ಆರ್ಸಿಬಿಗೆ ಲಕ್ ಖುಲಾಯಿಸುತ್ತಾ..? ಕಾದುನೋಡಬೇಕು.
ಇದನ್ನೂ ಓದಿ: RCB ಗೆಲ್ಲಲು ಈ ಫಾರ್ಮುಲಾ ಬೇಕೇಬೇಕು.. ಇವತ್ತು ಯಾರ ಕೊಡುಗೆ ತುಂಬಾನೇ ಮುಖ್ಯ ಗೊತ್ತಾ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ