R ಅಶ್ವಿನ್​ ಬೆನ್ನಲ್ಲೇ ದಿಢೀರ್​ ನಿವೃತ್ತಿ ಘೋಷಿಸಿ ಬಿಗ್​​ ಶಾಕ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​!

author-image
Ganesh Nachikethu
Updated On
R ಅಶ್ವಿನ್​ ಬೆನ್ನಲ್ಲೇ ದಿಢೀರ್​ ನಿವೃತ್ತಿ ಘೋಷಿಸಿ ಬಿಗ್​​ ಶಾಕ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​!
Advertisment
  • ಆರ್​​. ಅಶ್ವಿನ್ ಬೆನ್ನಲ್ಲೇ​​ ಬಿಗ್​ ಶಾಕ್​​ ಕೊಟ್ಟ ಸ್ಟಾರ್​ ಕ್ರಿಕೆಟರ್​!
  • ಅಂತರಾಷ್ಟ್ರೀಯ ಕ್ರಿಕೆಟ್​​ ಜೀವನಕ್ಕೆ ವಿದಾಯ ಘೋಷಿಸಿ ಶಾಕ್​
  • 16 ವರ್ಷಗಳ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದು ಅಚ್ಚರಿ ಮೂಡಿಸಿದ್ರು

ಇತ್ತೀಚೆಗಷ್ಟೇ ಟೀಮ್​ ಇಂಡಿಯಾದ ಅನುಭವಿ ಆಟಗಾರ ಆರ್​​. ಅಶ್ವಿನ್​​ ಅಂತರಾಷ್ಟ್ರೀಯ ಕ್ರಿಕೆಟ್​​ ಜೀವನಕ್ಕೆ ವಿದಾಯ ಘೋಷಿಸಿ ಶಾಕ್​ ನೀಡಿದ್ರು. ಈ ಬೆನ್ನಲ್ಲೇ ನ್ಯೂಜಿಲೆಂಡ್‌ ತಂಡದ ಸ್ಟಾರ್ ಬೌಲರ್ ಟಿಮ್ ಸೌಥಿ ತಮ್ಮ 16 ವರ್ಷಗಳ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಮಧ್ಯೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಿತು. ಈ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-1 ಅಂತರದಲ್ಲಿ ಗೆದ್ದು ಬೀಗಿದೆ. ಹ್ಯಾಮಿಲ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟಿಮ್ ಸೌಥಿ ತಮ್ಮ ಕೊನೆಯ ಟೆಸ್ಟ್​ ಆಡಿದ್ರು. ಈ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 423 ರನ್‌ಗಳ ದಾಖಲೆ ಗೆಲುವನ್ನು ನ್ಯೂಜಿಲೆಂಡ್ ಸಾಧಿಸಿದೆ. ಈ ಬೆನ್ನಲ್ಲೇ ಟಿಮ್​ ಸೌಥಿ ನಿವೃತ್ತಿ ಘೋಷಿಸಿ ಶಾಕ್​ ಕೊಟ್ಟರು.

publive-image

ಯಾರು ಈ ಟಿಮ್​ ಸೌಥಿ?

ಟಿಮ್ ಸೌಥಿ 2008ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈಗ ಅದೇ ತಂಡದ ವಿರುದ್ಧ ಕೊನೆಯ ಟೆಸ್ಟ್​ ಆಡಿ ನಿವೃತ್ತಿಯಾಗಿದ್ದು ವಿಶೇಷ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಟಿಮ್​ ಸೌಥಿ 107 ಟೆಸ್ಟ್ ಪಂದ್ಯಗಳಲ್ಲಿ 30.26 ಸರಾಸರಿ ಜತೆಗೆ 391 ವಿಕೆಟ್‌ ಕಬಳಿಸಿದ್ದಾರೆ. 2245 ರನ್‌ ಕಲೆ ಹಾಕಿರುವ ಇವರು 7 ಅರ್ಧಶತಕ ಬಾರಿಸಿದ್ದಾರೆ. 161 ಏಕದಿನ ಪಂದ್ಯಗಳಲ್ಲಿ 221 ವಿಕೆಟ್ ಪಡೆದರೆ, 125 ಟಿ20 ಪಂದ್ಯಗಳಲ್ಲಿ 164 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸೌಥಿ ಕೂಡ 54 ಐಪಿಎಲ್ ಪಂದ್ಯ ಆಡಿದ್ದು, 47 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ:ಸಿ.ಟಿ ರವಿ ರಿಲೀಸ್​ಗೆ ಹೈಕೋರ್ಟ್​ ಸೂಚನೆ; ಕಾನೂನು ಪಾಲಿಸದ ಪೊಲೀಸರಿಗೆ ಛೀಮಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment