/newsfirstlive-kannada/media/post_attachments/wp-content/uploads/2025/04/TIM_DEVID_RCB.jpg)
ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಐಪಿಎಲ್ ಪಂದ್ಯ ಆಡುತ್ತಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಆರಂಭದಲ್ಲಿ ಘರ್ಜನೆ ಮಾಡಿ, ಪಂದ್ಯದ ನಡುವೆ ಪ್ರಮುಖ ವಿಕೆಟ್​ಗಳನ್ನ ಕಳೆದುಕೊಂಡು ಅಲ್ಪಮೊತ್ತದ ಗುರಿ ನೀಡಿದೆ. ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 164 ರನ್​ಗಳ ಟಾರ್ಗೆಟ್ ನೀಡಿದೆ.
​ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್, ಆರ್​ಸಿಬಿಯನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಬೆಂಗಳೂರು ಪರ ಆರಂಭಿಕ ಬ್ಯಾಟರ್ ಆಗಿ ಕ್ರೀಸ್​ಗೆ ಆಗಮಿಸಿದ ಫಿಲಿಪ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಒಳ್ಳೆಯ ಆರಂಭ ಪಡೆದರೂ ಇನ್ನು ಕೆಲ ಸಮಯ ಕ್ರೀಸ್​ನಲ್ಲಿ ಇರಬೇಕಿತ್ತು. ಆದರೆ ಆತುರದಿಂದಲೇ ಫಿಲಿಪ್ ಸಾಲ್ಟ್​ ವಿಕೆಟ್ ಒಪ್ಪಿಸಿದ್ದಾರೆ.
ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್​ನಲ್ಲಿ ಸಾಲ್ಟ್, ಜೋರಾಗಿ ಶಾಟ್ ಮಾಡಿ ರನ್​ ಗಳಿಸಲು ಮುಂದಾಗಿ ಅರ್ಧ ಪಿಚ್​ವರೆಗೆ ಹೋಗಿ ಹಿಂದಕ್ಕೆ ಬರಲು ಯತ್ನಿಸಿದರು. ಆದರೆ ಇನ್ನೊಂದು ಬದಿಯಲ್ಲಿದ್ದ ವಿರಾಟ್​ ಕೊಹ್ಲಿ ರನ್​ ಓಡಲು ಹೋಗಿ ಮತ್ತೆ ಹಿಂದಕ್ಕೆ ಬಂದರು. ತಕ್ಷಣ ಬಾಲ್ ವಿಕೆಟ್​ ಕೀಪರ್ ಕೆ.ಎಲ್​ ರಾಹುಲ್​ಗೆ ಎಸೆದಿದ್ದರಿಂದ ಸ್ಟಂಪ್​ ಮಾಡಿ ಸಾಲ್ಟ್​ ಅವರನ್ನು 37 ರನ್​​ಗೆ ಔಟ್ ಮಾಡಿದರು.
ಇದನ್ನೂ ಓದಿ: ಥಲಾ ಫ್ಯಾನ್ಸ್‌ಗೆ ಗುಡ್‌ನ್ಯೂಸ್.. ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೆ ಧೋನಿ ಕ್ಯಾಪ್ಟನ್!
3ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಆಗಮಿಸಿದ ದೇವದತ್ ಪಡಿಕ್ಕಲ್ ಒಂದು ರನ್​ಗೆ ಹೀಗೆ ಬಂದು ಹಾಗೇ ಹೊರ ನಡೆದರು. ಪಡಿಕ್ಕಲ್​ ಬೆನ್ನಲ್ಲೇ ವಿರಾಟ್​ ಕೊಹ್ಲಿ (22) ಕೂಡ ಮಿಚೆಲ್​ ಸ್ಟಾರ್ಕ್​ಗೆ ಕ್ಯಾಚ್ ಕೊಟ್ಟು ವಿಕೆಟ್​ ಒಪ್ಪಿಸಿದರು. ರಜತ್ ಪಾಟಿದಾರ್ 25 ರನ್​ಗಳಿಂದ ಡೆಲ್ಲಿ ಬೌಲರ್ಸ್​ಗಳನ್ನು ಕಾಡಿದರು. ರಜತ್ ಒಂದು ಜೀವದಾನ ಪಡೆದರು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲಿಲ್ಲ.
ಆಲ್​ರೌಂಡರ್​ ಕೃನಾಲ್ ಪಾಂಡ್ಯ ಹಾಗೂ ಟಿಮ್​ ಡೇವಿಡ್​ ಬೌಲರ್​ಗಳಿಗೆ ಬೆವರಿಳಿಸಿ ಆರ್​ಸಿಬಿಯ ರನ್​ಗಳನ್ನು 150ರ ಗಡಿ ದಾಟಿಸಿದರು. ಪಾಂಡ್ಯ 18 ಎಸೆತಗಳಿಗೆ 18 ರನ್ ಗಳಿಸಿದ್ರೆ, ಡೇವಿಡ್ 20 ಬಾಲ್​ಗಳಲ್ಲಿ 2 ಫೋರ್ ಹಾಗೂ 4 ಭರ್ಜರಿ ಸಿಕ್ಸರ್​ಗಳಿಂದ 37 ರನ್​ಗಳಿಸಿದರು. ಇವರ ಬ್ಯಾಟಿಂಗ್ ಬಲದಿಂದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್​ಗಳ ಟಾರ್ಗೆಟ್ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ