/newsfirstlive-kannada/media/post_attachments/wp-content/uploads/2025/05/JACOB-BETHELL.jpg)
ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ-ಆಫ್ ಪ್ರವೇಶ ಮಾಡಿದೆ. ಪ್ಲೇ-ಆಫ್ನಲ್ಲಿ ಗೆದ್ದು ಫೈನಲ್ಗೆ ಎಂಟ್ರಿ ನೀಡುವ ಹುಮ್ಮಸ್ಸಿನಲ್ಲಿರುವ ಆರ್ಸಿಬಿಗೆ, ವಿದೇಶಿ ಆಟಗಾರರ ಅಲಭ್ಯತೆ ಎದುರಾಗಿದೆ. ನ್ಯಾಷನಲ್ ಟೀಂ ಡ್ಯೂಟಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸ್ಫೋಟಕ ಬ್ಯಾಟರ್, ಜಕೊಬ್ ಬೆಥಲ್ ಪ್ಲೇ-ಆಫ್ನಲ್ಲಿ ಆಡ್ತಿಲ್ಲ.
ಈ ಹಿನ್ನೆಲೆಯಲ್ಲಿ ಅವರ ಬದಲಿಗೆ ಆರ್ಸಿಬಿ ಮತ್ತೊಬ್ಬ ಆಟಗಾರನ ಕರೆದುಕೊಂಡು ಬಂದಿದೆ. ನ್ಯೂಜಿಲೆಂಡ್ನ ಹೊಡಿಬಡಿ ದಾಂಡಿಗ ಟಿಮ್ ಸೈಫೆರ್ಟ್ (Tim Seifert) ಜೊತೆ ಆರ್ಸಿಬಿ ಒಪ್ಪಂದ ಮಾಡಿಕೊಂಡಿದೆ. ನಾಳೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ಲಕ್ನೋದಲ್ಲಿ ಸೆಣಸಾಟ ನಡೆಸಲಿದೆ.
ಇದನ್ನೂ ಓದಿ: ರಾಯಲ್ ಚಾಲೆಂಜರ್ಸ್ ಮುಂದೆ 5 ಚಾಲೆಂಜ್ಗಳು.. RCB ಟಾರ್ಗೆಟ್ ಏನು ಗೊತ್ತಾ?
ಈ ಪಂದ್ಯದ ಬಳಿಕ ಬೆಥೆಲ್, ಆರ್ಸಿಬಿ ತಂಡವನ್ನು ತೊರೆಯಲಿದ್ದಾರೆ. ಮೇ 24 ರಂದು ನ್ಯೂಜಿಲೆಂಡ್ ಆಟಗಾರ ಟಿಮ್, ಆರ್ಸಿಬಿ ಕ್ಯಾಂಪ್ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿರುವ ಟಿಮ್ಗೆ 2 ಕೋಟಿ ನೀಡಿ ಕರೆದುಕೊಂಡು ಬಂದಿದೆ.
ಆರ್ಸಿಬಿ ಐಪಿಎಲ್ನ ಲೀಗ್ ಹಂತದಲ್ಲಿ 12 ಮ್ಯಾಚ್ಗಳನ್ನ ಆಡಿ, ಪಾಯಿಂಟ್ಸ್ ಟೇಬಲ್ನಲ್ಲಿ 17 ಅಂಕಗಳಿಸಿದೆ, ಆರ್ಸಿಬಿಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ನಾಳೆ ಹೈದರಾಬಾದ್ ವಿರುದ್ಧ ನಡೆದರೆ, ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ಅಲ್ಲವೇ ಅಲ್ಲ.. RCBಗೆ ಅಸಲಿ ವಿಲನ್ ಯಾರು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ