ಭಾರತ, ನ್ಯೂಜಿಲೆಂಡ್​ ಟೆಸ್ಟ್​; ಕ್ಯಾಪ್ಟನ್ಸಿಗೆ ದಿಢೀರ್​​ ರಾಜೀನಾಮೆ ಘೋಷಿಸಿ ಶಾಕ್​ ಕೊಟ್ಟ ಕ್ರಿಕೆಟರ್​​!

author-image
Ganesh Nachikethu
Updated On
ಭಾರತ, ನ್ಯೂಜಿಲೆಂಡ್​ ಟೆಸ್ಟ್​; ಕ್ಯಾಪ್ಟನ್ಸಿಗೆ ದಿಢೀರ್​​ ರಾಜೀನಾಮೆ ಘೋಷಿಸಿ ಶಾಕ್​ ಕೊಟ್ಟ ಕ್ರಿಕೆಟರ್​​!
Advertisment
  • ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ತಂಡದ ನಡುವೆ ಟೆಸ್ಟ್​ ಸೀರೀಸ್​​
  • ಅಕ್ಟೋಬರ್ 16ನೇ ತಾರೀಕಿನಿಂದ 3 ಪಂದ್ಯಗಳ ಟೆಸ್ಟ್ ಸರಣಿ ಶುರು!
  • ಈ ಮುನ್ನ ಕ್ಯಾಪ್ಟನ್ಸಿಗೆ ದಿಢೀರ್​ ರಾಜೀನಾಮೆ ಘೋಷಿಸಿದ ಸ್ಟಾರ್​​ ಪ್ಲೇಯರ್​

ಇತ್ತೀಚೆಗಷ್ಟೇ ಪಾಕ್​​ ತಂಡದ ಕ್ಯಾಪ್ಟನ್ಸಿಗೆ ಬಾಬರ್​ ಅಜಂ ರಾಜೀನಾಮೆ ನೀಡಿ ಶಾಕ್​ ಕೊಟ್ಟಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ಸ್ಟಾರ್​ ಕ್ರಿಕೆಟರ್​​ ಕ್ಯಾಪ್ಟನ್ಸಿಗೆ ರಾಜೀನಾಮೆ ಘೋಷಿಸಿದ್ದಾರೆ. ವೇಗದ ಬೌಲರ್ ಟಿಮ್ ಸೌಥಿ ನ್ಯೂಜಿಲೆಂಡ್‌ ಟೆಸ್ಟ್ ನಾಯಕತ್ವ ತೊರೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಮಧ್ಯೆ ಟೆಸ್ಟ್​ ಸೀರೀಸ್​ ನಡೆಯಲಿದೆ. ನ್ಯೂಜಿಲೆಂಡ್ ತಂಡ ಅಕ್ಟೋಬರ್ 16ನೇ ತಾರೀಕಿನಿಂದ 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೂ ಮುನ್ನ ಟಿಮ್ ಸೌಥಿ ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಕಾರಣ ಶ್ರೀಲಂಕಾ ವಿರುದ್ಧದ ಹೀನಾಯ ಸೋಲು ಎಂದು ವರದಿಯಾಗಿದೆ.

ಟಿಮ್ ಸೌಥಿ ಟೆಸ್ಟ್ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ತಂಡದ ಸ್ಟಾರ್​ ಆಟಗಾರ ಟಾಮ್ ಲ್ಯಾಥಮ್​ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಈಗಾಗಲೇ ಲ್ಯಾಥಮ್ ಏಕದಿನ ಮತ್ತು ಟಿ20 ಕ್ರಿಕೆಟ್​ ಮಾದರಿಯಲ್ಲಿ ನ್ಯೂಜಿಲೆಂಡ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಭಾರತ ವಿರುದ್ಧ ಟೆಸ್ಟ್ ಸರಣಿಯಿಂದ ನ್ಯೂಜಿಲೆಂಡ್‌ ತಂಡವನ್ನು ಮೂರು ಮಾದರಿಯಲ್ಲೂ ಮುನ್ನಡೆಸಲಿದ್ದಾರೆ.

ಯಾರು ಈ ಸೌಥಿ..?

ಕೇನ್ ವಿಲಿಯಮ್ಸನ್ ನಾಯಕತ್ವದಿಂದ ಕೆಳಗಿಳಿದ ನಂತರ ಟಿಮ್ ಸೌಥಿ ನ್ಯೂಜಿಲೆಂಡ್ ಟೆಸ್ಟ್ ತಂಡದ ಕ್ಯಾಪ್ಟನ್​ ಆಗಿದ್ರು. ಸೌಥಿ ನಾಯಕತ್ವದಲ್ಲಿ ನ್ಯೂಜಿಲೆಂಡ್​​ 14 ಟೆಸ್ಟ್​ ಆಡಿದ್ದು, ತಲಾ 6 ಪಂದ್ಯಗಲ್ಲಿ ಸೋಲು ಗೆಲುವು ಕಂಡಿದೆ. 2 ಪಂದ್ಯಗಳಲ್ಲಿ ಮಾತ್ರ ಡ್ರಾ ಆಗಿದೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಟಿ20 ಪಂದ್ಯ; ಟೀಮ್​ ಇಂಡಿಯಾದಿಂದ ಸ್ಟಾರ್​ ಆಟಗಾರರಿಗೆ ಕೊಕ್​​; ಯಾರಿಗೆ ಚಾನ್ಸ್?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment