Advertisment

ಆರ್​​ಸಿಬಿಗೆ 3 ಸ್ಟಾರ್​ಗಳು ರೀ ಎಂಟ್ರಿ.. ಇಟ್ಟ ನಂಬಿಕೆ ಉಳಿಸಿಕೊಳ್ಳೋದೇ ದೊಡ್ಡ ಚಾಲೆಂಜ್..!

author-image
Ganesh
Updated On
ಚೆನ್ನೈ​ ಬತ್ತಳಿಕೆಯಲ್ಲಿ ಭಾರೀ ಬ್ರಹ್ಮಾಸ್ತ್ರ.. RCB ಮೇಲೆ ಪ್ರಯೋಗಿಸಲು ಧೋನಿ ಬಿಗ್ ಪ್ಲಾನ್!
Advertisment
  • 10 ವರ್ಷಗಳ ಬಳಿಕ ತವರಿಗೆ ಆರ್​.ಅಶ್ವಿನ್
  • 15 ವರ್ಷಗಳ ಬಳಿಕ ರೆಡ್​ ಆರ್ಮಿಗೆ ಭುವಿ
  • ಕೆಕೆಆರ್​ಗೆ ನಾಯಕನಾಗಿ ರಹಾನೆಯ ರೀ-ಎಂಟ್ರಿ..!

ಇಂಡಿಯನ್ ಪ್ರಿಮೀಯರ್ ಲೀಗ್. ಪ್ರತಿ ಸೀಸನ್​ನಲ್ಲಿ ಒಂದಿಲ್ಲೊಂದು ವಿಶೇಷತೆ ಇರುತ್ತೆ. ಹೊಸ ಆಟಗಾರರು ಉದಯಿಸ್ತಾರೆ. ಅಚ್ಚರಿಯ ಪ್ರತಿಭೆಗಳು ಕಾಣ ಸಿಗುತ್ವೆ. ಅದರಂತೆಯೇ ಈ ಬಾರಿಯ ಐಪಿಎಲ್ ಕೆಲ ಆಟಗಾರರ ಪಾಲಿಗೆ ನಿಜಕ್ಕೂ ಸ್ಪೆಷಲ್.

Advertisment

10 ವರ್ಷಗಳ ಬಳಿಕ ಮರಳಿಗೂಡಿಗೆ ಅಶ್ವಿನ್

ರವಿಚಂದ್ರನ್ ಅಶ್ವಿನ್. 2009ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಂಪ್ ಸೇರಿದ್ದ ಅಶ್ವಿನ್ 2015ರ ತನಕ ಚೆನ್ನೈ ಪರ ಮ್ಯಾಜಿಕ್ ಮಾಡಿದ್ರು. ಬಳಿಕ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್​. ಪಂಜಾಬ್ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್​, ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ರು. ಚೆನ್ನೈ ತಂಡದೊಂದಿಗೆ ಕ್ರಿಕೆಟ್​ ಜರ್ನಿ ಶುರುಮಾಡಿದ ಅಶ್ವಿನ್​, ಈಗ ಲೆಂಜೆಡ್​ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ತವರಿನ ತಂಡ ಸೇರಿದ್ದಾರೆ.

ಅಶ್ವಿನ್ ಮಾತ್ರವಲ್ಲ. ಇಂಗ್ಲೆಂಡ್ ಆಲ್​ರೌಂಡರ್ ಸ್ಯಾಮ್ ಕರನ್ ಸಹ, 2023 ಐಪಿಎಲ್ ಬಳಿಕ ಮತ್ತೆ ಚೆನ್ನೈ ಸೇರಿದ್ದಾರೆ. ಮತ್ತೆ ಚೆನ್ನೈನ ಚಾಂಪಿಯನ್ ಪಟ್ಟಕ್ಕೇರಿಸುವ ಇರಾದೆಯಲ್ಲಿದ್ದಾರೆ.

15 ವರ್ಷಗಳ ಬಳಿಕ ರೆಡ್​ ಆರ್ಮಿಗೆ ಭುವಿ

ಆರ್​ಸಿಬಿ ತಂಡಕ್ಕೆ ಒಂದಲ್ಲ. ಎರಡಲ್ಲ. ಬರೋಬ್ಬರಿ ಮೂವರು ಆಟಗಾರರ ಮರು ಆಗಮನ ಆಗಿದೆ. ಸ್ವಿಂಗ್ ಮಾಸ್ಟರ್ ಭುವಿ, ಕನ್ನಡಿಗ ಪಡಿಕ್ಕಲ್, ಟಿಮ್ ಡೇವಿಡ್ ಕಮ್​ಬ್ಯಾಕ್​ ಮಾಡಿದ್ದಾರೆ. 2009ರಲ್ಲಿ ಆರ್​ಸಿಬಿ ಮೂಲಕವೇ ಐಪಿಎಲ್ ಸೇರಿದ್ದ ಭುವನೇಶ್ವರ್, 2011ರ ಬಳಿಕ ಪುಣೆ, ಸನ್ ರೈಸರ್ಸ್​ ಹೈದ್ರಾಬಾದ್ ಸೇರಿದ್ದರು. 2016ರಲ್ಲಿ ಸನ್ ರೈಸರ್ಸ್​ನ ಗೆಲುವಿನಲ್ಲಿ ಮೇಜರ್ ರೋಲ್ ಪ್ಲೇ ಮಾಡಿದ್ದ ಭುವಿ, ಇದೀಗ 15 ವರ್ಷಗಳ ಬಳಿಕ ಆರ್​ಸಿಬಿಗೆ ಕಮ್​ಬ್ಯಾಕ್ ಮಾಡಿದ್ದಾರೆ.

Advertisment

2021ರಲ್ಲಿ ಆರ್​ಸಿಬಿ ಮೂಲಕ ಐಪಿಎಲ್​ಗೆ ಎಂಟ್ರಿ ನೀಡಿದ್ದ ಡೇವಿಡ್ 2022, 2023, 2024ರಲ್ಲಿ ಮುಂಬೈ ಪರ ಬ್ಯಾಟ್ ಬೀಸಿದ್ದರು. ಇದೀಗ 3 ವರ್ಷಗಳ ಬಳಿಕ ಆರ್​​ಸಿಬಿಗೆ ಮರಳಿದ್ದಾರೆ. 2020, 2021ರಲ್ಲಿ ಆರ್​ಸಿಬಿ ಪರ ಆಡಿದ್ದ ಕನ್ನಡಿಗ ಪಡಿಕ್ಕಲ್ ಕೂಡ ಲಕ್ನೋ, ರಾಜಸ್ಥಾನ್ ರಾಯಲ್ಸ್ ತಂಡಗಳನ್ನ ಸುತ್ತಿ ಮತ್ತೆ ಮರಳಿಗೂಡಿಗೆ ಸೇರಿದ್ದಾರೆ.

ಇದನ್ನೂ ಓದಿ: ಶಾಕ್ ಕೊಟ್ಟ RCB ಫ್ರಾಂಚೈಸಿ.. ಅಭಿಮಾನಿಗಳ ಅಭಿಮಾನ ಇವ್ರಿಗೆ ಬಂಡವಾಳ..!

ಪಂಜಾಬ್​ಗೆ ಸ್ಟೋಯ್ನಿಸ್, ಮ್ಯಾಕ್ಸ್​ವೆಲ್ ವಾಪಸ್

2015ರಲ್ಲಿ ಡೆಲ್ಲಿ ಮೂಲಕ ಐಪಿಎಲ್ ಜರ್ನಿ ಆರಂಭಿಸಿದ್ದ ಮಾರ್ಕಸ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಸ್ಟೋಯ್ನಿಸ್ 2016, 2017ರಲ್ಲಿ ಪಂಜಾಬ್ ಕಿಂಗ್ಸ್​ ಪರ ಆಡಿದ್ದರು. ನಂತರ ಆರ್​ಸಿಬಿ, ಲಕ್ನೋ ಸೇರಿದರು. ಇದೀಗ 6 ವರ್ಷಗಳ ನಂತರ ಮತ್ತೆ ಪಂಜಾಬ್ ಸೇರಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ಮಾತ್ರವಲ್ಲ, ಮ್ಯಾಕ್ಸ್​ವೆಲ್​ಗೆ 3ನೇ ಬಾರಿಗೆ ಪಂಜಾಬ್​ ಕ್ಯಾಂಪ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ.

Advertisment

ಕೆಕೆಆರ್​ಗೆ ನಾಯಕನಾಗಿ ರಹಾನೆ ಎಂಟ್ರಿ

2008ರಿಂದಲೂ ಐಪಿಎಲ್​ನಲ್ಲಿ ಆಡ್ತಿರುವ ರಹಾನೆ, ಬರೋಬ್ಬರಿ 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಈ ಪೈಕಿ ಕೊಲ್ಕತ್ತಾ ನೈಟ್​ ರೈಡರ್ಸ್ ಕೂಡ ಒಂದಾಗಿದೆ. 2022ರಲ್ಲಿ ಕೊಲ್ಕತ್ತಾ ತೊರೆದಿದ್ದ ರಹಾನೆ, ಈಗ ಮತ್ತದೇ ಕೊಲ್ಕತ್ತಾ ನಾಯಕನ ಪಟ್ಟವೇರಿದ್ದಾರೆ. ನಾಯಕನ ಸಿಂಹಾಸನವನ್ನ ಏರಿರುವ ರಹಾನೆ ಮುಂದೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಸವಾಲಿದೆ. 2017ರ ಬಳಿಕ ಮತ್ತೆ ಡೆಲ್ಲಿ ಸೇರಿರುವ ಕನ್ನಡಿಗ ಕರುಣ್ ನಾಯರ್​, ಮುಂಬೈ ಇಂಡಿಯನ್ಸ್​ ಸೇರಿರುವ ಕರಣ್ ಶರ್ಮ, ಟ್ರೆಂಟ್​ ಬೋಲ್ಟ್​ಗೂ ಈ ಐಪಿಎಲ್ ಸ್ಪೆಷಲ್​​​​​​​​​​​​​​​​​​.

ಈ ಹಿಂದೆ ಆಯಾ ತಂಡದ ಪರ ಪ್ರದರ್ಶನ ನೀಡಲು ಸಾಧ್ಯವಾಗದ ಆಟಗಾರರಿಗೆ ಈ ಸಲ ನಂಬಿಕೆ ಉಳಿಸಿಕೊಳ್ಳುವ ಸೀಸನ್​​​​​​​​​​​​ ಆಗಿದೆ. ಗೇಮ್ ಚೇಂಜರ್​​​​​​​​​​​​​ಗಳಾಗಿ ಮರೆದಾಡಿದ್ದ ಟ್ರೆಂಟ್​ ಬೋಲ್ಟ್​, ಮ್ಯಾಕ್ಸ್​ವೆಲ್​, ಭುವನೇಶ್ವರ್ ಕುಮಾರ್​ರಂಥ ಆಟಗಾರರಿಗೆ ಭರವಸೆ ಉಳಿಸಿಕೊಳ್ಳುವ ಸವಾಲಾಗಿದೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್​ ಕರೆ ತರಲು NASA, SpaceX ಎಷ್ಟು ಕೋಟಿ ಖರ್ಚು ಮಾಡಿವೆ..?

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment