6,6,6,6,6,6; RCB ಸ್ಟಾರ್​​ ಬ್ಯಾಟರ್​​ನಿಂದ ಸಿಡಿಲಬ್ಬರದ ಬ್ಯಾಟಿಂಗ್​​​; ಫ್ಯಾನ್ಸ್​​ ಫುಲ್​​ ಖುಷ್​​

author-image
Ganesh Nachikethu
Updated On
ಈ ಮೂವರು ಬೌಲರ್ಸ್ ತುಂಬಾನೇ ಡೇಂಜರ್​​.. ಬ್ಯಾಟರ್​​ಗಳು ಎಚ್ಚರದಿಂದ ಆಡಬೇಕು..!
Advertisment
  • ಬಿಗ್​ ಬ್ಯಾಷ್​ ಲೀಗ್ ಪಂದ್ಯವೊಂದರಲ್ಲಿ ಆರ್​​ಸಿಬಿ ಬ್ಯಾಟರ್​​ ಅಬ್ಬರ
  • ಮುಂದಿನ ಐಪಿಎಲ್​​ ಸೀಸನ್​ಗೆ ಮುನ್ನವೇ ಆರ್​​​ಸಿಬಿಗೆ ಗುಡ್​ನ್ಯೂಸ್!
  • ಆರ್​​ಸಿಬಿ ಸ್ಟಾರ್​​ ಫಿನಿಶರ್​​ ಟಿಮ್​ ಡೇವಿಡ್​​ ಅವರು ಬಿರುಸಿನ ಬ್ಯಾಟಿಂಗ್​

ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್​ ಬ್ಯಾಷ್​ ಲೀಗ್ ಪಂದ್ಯವೊಂದರಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಬ್ಯಾಟರ್​​​ ಸಿಡಿಲಬ್ಬರದ ಬ್ಯಾಟಿಂಗ್​​ ಮಾಡಿದ್ದಾರೆ. ಈ ಮೂಲಕ ಮುಂದಿನ ಐಪಿಎಲ್​​ ಸೀಸನ್​ಗೆ ಮುನ್ನವೇ ಆರ್​​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಸಿಡ್ನಿ ಥಂಡರ್ಸ್​ ಮತ್ತು ಹೋಬರ್ಟ್ ಹರಿಕೇನ್ಸ್‌ ಮಧ್ಯೆ ನಡೆದ ಪಂದ್ಯದಲ್ಲಿ ಆರ್​​ಸಿಬಿ ದಾಂಡಿಗ ಅಬ್ಬರಿಸಿದ್ದಾರೆ.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಸಿಡ್ನಿ ಥಂಡರ್ಸ್​​ 6 ವಿಕೆಟ್​ ನಷ್ಟಕ್ಕೆ 164 ರನ್​​​ ಕಲೆ ಹಾಕಿದೆ. ಸಿಡ್ನಿ ಪರ ಡೇವಿಡ್​​ ವಾರ್ನರ್​ ಮಿಂಚಿದ್ರು. ಇವರು ಸಿಡಿಸಿದ 88 ರನ್​ಗಳ ನೆರವಿನಿಂದ ಸಿಡ್ನಿ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯ್ತು.

ಆರ್​​ಸಿಬಿ ಬ್ಯಾಟರ್​ ಅಬ್ಬರ

ಸಿಡ್ನಿ ಥಂಡರ್ಸ್ ನೀಡಿದ ಗುರಿ ಬೆನ್ನತ್ತಿದ ಹೋಬರ್ಟ್ಸ್​ ಹರಿಕೇನ್ಸ್​ 59 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಕ್ರೀಸ್​​ಗೆ ಬಂದ ಆರ್​​ಸಿಬಿ ಸ್ಟಾರ್​​ ಫಿನಿಶರ್​​ ಟಿಮ್​ ಡೇವಿಡ್​​ ಅವರು ಬಿರುಸಿನ ಬ್ಯಾಟಿಂಗ್​ ಮಾಡಿದ್ರು.

ಸಿಡಿಲಬ್ಬರದ ಅರ್ಧಶತಕ

ಸಿಡ್ನಿ ಥಂಡರ್ ವಿರುದ್ಧ ಕೇವಲ 38 ಎಸೆತಗಳಲ್ಲಿ 68 ರನ್ ಚಚ್ಚಿದ ಟಿಮ್​ ಡೇವಿಡ್​ ಅಜೇಯರಾಗಿ ಉಳಿದರು. ಇಷ್ಟೇ ಅಲ್ಲ ಡೇವಿಡ್ ತನ್ನ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿದ್ರು. ಈ ಮೂಲಕ ​ಹರಿಕೇನ್ಸ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಬಿಗ್​ ಬ್ಯಾಷ್​ ಲೀಗ್​ನಲ್ಲಿ ಟಿಮ್ ಡೇವಿಡ್ ಅದ್ಭುತ ಫಾರ್ಮ್​​ನಲ್ಲಿ ಇದ್ದಾರೆ. ತಾನು ಇದುವರೆಗೂ ಆಡಿರೋ ಪಂದ್ಯಗಳಲ್ಲಿ 55 ಸರಾಸರಿಯಲ್ಲಿ 167 ರನ್ ಗಳಿಸಿದ್ದಾರೆ. ತಮ್ಮ ಬ್ಯಾಟ್‌ನಿಂದ ಒಟ್ಟು 14 ಸಿಕ್ಸರ್‌ ಜತೆಗೆ 11 ಫೋರ್​​ ಬಾರಿಸಿದ್ದಾರೆ.

ಇದನ್ನೂ ಓದಿ:ಬಹುನಿರೀಕ್ಷಿತ 2025ರ ಐಪಿಎಲ್​ ಸೀಸನ್​​ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟ ಬಿಸಿಸಿಐ; ಏನದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment