VIDEO- ಚಿನ್ನಸ್ವಾಮಿ ಪಿಚ್ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಆರ್​ಸಿಬಿ ಸ್ಟಾರ್.. ಫುಲ್ ಎಂಜಾಯ್!

author-image
Bheemappa
Updated On
VIDEO- ಚಿನ್ನಸ್ವಾಮಿ ಪಿಚ್ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಆರ್​ಸಿಬಿ ಸ್ಟಾರ್.. ಫುಲ್ ಎಂಜಾಯ್!
Advertisment
  • ಸಿಲಿಕಾನ್ ಸಿಟಿಯಲ್ಲಿ ವರುಣ ಆರ್ಭಟಿಸುವಾಗ ಕ್ರಿಕೆಟರ್ ಸ್ನಾನ
  • ನಿಂತಿದ್ದ ಮಳೆ ನೀರಿನಿಂದಲೇ ಮುಖ ತೊಳೆದುಕೊಂಡ ಡೇವಿಡ್
  • ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಈಜಾಡಿದ ಆಟಗಾರ

2025ರ ಐಪಿಎಲ್ ಸೀಸನ್​-18ರ ಆರಂಭದಲ್ಲಿ ಶುಭಾರಂಭ ಮಾಡಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತೆ ಅದನ್ನೇ ಮುಂದುವರೆಸೋ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ನಾಳೆ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಗೆಲುವಿಗಾಗಿ ಕಾದಾಡಲಿದೆ. ಈ ಪಂದ್ಯ ಗೆದ್ದರೇ ಬೆಂಗಳೂರಿಗೆ ಪ್ಲೇ ಆಫ್​ ಕನ್​ಫರ್ಮ್ ಆಗಲಿದೆ. ಇದು ಈಗಿರುವಾಗಲೇ ಚಿನ್ನಸ್ವಾಮಿ ಪಿಚ್ ಅನ್ನೇ ಆರ್​ಸಿಬಿ ಬ್ಯಾಟರ್ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡಿದ್ದಾರೆ.

ಆರ್​ಸಿಬಿ ಹೊಡೆಬಡಿ ಬ್ಯಾಟ್ಸ್​ಮನ್ ಆಗಿರುವ ಟಿಮ್ ಡೇವಿಡ್​ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಈಜಾಡಿ ಮಸ್ತ್ ಮಜಾ ಮಾಡಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮಳೆಗೇನು ಬರವಿಲ್ಲ. ಅದರಂತೆ ಸ್ಟೇಡಿಯಂ ಸುತ್ತಮುತ್ತ ಜೋರು ಮಳೆ ಬರುವಾಗ, ಮೈದಾನದ ಒಳಗೆ ಟಿಮ್ ಡೇವಿಡ್ ಈಜಾಡಿದ್ದಾರೆ. ವರುಣ ಸಿಂಚನ ಮಾಡುವಾಗಲೇ ಇದೇ ಚಾನ್ಸ್ ಎಂದು ಟಿಮ್ ಡೇವಿಡ್ ಒಬ್ಬರೇ ಅರೆಬೆತ್ತಲೆಯಲ್ಲಿ ಈಜಾಡಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ:ಕನ್ನಡಿಗನೂ ಸೇರಿ IPLನಲ್ಲಿ ಒನ್ ಮ್ಯಾಚ್ ಕಾ ಹೀರೋಗಳು.. ₹23 ಕೋಟಿ ಪ್ಲೇಯರ್​ ಫ್ಲಾಪ್!

publive-image

ಮೈದಾನದಲ್ಲಿ ನಿಂತಿದ್ದ ಮಳೆ ನೀರಿನಿಂದಲೇ ಮುಖ ತೊಳೆದುಕೊಂಡ ಡೇವಿಡ್​ ನಂತರ ಓಡೋಡಿ ಬಂದು ಜೋರಾಗಿ ನೀರಿನಲ್ಲಿ ಡೈವ್ ಮಾಡಿದ್ದಾರೆ. ಸದ್ಯ ಈವಿಡಿಯೋವನ್ನು ಆರ್​ಸಿಬಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಇದನ್ನು ನೋಡಿದ ಆರ್​ಸಿಬಿ ಅಭಿಮಾನಿಗಳು ಕಮೆಂಟ್ಸ್​ ಮಾಡುತ್ತಿದ್ದಾರೆ.

ಟಿಮ್ ಡೇವಿಡ್ ಸೇರಿದಂತೆ ಫಿಲಿಪ್ ಸಾಲ್ಟ್, ಜಾಕೋಬ್ ಬೆಥೆಲ್, ಲಿವಿಂಗ್​​ಸ್ಟೋನ್, ಶೆಫರ್ಡ್ ಹಾಗೂ ಲುಂಗಿ ಎನ್​ಗಿಡಿ​ ಈ ವಿದೇಶಿ ಆಟಗಾರರು ಬೆಂಗಳೂರು ತಂಡದ ಶಕ್ತಿ ಆಗಿದ್ದಾರೆ. ಆರ್​ಸಿಬಿಯ ಪಂದ್ಯದಲ್ಲಿ ಒಬ್ಬರಲ್ಲ ಒಬ್ಬರು ಅಬ್ಬರ ಮಾಡುತ್ತಿರುತ್ತಾರೆ. ತವರಿಗೆ ತೆರಳಿದ್ದ ಇವರು ಇದೀಗ ತಂಡಕ್ಕೆ ಮರಳಿದ್ದು ಚಿನ್ನಸ್ವಾಮಿಯಲ್ಲಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.


">May 16, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment